- Advertisement -
- Advertisement -
ಅಮೇರಿಕಾ : ಭಾರತೀಯ ಮೂಲದ ಅಮೇರಿಕಾ ನಿವಾಸಿಯೊಬ್ಬ ತನ್ನ ಗರ್ಭಿಣಿ ಪತ್ನಿಯನ್ನು ಕೊಲೆ ಮಾಡಿ ನಂತರ ತಾನು ಆತ್ಮಹತ್ಯೆ ಶರಣಾದ ಘಟನೆ ಅಮೇರಿಕಾದಲ್ಲಿ ನಡೆದಿದೆ.
ಭಾರತೀಯ ಮೂಲದ ಗರಿಮಾ ಕೊಠಾರಿ ಮತ್ತು ಮೋಹನ್ ಮಾಲ್ ಇಬ್ಬರು ಅಮೆರಿಕಾದಲ್ಲಿ ಹೋಟೆಲ್ ನಡೆಸುತ್ತಿದ್ದರು, ಇಬ್ಬರ ನಡುವೆ ಯಾವುದೇ ಮನಸ್ತಾಪವಿರಲಿಲ್ಲ ಇಬ್ಬರೂ ಬಹಳ ಅನ್ಯೋನ್ಯವಾಗಿದ್ದರು ಎಂದು ಹೊಟೆಲ್ ಸಿಬ್ಬಂದಿ ತಿಳಿಸಿದ್ದಾರೆ.
5 ತಿಂಗಳ ಗರ್ಭಿಣಿ ಕೊಲೆಯಾಗಿದ್ದು, ಆಕೆಯ ಪತಿ ಆತ್ಮಹತ್ಯೆ ಮಾಡಿಕೊಂಡಿರುವ ಅನುಮಾನ ವ್ಯಕ್ತವಾಗಿದೆ. 35 ವರ್ಷ ಪ್ರಾಯದ ಗರಿಮಾ ಕೊಠಾರಿಯ ಶವ ಆಕೆಯ ಅಪಾರ್ಟ್ ಮೆಂಟ್ ನಲ್ಲಿ ಪತ್ತೆಯಾಗಿದ್ದು, ಆಕೆಯ ಪತಿ ಮೋಹನ್ ಮಾಲ್ ಶವ ಹಡ್ಸನ್ ನದಿಯ ದಡದಲ್ಲಿ ಪೊಲೀಸರಿಗೆ ಸಿಕ್ಕಿದೆ.
ಆಕೆಯ ದೇಹದ ಮೇಲ್ಭಾಗದಲ್ಲಿ ಗಾಯದ ಗುರುತುಗಳಾಗಿವೆ ಎಂದು ಅಮೆರಿಕಾದ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ, ಏಪ್ರಿಲ್ 26 ರಂದು ಇಬ್ಬರ ಶವಗಳು ಪತ್ತೆಯಾಗಿವೆ ಎಂದು ಜೆರ್ಸಿ ಪೊಲೀಸರು ತಿಳಿಸಿದ್ದಾರೆ.
- Advertisement -