Friday, June 5, 2026
Homeತಾಜಾ ಸುದ್ದಿಚುನಾವಣಾ ಪ್ರಣಾಳಿಕೆಯಲ್ಲಿ ಹೆಣ್ಣಕ್ಕಳಿಗೆ ಬಂಪರ್ ಆಫರ್ ನೀಡಿದ ಅಭ್ಯರ್ಥಿ; ಗೆದ್ದರೆ ಹೆಣ್ಣುಮಕ್ಕಳಿಗೆ ಉಚಿತ ಮೇಕಪ್​ ಕಿಟ್...

ಚುನಾವಣಾ ಪ್ರಣಾಳಿಕೆಯಲ್ಲಿ ಹೆಣ್ಣಕ್ಕಳಿಗೆ ಬಂಪರ್ ಆಫರ್ ನೀಡಿದ ಅಭ್ಯರ್ಥಿ; ಗೆದ್ದರೆ ಹೆಣ್ಣುಮಕ್ಕಳಿಗೆ ಉಚಿತ ಮೇಕಪ್​ ಕಿಟ್ ಎಂದು ಘೋಷಣೆ

- Advertisement -
- Advertisement -

ಹರ್ಯಾಣ;  ಇಲ್ಲಿನ ಸಿರ್ಸಾದ್​ ಗ್ರಾಮದ ಸರ್ಪಂಚ್ ಹುದ್ದೆಗೆ ಸ್ಪರ್ಧಿಸಿರುವ ಅಭ್ಯರ್ಥಿಯೊಬ್ಬರ ಚುನಾವಣೆ ಪ್ರಣಾಳಿಕೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಚುನಾವಣೆ ಪ್ರಣಾಳಿಕೆ ಓದಿದ ಅನೇಕರು ಸುಸ್ತಾಗಿ ಹೋಗಿದ್ದಾರೆ.

ಐಪಿಎಸ್​ ಅಧಿಕಾರಿ ಅರುಣ್ ಬೋಥ್ರಾ ಈ ಚುನಾವಣಾ ಪ್ರಣಾಳಿಕೆಯನ್ನು ಟ್ವೀಟ್ ಮಾಡಿದ್ದು,’ನಾನು ಈ ಗ್ರಾಮಕ್ಕೆ ಶಿಫ್ಟ್​ ಅಗುತ್ತಿದ್ದೇನೆ’ಎಂದು ಬರೆದಿದ್ದಾರೆ‌. ಜೈಕರಣ್​ ಲಾಥ್ವಾಲ್​ ಎಂಬವರ ಚುನಾವಣಾ ಪ್ರಣಾಳಿಕೆಯಲ್ಲಿ ಚುನಾವಣೆಯಲ್ಲಿ ಗೆದ್ದರೆ, ಮೂರು ವಿಮಾನ ನಿಲ್ದಾಣಗಳು, ಹೆಣ್ಣುಮಕ್ಕಳಿಗೆ ಉಚಿತ ಮೇಕಪ್​ ಕಿಟ್, ಪ್ರತೀ ಕುಟುಂಬಕ್ಕೆ ಉಚಿತ ಬೈಕು, ವೈಫೈ, ಪೆಟ್ರೋಲ್​ ಬೆಲೆಯಲ್ಲಿ ಪ್ರತೀ ಲೀಟರ್​ಗೆ ರೂ.20 ಇಳಿಕೆ, ಜಿಎಸ್​ಟಿ ರದ್ದು ಮಾಡುತ್ತೇನೆ ಎಂದು ಬರೆದಿದ್ದಾರೆ.

ಐಪಿಎಸ್​ ಅಧಿಕಾರಿ ಅರುಣ್ ಬೋಥ್ರಾ ಈ ಕರಪತ್ರವನ್ನು ಟ್ವೀಟ್ ಮಾಡುತ್ತಿದ್ದಂತೆ ನೆಟ್ಟಿಗರು ನಾವು ಕೂಡ ಅದೇ ಗ್ರಾಮಕ್ಕೆ ಹೋಗುವ ಎಂದು ವಿಭಿನ್ನವಾಗಿ ಟ್ವೀಟ್ ಮಾಡಿದ್ದಾರೆ‌ ಮತ್ತು ಆ ಗ್ರಾಮ ಎಲ್ಲಿದೆ ಎಂದು ಪ್ರಶ್ನಿಸಿದ್ದಾರೆ.

- Advertisement -

Latest News

error: Content is protected !!