Friday, June 5, 2026
Homeಕರಾವಳಿಉಡುಪಿಉಡುಪಿ: ಪೂಜೆಗೆ ತೆರಳಿ ವಾಪಾಸ್‌ ಆಗುವ ವೇಳೆ ಕುಸಿದು ಬಿದ್ದು ಮಹಿಳೆ ಸಾವು

ಉಡುಪಿ: ಪೂಜೆಗೆ ತೆರಳಿ ವಾಪಾಸ್‌ ಆಗುವ ವೇಳೆ ಕುಸಿದು ಬಿದ್ದು ಮಹಿಳೆ ಸಾವು

- Advertisement -
- Advertisement -

ಉಡುಪಿ: ಪೂಜೆಗೆ ತೆರಳಿ ವಾಪಾಸ್‌ ಆಗುವ ವೇಳೆ ಕುಸಿದು ಬಿದ್ದು ಮಹಿಳೆಯೊಬ್ಬರು ಮೃತಪಟ್ಟ ಘಟನೆ ಉಡುಪಿ ಸಮೀಪದ ಮಣಿಪುರ ದೆಂದೂರುಕಟ್ಟೆಯಲ್ಲಿ ನಡೆದಿದೆ.

ಮಣಿಪುರ ದೆಂದೂರುಕಟ್ಟೆ, ಇಂದ್ರಾಳಿ ತೋಟದ ಗೌರಿ ಪೂಜಾರ್ತಿ (54) ಮೃತ ಮಹಿಳೆ. ಕುಸಿದು ಬಿದ್ದ ಕೂಡಲೇ ಗೌರಿ ಅವರನ್ನು ಕೂಡಲೇ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು. ಅಲ್ಲಿ ಪರಿಶೀಲಿಸಿದ ವೈದ್ಯರು ಮೃತಪಟ್ಟಿರುವುದಾಗಿ ಹೇಳಿದ್ದಾರೆ.

ಮಣಿಪಾಲದ ಆಸ್ಪತ್ರೆಯೊಂದರಲ್ಲಿ ಹೌಸ್‌ ಕೀಪಿಂಗ್‌ ಕೆಲಸ ಮಾಡಿಕೊಂಡಿದ್ದ ಗೌರಿ ಪೂಜಾರ್ತಿ ಕಳೆದ ಹಲವು ವರ್ಷಗಳಿಂದ ಉಬ್ಬಸ ಕಾಯಿಲೆಯಿಂದ ಬಳಲುತ್ತಿದ್ದರು ಎನ್ನಲಾಗಿದೆ. ಸೋಮವಾರ ಸಂಜೆ ಸುಮಾರು 3:45 ಗಂಟೆಗೆ ಸಂಬಂಧಿಕರ ಮನೆಯಲ್ಲಿನ ಪೂಜಾ ಕಾರ್ಯಕ್ರಮಕ್ಕೆ ಹೋಗಿ ಮನೆಗೆ ಮರಳಿ ಬರುವಾಗ ಕುಸಿದು ಬಿದ್ದಿದ್ದಾರೆ. ಮೃತರು ಇಬ್ಬರು ಪುತ್ರರನ್ನು ಅಗಲಿದ್ದಾರೆ. ಈ ಬಗ್ಗೆ ಕಾಪು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!