Sunday, April 28, 2024
Homeಕರಾವಳಿಶ್ರೀ ಕ್ಷೇತ್ರ ಧರ್ಮಸ್ಥಳದ ಲಕ್ಷದೀಪೋತ್ಸವದ ಅಂಗವಾಗಿ 89ನೇ ಸಾಹಿತ್ಯ ಸಮ್ಮೇಳನ

ಶ್ರೀ ಕ್ಷೇತ್ರ ಧರ್ಮಸ್ಥಳದ ಲಕ್ಷದೀಪೋತ್ಸವದ ಅಂಗವಾಗಿ 89ನೇ ಸಾಹಿತ್ಯ ಸಮ್ಮೇಳನ

spot_img
- Advertisement -
- Advertisement -

ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ನಡೆಯುವ ಲಕ್ಷ ದೀಪೋತ್ಸವದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಸಾಹಿತ್ಯ ಸಮ್ಮೇಳನದ 89ನೆ ಅಧಿವೇಶನ ಅಮೃತವರ್ಷಿಣಿ ಸಭಾಂಗಣದಲ್ಲಿ ಬಹಳ ವಿಜೃಂಭಣೆಯಿಂದ ನಡೆಯಿತು.

ಕರ್ನಾಟಕ ಸರಕಾರದ ವೈದ್ಯಕೀಯ ಶಿಕ್ಷಣ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ‌‌. ಕೆ ಸುಧಾಕರ್ ಅವರು ಈ ಸಮ್ಮೇಳನ ಉದ್ಘಾಟಿಸಿದರು. ಹಾಗೇ ಅಧ್ಯಕ್ಷತೆಯನ್ನು ಬೆಂಗಳೂರು ಕರ್ನಾಟಕ ಸಂಸ್ಕೃತ ವಿಶ್ವ ವಿದ್ಯಾಲಯದ ವಿಶ್ರಾಂತ ಕುಲಪತಿಗಳು ಹಾಗೂ ಹಿರಿಯ ಸಾಹಿತಿಗಳಾದ ಮಲ್ಲೇಪುರಂ ಜಿ ವೆಂಕಟೇಶ್ ವಹಿಸಿದ್ದರು.

ಕಾರ್ಯಕ್ರಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.‌ಡಿ ವೀರೇಂದ್ರ ಹೆಗ್ಗಡೆಯವರು ಸ್ವಾಗತಿಸಿ ಪ್ರಸ್ತಾವನೆ ಮಾತುಗಳನ್ನು ನುಡಿದರು. ಧರ್ಮ ಮತ್ತು ಸಾಹಿತ್ಯ ಮಾನವರ ಏಳಿಗೆಗೆ ಪೂರಕ ಮತ್ತು ಪ್ರೇರಕ. ಧರ್ಮಸ್ಥಳದಲ್ಲಿ ಆಚರಿಸುವ
ಸಾಹಿತ್ಯ ಸಮ್ಮೇಳನಗಳ ಮೂಲ ಉದ್ದೇಶ ಸರ್ವರ ಹಿತ ಹಾಗೂ ಸಹಬಾಳ್ವೆಯ ಜನತೆಗೆ ಭಾಷಾ ಸಾಮರಸ್ಯ, ಭಾಷೆ ಮೇಲಿನ ಅಭಿಮಾನ ಹಾಗೂ ಮಾನವೀಯ ಗುಣಗಳ ಅಳವಡಿಕೆ, ಆ ಮೂಲಕ ಸ್ವಸ್ಥ ಸಮಾಜದ ನಿರ್ಮಾಣ ಇದರ ಮುಖ್ಯ ದ್ಯೇಯವಾಗಿದೆ.

ಧರ್ಮಸ್ಥಳದ ಹೇಮಾವತಿ ವೀ. ಹೆಗ್ಗಡೆ, ಡಿ. ಸುರೇಂದ್ರ ಕುಮಾರ್, ಡಿ. ರಾಜೇಂದ್ರ ಕುಮಾರ್, ಶ್ರದ್ಧಾ ಅಮಿತ್ ಬೆಂಗಳೂರು, ರಾಜವರ್ಮ ಬಲ್ಲಾಳ್, ಡಾ.‌ಎಲ್.ಎಚ್. ಮಂಜುನಾಥ್, ಸುಪ್ರಿಯಾ ಹರ್ಷೇಂದ್ರ ಕುಮಾರ್, ಅನಿತಾ ಹರ್ಷೇಂದ್ರ ಕುಮಾರ್, ನೀತಾ ರಾಜೇಂದ್ರ ಕುಮಾರ್, ಡಿ. ಶ್ರೇಯಸ್ ಕುಮಾರ್, ಹೆಗ್ಗಡೆಯವರ ಆಪ್ತ ಕಾರ್ಯದರ್ಶಿಗಳಾದ ಕೃಷ್ಣ ಸಿಂಗ್ ಹಾಗೂ ಎ.ವೀರು ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

ಸನ್ಮಾನಿತ ಉಪನ್ಯಾಸಕರನ್ನು ಧರ್ಮಸ್ಥಳ ಕ್ಷೇತ್ರದ ಪರವಾಗಿ ಸ್ವಾಗತ ಸಮಿತಿ ಖಜಾಂಜಿಯಾದ ಡಿ ಹರ್ಷೇಂದ್ರ ಕುಮಾರ್ ಅವರು ಸನ್ಮಾನಿಸಿ ಗೌರವಿಸಿದರು.

ಹೆಗ್ಗಡೆಯವರ ಬೀಡಿನಿಂದ ಭವ್ಯ ಮೆರವಣಿಗೆ, ಶೃಂಗಾರಗೊಂಡ ಆನೆ, ನಿಶಾನೆ, ಕೊಂಬು, ಕಹಳೆ, ಬ್ಯಾಂಡ್ ವಾದ್ಯಗಳ ಸಮ್ಮೀಳನದಲ್ಲಿ ಮೆರವಣಿಗೆಯ ಮೂಲಕ
ಸಮ್ಮೇಳನ ಉದ್ಘಾಟಕರು, ಅಧ್ಯಕ್ಷರು ಹಾಗೂ ಗಣ್ಯರನ್ನು ಸಭಾ ಭವನದವರಗೆ ಕರೆತರಲಾಯಿತು.

ಡಾ. ಬಿ.ಪಿ‌ ಸಂಪತ್ ಕುಮಾರ್ ಉಜಿರೆ ಕಾರ್ಯಕ್ರಮ ನಿರೂಪಿಸಿದರು. ರುಡ್‌ಸೆಟ್ ಸಂಸ್ಥೆಯ ನಿರ್ದೇಶಕ ಎಂ ಸುರೇಶ್ ವಂದನಾರ್ಪಣೆ ನಡೆಸಿಕೊಟ್ಟರು. ಕಾರ್ಯಕ್ರಮದಲ್ಲಿ ಎಸ್‌ಡಿಎಂ ಕಾಲೇಜಿನ‌ ವಿದ್ಯಾರ್ಥಿಗಳ ಬಳಗದಿಂದ ನಾಡಗೀತೆ ಹಾಗೂ ಕನ್ನಡ ಸಾಹಿತ್ಯ ಕ್ಷೇತ್ರದ ಖ್ಯಾತನಾಮರ ಹಾಡುಗಳು ಸುಂದರವಾಗಿ ಅನುರಣಿಸಿತು.

- Advertisement -
spot_img

Latest News

error: Content is protected !!