Saturday, June 6, 2026
Homeತಾಜಾ ಸುದ್ದಿಕರ್ನಾಟಕ ಹೈಕೋರ್ಟ್ ನ ಮುಖ್ಯ ನ್ಯಾಯಮೂರ್ತಿಯಾಗಿ `ನ್ಯಾ. ಪ್ರಸನ್ನ ಬಿ.ವರಾಳೆ' ನೇಮಕ

ಕರ್ನಾಟಕ ಹೈಕೋರ್ಟ್ ನ ಮುಖ್ಯ ನ್ಯಾಯಮೂರ್ತಿಯಾಗಿ `ನ್ಯಾ. ಪ್ರಸನ್ನ ಬಿ.ವರಾಳೆ’ ನೇಮಕ

- Advertisement -
- Advertisement -

ಬೆಂಗಳೂರು : ನ್ಯಾಯಮೂರ್ತಿ ಪ್ರಸನ್ನ ಬಿ.ವರಾಳೆ ಅವರನ್ನು ಕರ್ನಾಟಕದ ಹೈಕೋರ್ಟ್​ನ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕ ಮಾಡಿ ಅಧಿಸೂಚನೆ ಹೊರಡಿಸಿದೆ.

ಕೊಲಿಜಿಯಂ ಸೆಪ್ಟೆಂಬರ್ 28 ರಂದು ನ್ಯಾಯಮೂರ್ತಿ ವರಾಳೆ ಅವರ ಉನ್ನತಿ ಶಿಫಾರಸು ಮಾಡಿತ್ತು. ನ್ಯಾ. ವರಾಳೆ ಅವರು 1962 ಜೂನ್ 23ರಂದು ಜನಿಸಿದ್ದು, 1985ರ ಆಗಸ್ಟ್ 12 ರಂದು ವಕೀಲರಾಗಿ ಸೇವೆ ಆರಂಭಿಸಿದರು. ಬಳಿಕ 1990ರಿಂದ 1992ರವರೆಗೆ ಔರಂಗಾಬಾದ್​ನ ಅಂಬೇಡ್ಕರ್ ಕಾನೂನು ಕಾಲೇಜಿನಲ್ಲಿ ಕಾನೂನು ಉಪನ್ಯಾಸಕರಾಗಿ ಮತ್ತು ಸಹಾಯ ಸರ್ಕಾರಿ ಮತ್ತು ಹೆಚ್ಚುವರಿ ಸರ್ಕಾರಿ ಅಭಿಯೋಜಕರಾಗಿ, ಹೈಕೋರ್ಟ್ ಪೀಠದಲ್ಲಿ ಸೇವೆ ಸಲ್ಲಿಸಿದ್ದಾರೆ.

- Advertisement -

Latest News

error: Content is protected !!