Saturday, April 27, 2024
Homeಕರಾವಳಿಉಡುಪಿ, ದಕ್ಷಿಣ ಕನ್ನಡ ಹಾಗೂ ಕಾಸರಗೋಡು ಜಿಲ್ಲೆಗಳ ಕಂಬಳ ವೇಳಾಪಟ್ಟಿ ಬಿಡುಗಡೆ

ಉಡುಪಿ, ದಕ್ಷಿಣ ಕನ್ನಡ ಹಾಗೂ ಕಾಸರಗೋಡು ಜಿಲ್ಲೆಗಳ ಕಂಬಳ ವೇಳಾಪಟ್ಟಿ ಬಿಡುಗಡೆ

spot_img
- Advertisement -
- Advertisement -

ಮಂಗಳೂರು : ಕರಾವಳಿ ಜನಪದ ಕ್ರೀಡೆ ಕಂಬಳ ಯಾವಾಗ ಪ್ರಾರಂಭವಾಗುತ್ತೆ ಅಂತಾ ಕಂಬಳ ಪ್ರಿಯರು ತುದಿಗಾಲಲಲ್ಲಿ ಕಾಯುತ್ತಿರುತ್ತಾರೆ. ಇಂತಹ ಕಂಬಳ ಪ್ರಿಯರಿಗೆ ಸಿಹಿ ಸುದ್ದಿ ಇಲ್ಲಿದೆ .ಉಡುಪಿ, ದಕ್ಷಿಣ ಕನ್ನಡ ಹಾಗೂ ಕಾಸರಗೋಡು ಜಿಲ್ಲೆಗಳ ಈ ಋತುವಿನ ಕಂಬಳದ ಸಂಭಾವ್ಯ ವೇಳಾಪಟ್ಟಿಯನ್ನು ಪ್ರಕಟವಾಗಿದೆ.

ಮಂಗಳೂರು ಜಿಲ್ಲಾ ಕಂಬಳ ಸಮಿತಿಯ ಸಭೆಯು ರವಿವಾರ ಮೂಡುಬಿದಿರೆಯಲ್ಲಿ ಸಮಿತಿಯ ಅಧ್ಯಕ್ಷ ಎರ್ಮಾಳು ರೋಹಿತ್‌ ಹೆಗ್ಡೆ ಅಧ್ಯಕ್ಷತೆಯಲ್ಲಿ ಕಂಬಳದ ಸಂಭಾವ್ಯ ವೇಳಾಪಟ್ಟಿ ಬಿಡುಗಡೆ ಮಾಡಲಾಗಿದೆ5ರಂದು ಶಿರ್ವ ಕಂಬಳದೊಂದಿಗೆ ಕಂಬಳ ಋತು ಪ್ರಾರಂಭಗೊಳ್ಳಲಿದ್ದು, ಎಪ್ರಿಲ್‌ 8ರ ವರೆಗೆ ಒಟ್ಟು 24 ಕಂಬಳಗಳು ನಡೆಯಲಿವೆ. ಈ ಬಾರಿ ಪಣಪಿಲದಲ್ಲಿ ಹೊಸದಾಗಿ ಕಂಬಳ ಆಯೋಜನೆಗೊಳ್ಳುತ್ತಿದೆ.

ಮಂಗಳೂರು ಪಿಲಿಕುಳದ ಕಂಬಳಕ್ಕೂ ನ. 12ರಂದು ದಿನಾಂಕ ನೀಡಲಾಗಿದ್ದು ಜಿಲ್ಲಾಡಳಿತ ಈ ಬಗ್ಗೆ ನಿರ್ಧಾರ ಕೈಗೊಳ್ಳಬೇಕಾಗಿದೆ. ಪಿಲಿಕುಳದಲ್ಲಿ ಕೆಲವು ವರ್ಷಗಳಿಂದ ಕಂಬಳ ಸ್ಥಗಿತಗೊಂಡಿದ್ದು ಈ ಬಾರಿ ಆಯೋಜಿಸಲು ಜಿಲ್ಲಾಡಳಿತ ಉತ್ಸುಕತೆ ತೋರ್ಪಡಿಸಿದೆ ಎನ್ನಲಾಗಿದೆ.

ಕೊರೊನಾ ಸಮಸ್ಯೆಯಿಂದಾಗಿ ಕಳೆದ ಬಾರಿಯ ಕಂಬಳ ಋತು ಡಿ. 5 ರಿಂದ ಆರಂಭಗೊಂಡಿತ್ತು ಮತ್ತು ಒಟ್ಟು 18 ಕಂಬಳಗಳ ದಿನಾಂಕಗಳನ್ನು ಕಂಬಳ ಸಮಿತಿ ಪ್ರಕಟಿಸಿತ್ತು. 5 ಕಂಬಳ ಪೂರ್ಣಗೊಳ್ಳುವಷ್ಟರಲ್ಲಿ ವಾರಾಂತ್ಯ ಕರ್ಫ್ಯೂ, ಕೊರೊನಾ ನಿರ್ಬಂಧ ಜಾರಿಗೊಂಡ ಹಿನ್ನೆಲೆಯಲ್ಲಿ ಉಳಿದ 11 ಕಂಬಳಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು. ಬಳಿಕ ಫೆಬ್ರವರಿಯಲ್ಲಿ ವಾರಾಂತ್ಯ ಕರ್ಫ್ಯೂ ತೆರವುಗೊಂಡ ಬಳಿಕ ಮರು ಆರಂಭಗೊಂಡು ಎಪ್ರಿಲ್‌ನಲ್ಲಿ ಕೊನೆಗೊಂಡಿತ್ತು. ಈ ಬಾರಿ ಹಿಂದಿನಂತೆ ನಿಗದಿತ ಸಮಯಕ್ಕೆ ಆರಂಭಗೊಳ್ಳುತ್ತಿದೆ.

- Advertisement -
spot_img

Latest News

error: Content is protected !!