Wednesday, June 24, 2026
Homeತಾಜಾ ಸುದ್ದಿವಿಷಪೂರಿತ ಹಾವು ಕಚ್ಚಿ 8 ವರ್ಷದ ಬಾಲಕಿ ದಾರುಣ ಸಾವು

ವಿಷಪೂರಿತ ಹಾವು ಕಚ್ಚಿ 8 ವರ್ಷದ ಬಾಲಕಿ ದಾರುಣ ಸಾವು

- Advertisement -
- Advertisement -

ಕುಂದಾಪುರ: ವಿಷಪೂರಿತ ಹಾವು ಕಚ್ಚಿ 8 ವರ್ಷದ ಬಾಲಕಿ ದಾರುಣವಾಗಿ ಸಾವನ್ನಪ್ಪಿದ್ದ ಘಟನೆ ಶೇಡಿಮನೆ ಗ್ರಾಮದಲ್ಲಿ ನಡೆದಿದೆ.

ಮೃತಳನ್ನು ಶೇಡಿಮನೆಯ ಬೆಪ್ಪರೆ ಗುಡ್ಡೆಯಂಗಡಿ ನಿವಾಸಿ ಶ್ರೀಧರ್ ಮಡಿವಾಳ ಅವರ ಪುತ್ರಿ ಸನ್ನಿಧಿ ಎಂದು ಗುರುತಿಸಲಾಗಿದೆ.

ಸನ್ನಿಧಿ ಆಗಸ್ಟ್ 3 ರಂದ ಶಾಲೆಗೆ ರಜೆಯಿದ್ದ ಕಾರಣ, ತೋಟದಲ್ಲಿ ಕೆಲಸ ಮಾಡುತ್ತಿದ್ದ ತನ್ನ ತಂದೆಯನ್ನು ಭೇಟಿ ಮಾಡಲು ಹೋಗಿದ್ದ ಸಂದರ್ಭ ವಿಷಪೂರಿತ ಹಾವೊಂದು ಆಕೆಗೆ ಕಚ್ಚಿದೆ. ಈ ಸಂದರ್ಭದಲ್ಲಿ ಹುಡುಗಿ ನೋವಿನಿಂದ ಕಿರುಚುತ್ತಾ, ಮನೆಗೆ ಓಡಿದ್ದು, ಕುಟುಂಬದ ಸದಸ್ಯರು ತಕ್ಷಣ ಆಕೆಯನ್ನು ಹೆಬ್ರಿ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಿದ್ದಾರೆ. ನಂತರದಲ್ಲಿ ಆಕೆಗೆ ಹೆಚ್ಚಿನ ಚಿಕಿತ್ಸೆ ಕೊಡಿಸುವ ಸಲುವಾಗಿ ಮಣಿಪಾಲ ಆಸ್ಪತ್ರೆಗೆ ಕರೆದೊಯ್ಯಲಾಯಿತು. ದುರದೃಷ್ಟವಶಾತ್, ಚಿಕಿತ್ಸೆಗೆ ಸ್ಪಂದಿಸದ ಬಾಲಕಿ ಅದೇ ದಿನ ನಿಧನಳಾಗಿದ್ದಾಳೆ.

ಶ್ರೀಧರ್ ಮತ್ತು ಜ್ಯೋತಿ ದಂಪತಿಯ ನಾಲ್ಕು ಮಕ್ಕಳಲ್ಲಿ ಸನ್ನಿಧಿ ಕಿರಿಯ ಹಾಗೂ ಏಕೈಕ ಪುತ್ರಿ. ಅವರು ಮಂಡಿ ಮೂರುಕೈ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 3 ನೇ ತರಗತಿಯಲ್ಲಿ ಓದುತ್ತಿದ್ದಳು. ಆಕೆಯ ತಂದೆ ಶ್ರೀಧರ್ ನೀಡಿದ ದೂರಿನ ಆಧಾರದ ಮೇಲೆ, ಅಮಸ್‌ಬೈಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

- Advertisement -

Latest News

error: Content is protected !!