Thursday, June 4, 2026
Homeಕರಾವಳಿಉಡುಪಿಹಿಜಾಬ್ ವಿಚಾರದಲ್ಲಿ; ಸುಪ್ರೀಂ ಕೋರ್ಟ್ ನಿಂದ ಆರಂಭಿಕ ಜಯ ಸಿಕ್ಕಿದೆ; ಬಿಜೆಪಿ ಓಬಿಸಿ ಮೋರ್ಛಾ ರಾಷ್ಟ್ರೀಯ...

ಹಿಜಾಬ್ ವಿಚಾರದಲ್ಲಿ; ಸುಪ್ರೀಂ ಕೋರ್ಟ್ ನಿಂದ ಆರಂಭಿಕ ಜಯ ಸಿಕ್ಕಿದೆ; ಬಿಜೆಪಿ ಓಬಿಸಿ ಮೋರ್ಛಾ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಯಶ್ ಪಾಲ್ ಸುವರ್ಣ ಹೇಳಿಕೆ

- Advertisement -
- Advertisement -

ವಿಜಯಪುರ: ಹಿಜಾಬ್ ವಿಚಾರದಲ್ಲಿ  ಸುಪ್ರೀಂ ಕೋರ್ಟ್ ನಿಂದ ಆರಂಭಿಕ ಜಯ ಸಿಕ್ಕಿದ್ದು, ಮುಂದೆಯೂ ಉತ್ತಮ ಆದೇಶ ಬರುವ ನಿರೀಕ್ಷೆ ಇದೆ ಎಂದು  ಬಿಜೆಪಿ ಓಬಿಸಿ ಮೋರ್ಛಾ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಯಶ್ ಪಾಲ್ ಸುವರ್ಣ ಹೇಳಿದ್ದಾರೆ.

ವಿಜಯಪುರದಲ್ಲಿ ಇಂದು ಮಾತನಾಡಿದ ಯಶಪಾಲ್ ಸುವರ್ಣ, ಹಿಜಾಬ್ ವಿದ್ಯಾರ್ಥಿನಿಯರು ಬಡ ವಿದ್ಯಾರ್ಥಿಗಳ ದಿಕ್ಕು ತಪ್ಪಿಸಿದ್ದರಲ್ಲದೇ ಶಿಕ್ಷಣದ ವ್ಯವಸ್ಥೆ ಹಾಳು ಮಾಡಿದ್ದರು ಎಂದು ಹೇಳಿದ್ದಾರೆ. ಅಲ್ಲದೇ ಹಿಬಾಜ್ ವಿದ್ಯಾರ್ಥಿನಿಯರ ನಾಟಕದಿಂದಾಗಿ ಇಷ್ಟೆಲ್ಲಾ ಸಮಸ್ಯೆ ಉಂಟಾಗಿದೆ ಎಂದು ಹೇಳಿರುವ ಯಶಪಾಲ್ ಸುವರ್ಣ, ಮಕ್ಕಳ ಜೀವನದಲ್ಲಿ ಅವರು ಚೆಲ್ಲಾಟ ಆಡಿದ್ದಾರೆ

ವಿದ್ಯಾರ್ಥಿನಿಯರಿಗೆ ಭಯೋತ್ಪಾದನಾ ಲಿಂಕ್ ಇರುವ ಬಗ್ಗೆ ನಾನು ಮಾತನಾಡಿದ್ದೆ. ಇವರಿಗೆ ಸಪೋರ್ಟ್ ನೀಡಿದವರೆಲ್ಲಾ ಈಗ ಜೈಲಲ್ಲಿದ್ದಾರೆ ಎಂದು ಹೇಳಿದ್ದಾರೆ.

- Advertisement -

Latest News

error: Content is protected !!