Saturday, June 6, 2026
Homeತಾಜಾ ಸುದ್ದಿದೇವರನಾಡಿನಲ್ಲಿ ಭೀಕರ ಅಪಘಾತ; 9 ಮಂದಿ ದಾರುಣ ಸಾವು

ದೇವರನಾಡಿನಲ್ಲಿ ಭೀಕರ ಅಪಘಾತ; 9 ಮಂದಿ ದಾರುಣ ಸಾವು

- Advertisement -
- Advertisement -

ಕೇರಳ: ಭೀಕರ ಅಪಘಾತ ಸಂಭವಿಸಿ 9 ಮಂದಿ ದಾರುಣ ಸಾವನ್ನಪ್ಪಿರುವ ಘಟನೆ ಕೇರಳದ ಪಾಲಕ್ಕಾಡ್‌ನ ವಡಕ್ಕೆಂಚೇರಿ ಬಳಿಯ ಮಂಗಳಂ ಎಂಬಲ್ಲಿ ನಿನ್ನೆ ರಾತ್ರಿ ನಡೆದಿದೆ.

ಶಾಲಾ ವಿದ್ಯಾರ್ಥಿಗಳನ್ನು ಹೊತ್ತೊಯ್ಯುತ್ತಿದ್ದ ಟೂರಿಸ್ಟ್ ಬಸ್ಸೊಂದು ಕೆಎಸ್‌ಆರ್‌ಟಿಸಿ ಬಸ್‌ಗೆ ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ಒಂಬತ್ತು ಮಂದಿ ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ.

ಟೂರಿಸ್ಟ್ ಬಸ್‌ನಲ್ಲಿ ಒಟ್ಟು 42 ವಿದ್ಯಾರ್ಥಿಗಳಿದ್ದರು ಮತ್ತು ಕೆಎಸ್‌ಆ​ರ್​ಟಿಸಿ ಬಸ್​ನಲ್ಲಿ 49 ಜನ ಪ್ರಯಾಣಿಕರಿದ್ದರು ಎನ್ನಲಾಗಿದ್ದು, ಘಟನೆಯಲ್ಲಿ 9 ಮಂದಿ ಸಾವನ್ನಪ್ಪಿದ್ದಾರೆ.

ಮೃತರನ್ನು ಶಾಲಾ ಶಿಕ್ಷಕಿ ವಿಷ್ಣು ವಿಕೆ ಮತ್ತು ವಿದ್ಯಾರ್ಥಿಗಳಾದ ಅಂಜನಾ ಅಜಿತ್, ಇಮ್ಯಾನುಯೆಲ್ ಸಿಎಸ್, ದಿಯಾ ರಾಜೇಶ್, ಕ್ರಿಸ್ ವಿಂಟರ್‌ಬೋರ್ನ್ ಥಾಮಸ್, ಎಲ್ನಾ ಜೋಸ್ (ವಿದ್ಯಾರ್ಥಿಗಳು) ಮತ್ತು ಕೊಲ್ಲಂನ ವಲಿಯೋಡೆ ನಿವಾಸಿ ಅನೂಪ್ (22), ರೋಹಿತ್ ರಾಜ್ (24) ಮತ್ತು ದೀಪು (KSRTC ಪ್ರಯಾಣಿಕರು) ಎಂದು ಗುರುತಿಸಲಾಗಿದೆ.

ಘಟನೆಯಲ್ಲಿ ಗಾಯಗೊಂಡ ಸುಮಾರು 50 ಮಂದಿಯನ್ನು ಚಿಕಿತ್ಸೆಗಾಗಿ ಆಸ್ಪತ್ರೆಗಳಿಗೆ ರವಾನಿಸಲಾಗಿದೆ. ಹಲವರ ಸ್ಥಿತಿ ಚಿಂತಾಜನಕವಾಗಿದೆ.

- Advertisement -

Latest News

error: Content is protected !!