ಬಂಟ್ವಾಳ; ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರ ನೇತ್ರತ್ವದಲ್ಲಿ, ಬಂಟ್ವಾಳ ಬಿಜೆಪಿ ವತಿಯಿಂದ 9 ನೇ ದಿನದ ಗ್ರಾಮ ವಿಕಾಸ ಯಾತ್ರೆ ಗ್ರಾಮದೆಡೆಗೆ ಶಾಸಕರ ನಡಿಗೆ ಪಾದಯಾತ್ರೆ ಜ.22 ರಂದು ಭಾನುವಾರ ಬೆಳಿಗ್ಗೆ ಪುಂಜಾಲಕಟ್ಟೆ ಶ್ರೀ ಗೋಪಾಲಕೃಷ್ಣ ದೇವಸ್ಥಾನದಿಂದ ಹೊರಟಿತು.

ಜ.21 ರಂದು ಪಾಂಡವರಕಲ್ಲುವಿನಲ್ಲಿ ಸಭಾ ಕಾರ್ಯಕ್ರಮ ಮುಗಿಸಿ ಶಾಸಕರು ನಯನಾಡು ಬಿಜೆಪಿ ಕಾರ್ಯಕರ್ತ ಉಮೇಶ್ ಪೂಜಾರಿ ಅವರ ಮನೆಯಲ್ಲಿ ವಾಸ್ತವ್ಯ ಹೂಡಿದರು. ಇಂದು ಬೆಳಿಗ್ಗೆ ಶಾಸಕರು ವಾಸ್ತವ್ಯ ಮಾಡಿದ ಮನೆಗೆ ನೂರಾರು ಕಾರ್ಯಕರ್ತರು ಆಗಮಿಸಿ ಪಾದಯಾತ್ರೆಗೆ ಶುಭಕೋರಿದರು.
ಬಳಿಕ ಶಾಸಕರು ಕಾರ್ಯಕರ್ತರ ಜೊತೆಗೆ ಪುಂಜಾಲಕಟ್ಟೆ ದೇವಸ್ಥಾನಕ್ಕೆ ಬೇಟಿ ನೀಡಿ ಪೂಜೆ ಸಲ್ಲಿಸಿದರು. ಪೂಜೆ ಸಲ್ಲಿಸಿದ ಬಳಿಕ ವಂದೆ ಮಾತರಂ ಗೀತೆ ಹಾಡಿ, ಶಾಸಕರು ಎಂದಿನಂತೆ ಭೂ ತಾಯಿಗೆ ನಮಿಸಿ ಪಾದಯಾತ್ರೆಗೆ ಹೆಜ್ಜೆ ಹಾಕಿದರು.
ಪುಂಜಾಲಕಟ್ಟೆ ದೇವಸ್ಥಾನದಿಂದ ಹೊರಟ ಪಾದಯಾತ್ರೆ,ಪಿಲಾತಬೆಟ್ಟು, ಇರ್ವತ್ತೂರು, ಮೂಡುಪಡುಗೋಡು, ಕೊಡಂಬೆಟ್ಟು, ಅಜ್ಜಿಬೆಟ್ಟು, ಚೆನ್ಯತ್ತೊಡಿ, ಪಿಲಿಮೊಗರು, ಕುಕ್ಕಿಪ್ಪಾಡಿ, ಎಲಿಯನಡುಗೊಡು,,ಸಂಗಬೆಟ್ಟು ಗ್ರಾಮದಲ್ಲಿ ಸಂಚರಿಸಿ, ಸಿದ್ದಕಟ್ಟೆಯಲ್ಲಿ ಸಮಾಪನಗೊಂಡಿತು.

