Sunday, June 7, 2026
Homeಕರಾವಳಿಉಡುಪಿಮೂಡುಬಿದಿರೆ: ಬಾವಿಗೆ ಹಾರಿದ ಯುವತಿಯ ರಕ್ಷಣೆ

ಮೂಡುಬಿದಿರೆ: ಬಾವಿಗೆ ಹಾರಿದ ಯುವತಿಯ ರಕ್ಷಣೆ

- Advertisement -
- Advertisement -

ಮೂಡುಬಿದಿರೆ: ಯುವತಿಯೊಬ್ಬಳು ಬಾವಿಗೆ ಹಾರಿದ್ದು ಆಕೆಯನ್ನು ಅಗ್ನಿಶಾಮಕದಳ ಸಿಬ್ಬಂದಿ ರಕ್ಷಿಸಿದ ಘಟನೆ ಮೂಡುಬಿದಿರೆ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.  

ತಮಿಳುನಾಡು ಮೂಲದ  ವಿಶಾಲ್ ನಗರದ ನಿವಾಸಿ ರಾಬಿತ್ ಎಂಬುವರ ಪುತ್ರಿ ನಿವೇದಿತಾ(22) ಬಾವಿಗೆ ಹಾರಿದ ಯುವತಿ.

ಈಕೆ ಬಾವಿಗೆ ಬಿದ್ದ ವಿಚಾರ ತಿಳಿಯುತ್ತಿದ್ದಂತೆ ತಕ್ಷಣ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಸಹಾಯಕ ಠಾಣಾಧಿಕಾರಿ ಸ್ಟೀಫನ್ ಡಿಸಿಲ್ವ ಅವರ ನೇತೃತ್ವದ ತಂಡ ಯುವತಿಯನ್ನು ಬಾವಿಯಿಂದ ಮೇಲಕ್ಕೆತ್ತಿ ರಕ್ಷಿಸಿದ್ದಾರೆ.

- Advertisement -

Latest News

error: Content is protected !!