Wednesday, June 24, 2026
Homeತಾಜಾ ಸುದ್ದಿಶಿವಮೊಗ್ಗದಲ್ಲಿ 8 ಎಮ್ಮೆಗಳನ್ನು ಬಲಿ ಪಡೆದ ಕಾರು

ಶಿವಮೊಗ್ಗದಲ್ಲಿ 8 ಎಮ್ಮೆಗಳನ್ನು ಬಲಿ ಪಡೆದ ಕಾರು

- Advertisement -
- Advertisement -

ಶಿವಮೊಗ್ಗ: ಮಾರುತಿ ಬ್ರೆಜ್ಜಾ ಕಾರು ಡಿಕ್ಕಿ ಹೊಡೆದು 8 ಎಮ್ಮೆಗಳು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.

ಶಿವಮೊಗ್ಗ ನಗರದ ಸಾಗರ ರಸ್ತೆಯ ಗಾಡಿಕೊಪ್ಪ ಚಾನಲ್ ಬಳಿ ಘಟನೆ ಸಂಭವಿಸಿದೆ.

ವಿದ್ಯಾನಗರದಿಂದ ಸಾಗರ ಕಡೆಗೆ ಹೊರಟಿದ್ದ ಕಾರು ಎಮ್ಮೆಗಳಿಗೆ ಡಿಕ್ಕಿ ಹೊಡೆದು ಸಂಪೂರ್ಣ ನಜ್ಜುಗುಜ್ಜಾಗಿದೆ.

ಚಾಲಕನ ನಿಯಂತ್ರಣ ತಪ್ಪಿ ಎಮ್ಮೆಗಳಿಗೆ ಕಾರು ಗುದ್ದಲ್ಪಟ್ಟಿದ್ದು,
ಚಾಲಕನ ಅಜಾರೂಕತೆಯೇ ಘಟನೆಗೆ ಕಾರಣ ಎಂದು ಹೇಳಲಾಗಿದೆ.

ಕಾರು ಚಾಲಕ ಅತೀ ವೇಗವಾಗಿ ಕಾರು ಚಲಾಯಿಸುತ್ತಿದ್ದು, ರಸ್ತೆಯ ನಡುವೆಯೇ ಒದ್ದಾಡಿ 8 ಪ್ರಾಣ ಮೂಕ ಪ್ರಾಣಿಗಳು ಪ್ರಾಣ ಬಿಟ್ಟಿವೆ.

ಶಿವಮೊಗ್ಗ ನಗರದ ತುಂಗಾ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

- Advertisement -

Latest News

error: Content is protected !!