Wednesday, May 8, 2024
Homeತಾಜಾ ಸುದ್ದಿ63 ಸಾವಿರ ಪ್ರಾಥಮಿಕ ಕೃಷಿ ಸಾಲ ಸಂಘಗಳ ಡಿಜಿಟಲೀಕರಣ: ಅನುಮೋದನೆ ನೀಡಿದ ಆರ್ಥಿಕ ವ್ಯವಹಾರಗಳ ಸಂಪುಟ...

63 ಸಾವಿರ ಪ್ರಾಥಮಿಕ ಕೃಷಿ ಸಾಲ ಸಂಘಗಳ ಡಿಜಿಟಲೀಕರಣ: ಅನುಮೋದನೆ ನೀಡಿದ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ

spot_img
- Advertisement -
- Advertisement -

ಪ್ರಾಥಮಿಕ ಕೃಷಿ ಪರಿಷತ್ತಿನ ಸಹಕಾರ ಸಂಘದಲ್ಲಿ ಅತ್ಯಂತ ಸಣ್ಣ ಘಟಕವಾಗಿದೆ. ಈಗಾಗಿ ಸುಮಾರು 63 ಸಾವಿರ ಪ್ರಾಥಮಿಕ ಕೃಷಿ ಸಾಲ ಸಂಘಗಳ (ಪಿಎಸಿಎಸ್‌) ಡಿಜಿಟಲೀಕರಣ ಪ್ರಸ್ತಾವಕ್ಕೆ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ (ಸಿಸಿಇಎ) ಬುಧವಾರ ಅನುಮೋದನೆ ನೀಡಿದೆ.

“ಡಿಜಿಟಲೀಕರಣಕ್ಕೆ 2,516 ಕೋಟಿ ರೂ. ವೆಚ್ಚವಾಗಲಿದೆ. ಇದರಿಂದ 13 ಕೋಟಿ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಉಪಯೋಗವಾಗಲಿದೆ. ತಮ್ಮ ಸಾಮರ್ಥ್ಯ ವೃದ್ಧಿಸಿಕೊಳ್ಳಲು ಪ್ರತಿ ಕೃಷಿ ಸಾಲ ಸಂಘಗಳಿಗೆ 4 ಲಕ್ಷ ರೂ. ದೊರೆಯಲಿದೆ. ಇದರಲ್ಲಿ ಹಳೆಯ ಖಾತೆಯ ದಾಖಲಾತಿಗಳನ್ನೂ ಡಿಜಿಟಲೀಕರಣಗೊಳಿಸಲಾಗುವುದು ಎಂದು ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್‌ ಶಾ ಹೇಳಿದ್ದಾರೆ” ಎಂದು ಶಾ ಹೇಳಿದ್ದಾರೆ.

“ಈ ಮಾಹಿತಿ ಯುಗದಲ್ಲಿ ಕೃಷಿ ಸಾಲ ಸಂಘಗಳ ಕಂಪ್ಯೂಟರೀಕರಣದಿಂದ ಅವುಗಳ ಪಾರದರ್ಶಕತೆ, ವಿಶ್ವಾಸಾರ್ಹತೆ ಮತ್ತು ದಕ್ಷತೆ ಹೆಚ್ಚುತ್ತದೆ. ಇದು ಕೃಷಿ ಸಾಲ ಸಂಘಗಳಿಗೆ ವರವಾಗಿ ಪರಿಣಮಿಸಲಿದೆ. ಅಲ್ಲದೆ, ವಿವಿಧೋದ್ಯೇಶ ಹೊಂದಿರುವ ಸಂಘಗಳ ಲೆಕ್ಕಪತ್ರ ನಿರ್ವಹನೆಯನ್ನೂ ಸುಗಮಗೊಳಿಸುತ್ತದೆ” ಎಂದು ಅಮಿತ್‌ ಶಾ ಹೇಳಿದ್ದಾರೆ.

ದೇಶದಲ್ಲಿ ಎಲ್ಲಾ ಕೃಷಿ ಘಟಕಗಳು ನೀಡುವ ಕಿಸಾನ್ ಕ್ರೆಡಿಟ್‌ ಕಾರ್ಡ್‌ (ಕೆಸಿಸಿ) ಹೊಂದಿರುವ ಶೇ. 41 ರಷ್ಟು ರೈತರು (3.1 ಕೋಟಿ) ಪಿಎಸಿಎಸ್‌ ಖಾತೆಗಳನ್ನು ಹೊಂದಿದ್ದಾರೆ. ಕೃಷಿ ಸಾಲ ಸಂಘಗಳಲ್ಲಿ ಸಾಲ ಪಡೆಯುವ ಶೇ 95 ರಷ್ಟು ಸಣ್ಣ ಮತ್ತು ಅತಿ ಸಣ್ಣ ರೈತರಿದ್ದಾರೆ. ಈಗಾಗಲೇ ರೈತರಿಗೆ ಸಾಲ ನೀಡಲು ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್‌ (ಎನ್ಎಬಿಎಆರ್‍‌ಡಿ) ನಡಿ ರಾಜ್ಯ ಸಹಕಾರ ಬ್ಯಾಂಕ್‌ಗಳು ಎಸ್‌ಟಿಸಿಬಿ) ಮತ್ತು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ಗಳು ಕಾರ್ಯನಿರ್ವಹಿಸುತ್ತಿವೆ ಎಂದು ಸರ್ಕಾರದ ಪ್ರಕಟಣೆಯೊಂದು ತಿಳಿಸಿದೆ.

2,516 ಕೋಟಿ ರೂ. ಅನುದಾನಕ್ಕೆ ಒಪ್ಪಿಗೆಆರ್ಥಿಕ ಒಳಗೊಳ್ಳುವಿಕೆಯನ್ನು ಉತ್ತೇಜಿಸುವುದರ ಭಾಗವಾಗಿ ಸಕ್ರಿಯ 63 ಸಾವಿರ ಪ್ರಾಥಮಿಕ ಕೃಷಿ ಸಾಲ ಸಂಘಗಳ (ಪಿಎಸಿಎಸ್‌) ಕಂಪ್ಯೂಟರೀಕರಣಕ್ಕೆ 2,516 ಕೋಟಿ ರೂ. ಅನುದಾನ ನೀಡಲು ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ.ಈ ಕುರಿತು ಮಾಹಿತಿ ಮತ್ತು ಪ್ರಸಾರ ಸಚಿವ ಅನುರಾಗ್‌ ಸಿಂಗ್‌ ಠಾಕೂರ್‍‌ ಸಂಪುಟ ಸಭೆಯಲ್ಲಿ ಮಾಹಿತಿ ನೀಡಿದ್ದಾರೆ.

- Advertisement -
spot_img

Latest News

error: Content is protected !!