ಪಾದಯಾತ್ರೆಯಲ್ಲಿ ಬಿಜೆಪಿ ಅಧ್ಯಕ್ಷ ದೇವಪ್ಪ ಪುಜಾರಿ, ಪಾದಯಾತ್ರೆ ಸಂಚಾಲಕ ದೇವದಾಸ್ ಶೆಟ್ಟಿ, ಸಹಸಂಚಾಲಕರಾದ ಮಾದವ ಮಾವೆ,ಸುದರ್ಶನ್ ಬಜ, ರಾಜ್ಯ ನೀರು ಸರಬರಾಜು ಮತ್ತು ಒಳಚರಂಡಿ ನಿಗಮದ ಸುಲೋಚನ ಜಿ.ಕೆ.ಭಟ್, ಮಾಜಿ.ಜಿ.ಪಂ.ಸದಸ್ಯರಾದ ಎಂ.ತುಂಗಪ್ಪ ಬಂಗೇರ, ಕಮಲಾಕ್ಷಿ ಪೂಜಾರಿ, ಡೊಂಬಯ ಅರಳ, ಗ್ರಾಮಪಂಚಾಯತ್ ಅಧ್ಯಕ್ಷೆ ಹರ್ಷಿಣಿ, ಪ್ರಮುಖರಾದ ಪ್ರಭಾಕರ್ ಪ್ರಭು, ಕೃಷ್ಣಪ್ಪ ಪೂಜಾರಿ, ಉಮೇಶ್ ಅರಳ, ಸೀತಾರಾಮ ಪೂಜಾರಿ, ಹರೀಂದ್ರ ಪೈ, ಉಮೇಶ್ ಪೂಜಾರಿ, ಲಕ್ಮೀನಾರಾಯಣ ಉಡುಪ, ಸಂತೋಷ್ ಶೆಟ್ಟಿ,ಶಂಕರ್ ಶೆಟ್ಟಿ, ಶುಭಕರ,ಎಂ.ಪಿ.ಶೇಖರ್, ಹರಿಣಾಕ್ಷಿ, ಮಾಲತಿ, ಮೋಹನ್ ಶೆಟ್ಟಿ, ಕಲ್ಯಾಣಿ, ಯಕ್ಷಿತ್ ಗೌಡ, ಕಿರಣ್ ಮೂರ್ಜೆ, ಶ್ರೀನಿವಾಸ , ರವಿಶಂಕರ್ ಹೊಳ್ಳ, ದಿನೇಶ್ ಶೆಟ್ಟಿ ವಾಮದಪದವು, ಗಣೇಶ್ ರೈ ಮಾಣಿ, ಸುಪ್ರೀತ್ ಅಳ್ವ, ಗೋಪಾಲ ಕೃಷ್ಣ ಚೌಟ, ಶ್ಯಾಮ್ ಪ್ರಸಾದ್ ಪೂಂಜ, ಪುರುಷೋತ್ತಮ ಶೆಟ್ಟಿ ವಾಮದಪದವು, ದಿನೇಶ್ ಶೆಟ್ಟಿ ದಂಬೆದಾರ್, ಮೋಹನ್ ದಾಸ ಗಟ್ಟಿ, ಪ್ರಕಾಶ್ ಪೂಜಾರಿ, ರವಿರಾಮ ಶೆಟ್ಟಿ, ವಿನೋದ್ ಪೂಜಾರಿ, ಕಮಲ್ ಶೆಟ್ಟಿ, ಚರಣ್, ವೆಂಕಟೇಶ ಭಟ್ , ಜಯರಾಮ ಕೊಪ್ಪಳ, ಜುಮಾದಿಗುಡ್ಡೆ ,,ಸುಷ್ಮಾಚರಣ್, ಕಾರ್ತಿಕ್ ಬಲ್ಲಾಳ್, ಪ್ರಣೀತ ಶೆಟ್ಟಿ, ಸುರೇಶ್ ಮೈರ, ರಂಜಿತ್ ಮೈರ, ಪ್ರಕಾಶ್ ಅಂಚನ್, ಪುರುಷೋತ್ತಮ ಸಾಲಿಯಾನ್ ನರಿಕೊಂಬು, ಯಶೋಧರ ಕರ್ಬೆಟ್ಟು, ಭಾರತಿ ಚೌಟ, ದಿನೇಶ್ ಅಮ್ಟೂರು, ಚೆನ್ನಪ್ಪ ಕೋಟ್ಯಾನ್, ನಂದರಾಮ ರೈ,ರತ್ನ ಕುಮಾರ್ ಚೌಟ, ಸತೀಶ್ ಪೂಜಾರಿ , ಮಂದಾರತಿ ಶೆಟ್ಟಿ, ದಾಮೋದರ ಪೂಜಾರಿ, ಉದಯ ಪೂಜಾರಿ, ಸುನಿಲ್ ಶೆಟ್ಟಿ ಗಾರ್ ,ಸುರೇಶ್ ಕುಲಾಲ್, ಉಮೇಶ್ ಗೌಡ, ರತ್ಮಾಕರ ಪೂಜಾರಿ, ಯೋಗೀಶ್ ಆಚಾರ್ಯ, ಸುಜಾತ ಪೂಜಾರಿ, ಲಿಂಗಪ್ಪ ಪೂಜಾರಿ, ಪ್ರತಿಭಾ ಶೆಟ್ಟಿ, ಸಂತೋಷ್ ಶೆಟ್ಟಿ, ಉಮೇಶ್ ಪೂಜಾರಿ, ದೀಪಕ್ ಶೆಟ್ಟಿಗಾರ್, ಮೋನಪ್ಪ ದೇವಶ್ಯ,ಹರೀಶ್ ಪ್ರಭು, ಶಾಂತಪ್ಪ ಪೂಜಾರಿ ,ರಮೇಶ್ ಕುಡುಮೇರು, ಮತ್ತಿತರರು ಉಪಸ್ಥಿತರಿದ್ದರು.
