Tuesday, May 7, 2024
Homeಕರಾವಳಿಬೆಳ್ತಂಗಡಿ : ಅಂದರ್ ಬಾಹರ್ ಆಡುತ್ತಿದ್ದಾಗ ಧರ್ಮಸ್ಥಳ ಪೊಲೀಸರ ದಾಳಿ: ಹಣ, ವಾಹನ ಮತ್ತು ಒಂಭತ್ತು...

ಬೆಳ್ತಂಗಡಿ : ಅಂದರ್ ಬಾಹರ್ ಆಡುತ್ತಿದ್ದಾಗ ಧರ್ಮಸ್ಥಳ ಪೊಲೀಸರ ದಾಳಿ: ಹಣ, ವಾಹನ ಮತ್ತು ಒಂಭತ್ತು ಜನರ ಅಂದರ್

spot_img
- Advertisement -
- Advertisement -

ಬೆಳ್ತಂಗಡಿ : ಅಕ್ರಮವಾಗಿ ಸರಕಾರಿ ಗುಡ್ಡದಲ್ಲಿ ಪ್ರದೇಶದಲ್ಲಿ ಸಾರ್ವಜನಿಕವಾಗಿ ಕೆಲವರು ಹಣವನ್ನು ಪಣವಾಗಿಟ್ಟು ಇಸ್ಪೀಟ್ ಜುಗಾರಿ ಆಟ ಆಡುತ್ತಿದ್ದಾಗ ಧರ್ಮಸ್ಥಳ ಪೊಲೀಸರು ದಾಳಿ ಮಾಡಿ 9 ಜನರನ್ನು ಬಂಧಿಸಿದ್ದು ಎರಡು ವಾಹನ ಹಾಗೂ ಹಣವನ್ನು ವಶಪಡಿಸಿಕೊಂಡ ಘಟನೆ ಶಿಶಿಲದಲ್ಲಿ ನಡೆದಿದೆ.

ಬೆಳ್ತಂಗಡಿ ತಾಲೂಕಿನ ಶಿಶಿಲ ಗ್ರಾಮದ ಅಂಚಿನಡ್ಕ ಎಂಬ ಸರಕಾರಿ ಗುಡ್ಡ ಪ್ರದೇಶದ ಸಾರ್ವಜನಿಕ ಪ್ರದೇಶದಲ್ಲಿ ಇಸ್ಪೀಟ್ ಜುಗಾರಿ ಆಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಧರ್ಮಸ್ಥಳ ಪೊಲೀಸರಿಗೆ ಸಿಕ್ಕಿದ್ದು ಈ ಮಾಹಿತಿ ಮೇರೆಗೆ ಸೋಮವಾರ ಸಂಜೆ ಮೂರು ಗಂಟೆ ಸುಮಾರಿಗೆ ಧರ್ಮಸ್ಥಳ ಪಿಎಸ್ಐ ಅನಿಲ್ ಕುಮಾರ್‌.ಡಿ ನೇತೃತ್ವದ ತಂಡ ದಾಳಿ ಮಾಡಿದ್ದು ಈ ವೇಳೆ 9 ಜನರು ಹಣವನ್ನು ಪಣವಾಗಿ ಇಟ್ಟು ಇಸ್ಪೀಟ್ ಆಡುತ್ತಿದ್ದರು.

ಆಟದಲ್ಲಿ ನಿರತರಾಗಿದ್ದ ಬೆಳ್ತಂಗಡಿ ತಾಲೂಕು ಶಿಶಿಲ ಗ್ರಾಮದ ಓಟ್ಲ ಮನೆಯ ದೇವಪ್ಪ ಪೂಜಾರಿಯ ಮಗ ವೆಂಕಪ್ಪ ಪೂಜಾರಿ(55) , ಶಿಶಿಲ ಗ್ರಾಮದ ಪರಾರಿ ಬಾಳ ಹಿತ್ತಿಲು ಮನೆಯ ರುಕ್ಮಯ ಗೌಡರ ಮಗ ವಸಂತ ಗೌಡ(48) , ಶಿಶಿಲ ಗ್ರಾಮದ ನಾಗನಡ್ಕ ಮನೆಯ ನೇಮಣ್ಣ ಗೌಡರ ಮಗ ಕೃಷ್ಣಪ್ಪ ಗೌಡ(45) , ಶಿಬಾಜೆ ಗ್ರಾಮದ ಐಂಗುಡ ಮನೆಯ ಮೋನಪ್ಪ ಗೌಡರ ಮಗ ಶಿವರಾಮ ಗೌಡ(53), ಶಿಶಿಲ ಗ್ರಾಮದ ಅಂಬೆತ್ತಡ್ಕ ಮನೆಯ ಲಿಂಗಪ್ಪ ಗೌಡರ ಮಗ ಸದಾಶಿವ(38) , ಕಡಬ ತಾಲೂಕಿನ ಕಡಬ ಗ್ರಾಮದ ಮುಳಿಮಜಲು ಮನೆಯ ಗುರುವರ ಮಗ ಪೊಡಿಯಾ(50) , ಶಿಶಿಲ ಗ್ರಾಮದ ಅಂಬೆತ್ತಡ್ಕ ಮನೆಯ ಲಿಂಗಪ್ಪ ಗೌಡರ ಮಗ ಹೊನ್ನಪ್ಪ (47) , ಶಿಶಿಲ ಗ್ರಾಮದ ಮಚ್ಚಿರಡ್ಕ ಮನೆಯ ಮಾಯಿಲಪ್ಪ ಗೌಡ @ ಬಾಬು ಗೌಡರ ಮಗ ಸುರೇಶ್(33) , ಕಡಬ ತಾಲೂಕಿನ ಮುಳಿಮಜಲು ಮನೆಯ ಅಂಬೋಡಿ ಮಗ ಕೇಶವ(42)  ಬಂಧಿಸಿಲಾಗಿದೆ. ಬಂಧಿತರ ಬಳಿ 52 ವಿವಿಧ ಜಾತಿಯ ಇಸ್ಪೀಟ್ ಎಲೆಗಳು ಹಾಗೂ ಒಟ್ಟು ಹಣ 11,370 ಸಾವಿರ ರೂಪಾಯಿ ನಗದು, ಟರ್ಪಾಲ್ ,KA 21 EC 0671 ದ್ವಿಚಕ್ರ ವಾಹನ ಮತ್ತು KA 21 B 9944 ಓಮಿನಿ ವಾಹನ ಸೇರಿದಂತೆ ಒಟ್ಟು 1,01,370 ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಕಾರ್ಯಾಚರಣೆಯಲ್ಲಿ ಧರ್ಮಸ್ಥಳ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಅನಿಲ್ ಕುಮಾರ್.ಡಿ ಮತ್ತು ಸಿಬ್ಬಂದಿ ಭಾಗವಹಿಸಿದ್ದರು‌.

- Advertisement -
spot_img

Latest News

error: Content is protected !!