Wednesday, June 3, 2026
Homeಕರಾವಳಿಮಂಗಳೂರು; ಮಧ್ಯರಾತ್ರಿ ಸಾಮಾಜಿಕ ಕಾರ್ಯಕರ್ತ ಸುನೀಲ್ ಬಜಿಲಕೇರಿ ಅವರನ್ನು ವಶಕ್ಕೆ ಪಡೆದ ಪೊಲೀಸರು

ಮಂಗಳೂರು; ಮಧ್ಯರಾತ್ರಿ ಸಾಮಾಜಿಕ ಕಾರ್ಯಕರ್ತ ಸುನೀಲ್ ಬಜಿಲಕೇರಿ ಅವರನ್ನು ವಶಕ್ಕೆ ಪಡೆದ ಪೊಲೀಸರು

- Advertisement -
- Advertisement -

ಮಂಗಳೂರು; ಸಾಮಾಜಿಕ ಕಾರ್ಯಕರ್ತ ಸುನೀಲ್ ಬಜಿಲಕೇರಿ ಅವರನ್ನು ನಿನ್ನೆ ಮಧ್ಯರಾತ್ರಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಫೇಸ್ ಬುಕ್ ಪೋಸ್ಟ್ ವೊಂದಕ್ಕೆ ಸಂಬಂಧಿಸಿ ಮಧ್ಯರಾತ್ರಿ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ.

ಸುನೀಲ್ ಬಜಿಲಕೇರಿ ಅವರನ್ನು ವಶಕ್ಕೆ ಪಡೆದಿರೋದನ್ನು ಖಂಡಿಸಿ ಮುನೀರ್ ಕಾಟಿಪಳ್ಳ ಫೇಸ್ ಬುಕ್ ನಲ್ಲಿ ಪೋಸ್ಟ್ ಒಂದನ್ನು ಮಾಡಿದ್ದಾರೆ. ಸುನಿಲ್ ಬಜಿಲಕೇರಿಯ ಮಧ್ಯರಾತ್ರಿಯ ಬಂಧನ ನಾಚಿಕೆಗೇಡು.ಬಂಧನ ನಡೆಸುವ ಮುನ್ನ‌ ಆರೋಪಿಗೆ ಬಂಧನದ ಸ್ಪಷ್ಟ ಕಾರಣ ನೀಡಬೇಕಾಗುತ್ತದೆ.ಸಾಮಾಜಿಕ ಜಾಲತಾಣದ ಪ್ರಕರಣ ಆದರೆ ಸೈಬರ್ ವಿಭಾಗದ ಪೊಲೀಸರ ವ್ಯಾಪ್ತಿಗೆ ಬರುತ್ತದೆ. ನೋಟೀಸು ನೀಡಿ ವಿಚಾರಣೆಗೆ ಕರೆಸುವುದು ಕ್ರಮ. ಎಫ್ ಐ ಆಪ್  ಆಗಿದೆ ಅಂತ ಹೇಳಿ‌ ದೂರಿನ ವಿವರ ನೀಡದೆ ಬಲವಂತವಾಗಿ ಮನೆಗೆ ನುಗ್ಗಿ ಬಂಧಿಸುವುದು ಗೂಂಡಾಗಿರಿಯಾಗುತ್ತದೆ. ಮಂಗಳೂರು ಪೊಲೀಸರ ನಡೆ ಖಂಡನೀಯ. ಪೊಲೀಸ್ ಇಲಾಖೆ ಬಿಜೆಪಿಯ ಅಂಗ ಸಂಸ್ಥೆ ಅಲ್ಲ. ನ್ಯಾಯಯುತವಾಗಿ ನಡೆದುಕೊಳ್ಳಿ ಪೊಲೀಸರೇ.ಬಿಜೆಪಿಯ ಶಾಸಕರು ಶಾಶ್ವತ ಶಾಸಕರಲ್ಲ ಎಂದು ಮುನೀರ್ ಕಾಟಿಪಳ್ಳ ಪೋಸ್ಟ್ ನಲ್ಲಿ ಆಕ್ರೋಶ ಹೊರ ಹಾಕಿದ್ದಾರೆ.

ಸುನೀಲ್ ಬಜಿಲಕೇರಿ ವಿರುದ್ಧ ಬಜ್ಪೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದೆನ್ನಲಾಗಿದ್ದು, ಸದ್ಯ ಅವರನ್ನು ಉರ್ವ ಪೊಲೀಸ್ ಠಾಣೆಯಲ್ಲಿರಿಸಲಾಗಿದೆ ಎಂದು ತಿಳಿದು ಬಂದಿದೆ. ಶುಕ್ರವಾರ ತಡರಾತ್ರಿ ಸುನೀಲ್ ಬಜಿಲಕೇರಿ ಅವರ ಮನೆಗೆ ತೆರಳಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.ಸಂಘ ಪರಿವಾರದ ಮಾಜಿ ಕಾರ್ಯಕರ್ತ ಸುನೀಲ್ ಬಜೀಲಕೆರಿ ಅವರು ಬಿಜೆಪಿ ನಾಯಕರ ಕಾರ್ಯವೈಖರಿಯನ್ನು ಟೀಕಿಸುತ್ತಿದ್ದರು ಎನ್ನಲಾಗಿದೆ.

- Advertisement -

Latest News

error: Content is protected !!