Thursday, June 4, 2026
Homeತಾಜಾ ಸುದ್ದಿಎಲ್ಲಾ ಭಾಗ್ಯಗಳು ನಮ್ಮದು ಎಂಬ ಸಿದ್ದರಾಮಯ್ಯ ಹೇಳಿಕೆ ಹಿನ್ನೆಲೆ: PFI ಭಾಗ್ಯ ಪೋಸ್ಟರ್ ಬಿಡುಗಡೆ ಮಾಡಿದ...

ಎಲ್ಲಾ ಭಾಗ್ಯಗಳು ನಮ್ಮದು ಎಂಬ ಸಿದ್ದರಾಮಯ್ಯ ಹೇಳಿಕೆ ಹಿನ್ನೆಲೆ: PFI ಭಾಗ್ಯ ಪೋಸ್ಟರ್ ಬಿಡುಗಡೆ ಮಾಡಿದ ಸಚಿವ ಆರ್‌.ಅಶೋಕ್

- Advertisement -
- Advertisement -

ಬೆಂಗಳೂರು: ಎಲ್ಲಾ ಭಾಗ್ಯಗಳು ನಮ್ಮದು ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಅದಕ್ಕಾಗಿ ಇಂದು PFI ಭಾಗ್ಯ ಪೋಸ್ಟರ್ ಬಿಡುಗಡೆ ಮಾಡುತ್ತಿದ್ದೇವೆ ಎಂದು ಕಂದಾಯ ಸಚಿವ ಆರ್‌.ಅಶೋಕ್ ಹೇಳಿದರು.

ನಗರದಲ್ಲಿ ಮಾತನಾಡಿದ ಅವರು, ಕುಟ್ಟಪ್ಪ, ರುದ್ದೇಶ್, ಶರತ್‌ ಹತ್ಯೆ ಕೇಸ್ ಹಾಕಲು ಹಿಂದೇಟಾಕಿದರು. ಕಾರ್ಯಕರ್ತರ ಹತ್ಯೆಯಾದ ಬಳಿಕ ಕೇಸ್ ಹಾಕಲು ಹಿಂಜರಿದರು. ಇದೆಲ್ಲವನ್ನೂ ನೋಡಿದರೆ ಕಾಂಗ್ರೆಸ್ ಸೂತಕ ಮನೆಯಾಗಿದೆ. ಅದಕ್ಕೆ ಅವರ ಮನೆಯವರನ್ನ ಬ್ಯಾನ್ ಮಾಡಲಾಗಿದೆ. ಕೊಡಗು, ಮೈಸೂರು, ಮಂಗಳೂರಿನಲ್ಲಿ ಟ್ರೈನಿಂಗ್ ನೀಡಲಾಗಿದೆ. ಬೈಕ್ ನಲ್ಲಿ ಹೋಗುವಾಗ ಹೇಗೆ ಕತ್ತು ಕಡಿಯಬೇಕು. ಕೆಜಿ ಹಳ್ಳಿ, ಡಿಜೆ ಹಳ್ಳಿ ಗಲಭೆ ಹೇಗೆ ಮಾಡಬೇಕು ಅಂತ ತರಬೇತಿ ನೀಡಲಾಗಿದೆ. ಕೇರಳದ ನಿವೃತ್ತ ಪೊಲೀಸರಿಂದ ಟ್ರೈನಿಂಗ್ ನೀಡಿರುವ ಮಾಹಿತಿಯಿದೆ. ನಾವೇ ಹೇಳಿದ್ದು, ಅದಕ್ಕೆ ಬ್ಯಾನ್ ಮಾಡಿದ್ದಾರೆಂದು ಸಿದ್ದರಾಮಯ್ಯ ಹೇಳುತ್ತಾರೆ ಅವರಿಗೆ ನಾಚಿಕೆಯಾಗಬೇಕು. ಅವರು ಕ್ಷಮೆ ಕೇಳಬೇಕು ಎಂದು ಸಚಿವ ಆರ್‌.ಅಶೋಕ್ ಗುಡುಗಿದರು.

- Advertisement -

Latest News

error: Content is protected !!