Saturday, June 6, 2026
Homeತಾಜಾ ಸುದ್ದಿಕೇರಳ: ವೈದ್ಯಕೀಯ ವಿದ್ಯಾರ್ಥಿಗಳಿದ್ದ ಕಾರು ಹಾಗೂ ಸರ್ಕಾರಿ ಬಸ್‌ ಮಧ್ಯೆ ