Saturday, June 6, 2026
Homeಕರಾವಳಿವಿಟ್ಲ; ಬಾಲಕಿಯರ ಮೇಲೆ ಹಲ್ಲೆ ಪ್ರಕರಣ; ಸ್ವಯಂಪ್ರೇರಿತ ದೂರು ದಾಖಲಿಸಿದ ಪೊಲೀಸರು

ವಿಟ್ಲ; ಬಾಲಕಿಯರ ಮೇಲೆ ಹಲ್ಲೆ ಪ್ರಕರಣ; ಸ್ವಯಂಪ್ರೇರಿತ ದೂರು ದಾಖಲಿಸಿದ ಪೊಲೀಸರು

- Advertisement -
- Advertisement -

ವಿಟ್ಲ;  ನಾಪತ್ತೆಯಾಗಿರುವ ಬಾಲಕಿಯರು ಎಂದು ಬೇರೆ ಬಾಲಕಿಯರಿಗೆ ಹಲ್ಲೆ ನಡೆಸಿದ ಪ್ರಕರಣ ಎರಡು ಕಡೆಯವರು ರಾಜಿ ನಡೆಸಿದ ಬಳಿಕ  ಇತ್ಯರ್ಥವಾಗಿತ್ತು. ಆದರೆ ಇದೀಗ ಪೊಲೀಸರು ಓರ್ವ ಆರೋಪಿ ಮೇಲೆ ಶಾಂತಿ ಭಂಗ ಕೇಸ್ ದಾಖಲಿಸಿದ್ದಾರೆ ಎನ್ನಲಾಗಿದೆ.ಕರೈ ನಿವಾಸಿ ಆರಿಫ್ ಎಂಬಾತನ ಮೇಲೆ ಸಾರ್ವಜನಿಕ ಶಾಂತಿ ಭಂಗ ಕೇಸ್ ದಾಖಲಿಸಿದ್ದಾರೆ ಎನ್ನಲಾಗಿದೆ.

ಸಾಲೆತ್ತೂರು ನಿವಾಸಿ ಆಟೋ ಚಾಲಕರೊಬ್ಬರ ಪುತ್ರಿ ತನ್ನ ಸ್ನೇಹಿತೆ ಮತ್ತೊಬ್ಬಳು ಬಾಲಕಿ ಜತೆ ಮನೆಯಲ್ಲಿ ಯಾರಲ್ಲಿಯೂ ಹೇಳದೇ ಮನೆಬಿಟ್ಟು ತೆರಳಿದ್ದರು.‌ ಈ ಬಗ್ಗೆ ಎಲ್ಲಾ ಕಡೆ ಹುಡುಕಾಡಿದರೂ ಯಾವುದೇ ಸುಳಿವು ಸಿಕ್ಕಿರಲಿಲ್ಲ.ಬಳಿಕ ಕೆಲ ಯುವಕರು ಅವರನ್ನು ಹುಡುಕಲು ಪ್ರಾರಂಭಿಸಿದ್ದಾರೆ. ವಿಟ್ಲದಲ್ಲಿ ಹುಡುಕಾಡುತ್ತಿದ್ದಾಗ ಕುದ್ದುಪದವು ಮೂಲದ ಇಬ್ಬರು ಯುವತಿಯರು ಕಾಣಿಸಿದ್ದು, ಅವರು ಬುರ್ಖಾ ಧರಿಸಿದ್ದರು. ನಾಪತ್ತೆಯಾದ ಬಾಲಕಿಯರೆಂದು ಅವರಿಗೆ ತಪ್ಪಾಗಿ ಯುವಕರು ಹಲ್ಲೆ ನಡೆಸಿರುವ ಆರೋಪ ಕೇಳಿ ಬಂದಿದೆ.

ನಾಪತ್ತೆಯಾಗಿದ್ದ ಇಬ್ಬರು ಪುತ್ತೂರು ಬಸ್ ನಿಲ್ದಾಣದಲ್ಲಿ ಸಿಕ್ಕಿದ್ದು, ಅವರನ್ನು ವಿಟ್ಲ ಠಾಣೆಗೆ ಕರೆಯಿಸಿ, ಬುದ್ದಿವಾದ ಹೇಳಿ ಮನೆಯವರ ಜತೆ ಕಳುಹಿಸಿಕೊಟ್ಟಿದ್ದಾರೆ.

- Advertisement -

Latest News

error: Content is protected !!