Thursday, May 16, 2024
Homeತಾಜಾ ಸುದ್ದಿಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದ 60 ರ ವ್ಯಕ್ತಿಗೆ 120 ವರ್ಷಗಳ ಜೈಲು ಶಿಕ್ಷೆ!….

ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದ 60 ರ ವ್ಯಕ್ತಿಗೆ 120 ವರ್ಷಗಳ ಜೈಲು ಶಿಕ್ಷೆ!….

spot_img
- Advertisement -
- Advertisement -

ನ್ಯೂಯಾರ್ಕ್: ‘ನೆಕ್ಸಿವಿಮ್‌’ ಹೆಸರಿನ ಮಾರ್ಗದರ್ಶನ ಮತ್ತು ತರಬೇತಿ ತಂಡ ಕಟ್ಟಿಕೊಂಡಿದ್ದು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದ ವ್ಯಕ್ತಿಯನ್ನು ಇಲ್ಲಿನ ಪೊಲೀಸರು ಬಂಧಿಸಿದ್ದಾರೆ. ತನ್ನ ಕಾಮತೃಷೆ ತೀರಿಸಿಕೊಳ್ಳಲು ಸ್ವಯಂ ಘೋಷಿತ ಗುರುವಾಗಿದ್ದ 60 ವರ್ಷದ ಕಿಥ್​ ರನ್ನೀರ್​ಗೆ ಅಮೆರಿಕ ನ್ಯಾಯಾಲಯ 120 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.

ಈತ ಮಾರ್ಗದರ್ಶನ ನೀಡುವ ನೆಪದಲ್ಲಿ ಬಂದವರ ಮೇಲೆ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದ. ತನ್ನನ್ನು ಗ್ರ್ಯಾಂಡ್‌ ಮಾಸ್ಟರ್‌ ಎಂದು ಕರೆದುಕೊಳ್ಳುತ್ತಿದ್ದ ಕಿಥ್‌, ಮಹಿಳಾ ಹಿಂಬಾಲಕರನ್ನು ಗುಲಾಮರಂತೆ ನಡೆಸಿಕೊಳ್ಳುತ್ತಿದ್ದ. ಜೀವನದಲ್ಲಿ ಸಾಧನೆ ಮಾಡಬೇಕು ಎಂದರೆ ನನ್ನ ಸೇವೆ ಮಾಡಬೇಕು ಎನ್ನುತ್ತಿದ್ದ.ಮತ್ತು ಅವರ ಜತೆ ಅಶ್ಲೀಲವಾಗಿ ವರ್ತಿಸುತ್ತಿದ್ದ ಕಿಥ್​, ಮಹಿಳೆಯರ ಜತೆಗಿರುವ ತನ್ನ ಫೋಟೊಗಳನ್ನು ಚಿತ್ರಿಸಿಕೊಂಡು ಬೆದರಿಕೆ ಕೂಡ ಹಾಕುತ್ತಿದ್ದ.

ನೆಕ್ಸಿವಿಮ್‌ನಲ್ಲಿ ಅನೇಕ ಯುವತಿಯರು ಸಿಲುಕಿ ನರಳಾಡುತ್ತಿರುವ ಬಗ್ಗೆ ಅಂತಾರಾಷ್ಟ್ರೀಯ ಸುದ್ದಿವಾಹಿನಿಗಳಲ್ಲಿ ಸಾಕ್ಷ್ಯಚಿತ್ರಗಳು ಕೂಡ ಪ್ರಸಾರವಾಗಿದ್ದವು. ಇದು ಭಾರಿ ವಿವಾದ ಸೃಷ್ಟಿಸಿತ್ತು. ಇದೀಗ ಮಹಿಳೆಯರೇ ಮುಂದೆಬಂದು ದೂರು ದಾಖಲು ಮಾಡಿದ್ದರಿಂದ ಬಂಧಿಸಲಾಗಿದ್ದು,ಅಮೆರಿಕ ನ್ಯಾಯಾಲಯ 120 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.

- Advertisement -
spot_img

Latest News

error: Content is protected !!