Thursday, June 4, 2026
Homeಕರಾವಳಿಮಂಗಳೂರು: ಅಂದರ್ – ಬಾಹರ್  ಆಡುತ್ತಿದ್ದ 7 ಆರೋಪಿಗಳು ಅಂದರ್  

ಮಂಗಳೂರು: ಅಂದರ್ – ಬಾಹರ್  ಆಡುತ್ತಿದ್ದ 7 ಆರೋಪಿಗಳು ಅಂದರ್  

- Advertisement -
- Advertisement -

ಮಂಗಳೂರು: ಅಂದರ್ – ಬಾಹರ್  ಆಡುತ್ತಿದ್ದ 7 ಆರೋಪಿಗಳನ್ನು ಪೊಲೀಸರು ಅರೆಸ್ಟ್ ಮಾಡಿರುವ ಘಟನೆ ಮಂಜನಕಟ್ಟೆಯ ಆರಂತಬೆಟ್ಟು ಎಂಬಲ್ಲಿ ನಡೆದಿದೆ. ಇಲ್ಲಿನ ಶೆಡ್ ಒಂದಕ್ಕೆ ದಾಳಿ ಮಾಡಿದ ಸಿಸಿಬಿ ಪೊಲೀಸರು ಅಲ್ಲಿ ಅಂದರ್ – ಬಾಹರ್ ಆಡುತ್ತಿದ್ದ 7 ಆರೋಪಿಗಳನ್ನು ಗುರುವಾರ ಬಂಧಿಸಿದ್ದಾರೆ.

ಮೂಡುಬಿದಿರೆ ತಾಲೂಕಿನ ಸಂಪಿಗೆ ಅಂಚೆಯ ಪುತ್ತಿಗೆ ಪದವು ಮನೆಯ ಶರೀಫ್ (52), ಬೆಳುವಾಯಿಯ ಆರಂತಬೆಟ್ಟುವಿನ ಜಗದೀಶ್ ಆಚಾರ್ಯ(43), ತೋಡಾರಿನ ಜಯರಾಮ ಶೆಟ್ಟಿ (53), ಕಾರ್ಕಳ ತಾಲ್ಲೂಕು ಬಜಗೋಳಿ ಗ್ರಾಮದ ಮೂಡಲ್‌ ಬಂಡಸಾಲೆ ಮನೆಯ ಸತೀಶ್ ಶೆಟ್ಟಿ (46), ಕಾಂತಾವರದ ಜೀವಂದರ್(48), ಸಾಣೂರಿನ ಸುನಿಲ್ ಕುಮಾರ್ (43), ತೆಳ್ಳಾರ್ ರಸ್ತೆ ಬಳಿಯ ಗುಡ್ಡೆಯಂಗಡಿಯ ಮನೋಹರ ಸಾಲ್ಯಾನ್ (56) ಬಂಧಿತರು .

‘ಆರೋಪಿಗಳಿಂದ ಜೂಜಾಟಕ್ಕೆ ಬಳಸಿದ್ದ ನಗದು ₹ 56,170, ಎಂಟು ಮೊಬೈಲ್ ಫೋನುಗಳು, ಒಂದು ಕಾರು, ಆರು ಬೈಕ್‌ಗಳು, ಒಂದು ಆಟೋರಿಕ್ಷಾ, ಇಸ್ಪೀಟ್ ಎಲೆಗಳು, ಮೇಜು ಮತ್ತು ಕುರ್ಚಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಒಟ್ಟು ಮೌಲ್ಯ ₹ 9.23 ಲಕ್ಷ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಮೂಡಬಿದರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!