Sunday, August 30, 2026
Homeತಾಜಾ ಸುದ್ದಿರಾಜ್ಯದಲ್ಲಿ ಕೊರೊನಾ ಎರಡನೇ ಅಲೆಯ ಮುನ್ಸೂಚನೆ : ಆರೋಗ್ಯ, ವೈದ್ಯಕೀಯ ಸಿಬ್ಬಂದಿಗೆ 50 ದಿನಗಳವರೆಗೆ ರಜೆ...

ರಾಜ್ಯದಲ್ಲಿ ಕೊರೊನಾ ಎರಡನೇ ಅಲೆಯ ಮುನ್ಸೂಚನೆ : ಆರೋಗ್ಯ, ವೈದ್ಯಕೀಯ ಸಿಬ್ಬಂದಿಗೆ 50 ದಿನಗಳವರೆಗೆ ರಜೆ ಇಲ್ಲ – ಸಚಿವ ಡಾ.ಕೆ.ಸುಧಾಕರ್

- Advertisement -
- Advertisement -

ಬೆಂಗಳೂರು : ರಾಜ್ಯದಲ್ಲಿ ಕೊರೋನಾ ಎರಡನೇ ಅಲೆಯ ಮುನ್ಸೂಚನೆಯ ಹಿನ್ನಲೆಯಲ್ಲಿ, ಕೊರೋನಾ ವಿರುದ್ಧದ ಹೋರಾಟಕ್ಕಾಗಿ, ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆಯ ಸಿಬ್ಬಂದಿಗಳಿಗೆ 50 ದಿನ ಯಾವುದೇ ಸಿಬ್ಬಂದಿಗಳಿಗೂ ರಜೆಯನ್ನು ನೀಡುವುದಿಲ್ಲ. 50 ದಿನಗಳ ವರೆಗೆ ರಜೆಯನ್ನು ರದ್ದು ಪಡಿಸಲಾಗಿದೆ ಎಂಬುದಾಗಿ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.

ಇಂದು ರಾಜ್ಯದಲ್ಲಿ ಕೊರೋನಾ ಎರಡನೇ ಅಲೆಯ ಮುನ್ಸೂಚನೆಯಲ್ಲಿ ತುರ್ತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಆರೋಗ್ಯ ಇಲಾಖೆ ಸಿಬ್ಬಂದಿಗೆ ರಜೆ ರದ್ದು ಪಡಿಸಲಾಗಿದೆ. 50 ದಿನ ಯಾವ ಸಿಬ್ಬಂದಿಗೂ ರಜೆ ಇಲ್ಲ. ಕೊರೋನಾ ಎದುರಿಸಲು ಸಿಬ್ಬಂದಿ ರಜೆ ರದ್ದು ಪಡಿಸಲಾಗಿದೆ. ನಾನೂ ಸೇರಿದಂತೆ ಯಾರಿಗೂ ರಜೆ ಇಲ್ಲ ಎಂದರು.

ಕೇವಲ ಆರೋಗ್ಯ ಇಲಾಖೆಯ ಸಿಬ್ಬಂದಿಗಳಿಗೆ ಅಷ್ಟೇ ರಜೆಯನ್ನು ರದ್ದು ಮಾಡುತ್ತಿಲ್ಲ. ಅವರ ಜೊತೆಗೆ ವೈದ್ಯಕೀಯ ಶಿಕ್ಷಣ ಇಲಾಖೆಯ ಸಿಬ್ಬಂದಿಗಳ ರಜೆ ಕೂಡ ರದ್ದು ಪಡಿಸಲಾಗುತ್ತಿದೆ. ಕೋವಿಡ್ ವಿರುದ್ಧದ ಹೋರಾಡಲು 50 ದಿನಗಳವರೆಗೆ ಇಲಾಖೆಯ ಯಾವುದೇ ಸಿಬ್ಬಂದಿಗಳಿಗೆ ರಜೆ ನೀಡುವುದಿಲ್ಲ. ರಜೆಯನ್ನು ರದ್ದು ಪಡಿಲಾಗುತ್ತಿದೆ ಎಂಬುದಾಗಿ ತಿಳಿಸಿದರು. ಈ ಮೂಲಕ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆಯ ಸಿಬ್ಬಂದಿಗಳಿಗೆ 50 ದಿನಗಳವರೆಗೆ ರಜೆಯನ್ನು ರದ್ದು ಪಡಿಸಿಲಾಗಿದೆ.

- Advertisement -

Latest News

error: Content is protected !!