Thursday, June 4, 2026
Homeತಾಜಾ ಸುದ್ದಿದುಬೈಗೆ ತೆರಳಲು ಸಾಧ್ಯವಾಗಿಲ್ಲ ಎಂಬ ಕೋಪಕ್ಕೆ ಸಿಕ್ಕ ಸಿಕ್ಕವರಿಗೆ ಮೆಣಸಿನ ಪುಡಿ ಎರಚಿದ ಪಾಪಿ

ದುಬೈಗೆ ತೆರಳಲು ಸಾಧ್ಯವಾಗಿಲ್ಲ ಎಂಬ ಕೋಪಕ್ಕೆ ಸಿಕ್ಕ ಸಿಕ್ಕವರಿಗೆ ಮೆಣಸಿನ ಪುಡಿ ಎರಚಿದ ಪಾಪಿ

- Advertisement -
- Advertisement -

ಹೈದರಾಬಾದ್​: ದುಬೈಗೆ ತೆರಳಲು ಸಾಧ್ಯವಾಗಿಲ್ಲ ಎಂಬ ಕೋಪಕ್ಕೆವ್ಯಕ್ತಿಯೊಬ್ಬ ಸಹ ಪ್ರಯಾಣಿಕರಿಗೆ ಮೆಣಸಿನ ಪುಡಿ ಎರಚಿದ ಘಟನೆ ಹೈದರಾಬಾದ್ ನಲ್ಲಿ ನಡೆದಿದೆ.

ಪಶ್ಚಿಮ ಗೋದಾವರಿ ಜಿಲ್ಲೆಯ ಅಯೋಧ್ಯಾಲಂಕಾ ನಿವಾಸಿ ಉಂಡಾಲ ರಾಂಬಾಬು ದುಬೈಗೆ ತೆರಳಲು ಶಂಶಾಬಾದ್ ವಿಮಾನ ನಿಲ್ದಾಣಕ್ಕೆ ತೆರಳಿದ್ದ. ಈ ವೇಳೆ, ಅಲ್ಲಿನ ಅಧಿಕಾರಿಗಳು ನಿಮ್ಮ ಪಾಸ್‌ಪೋರ್ಟ್ ಮಾನ್ಯವಾಗಿಲ್ಲ ಎಂದು ವಾಪಾಸ್​ ಕಳುಹಿಸಿದ್ದಾರೆ.

ಅಲ್ಲಿಂದ ಹಿಂದಿರುಗಿ ರಾಂಬಾಬು ಹೈದರಾಬಾದ್‌ನಿಂದ ಹೊರಟಿದ್ದ ಬಸ್​ ಗೆ ಹತ್ತಿದ್ದಾನೆ. ಬಸ್​ ಪಾಲಕೊಳ್ಳು ಪೇಟೆ ತಲುಪುತ್ತಿದ್ದಂತೆ ರಾಂಬಾಬು ಪ್ರಯಾಣಿಕರ ಮೇಲೆ ಮೆಣಸಿನ ಪುಡಿ ಎರಚಿದ್ದಾನೆ.ಇದರಿಂದ ಸಹ ಪ್ರಯಾಣಿಕರು ಗಾಬರಿಗೊಂಡಿದ್ದು,ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಬಳಿಕ ಸ್ಥಳಕ್ಕಾಗಮಿಸಿದ ಪೊಲೀಸರು ರಾಂಬಾಬುವನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಈತ ದುಬೈ ಪ್ರಯಾಣ ಮಿಸ್ ಆದ ಕಾರಣ ಮನನೊಂದು ಕೃತ್ಯ ನಡೆಸಿರುವುದಾಗಿ ಹೇಳಿದ್ದಾನೆ.

- Advertisement -

Latest News

error: Content is protected !!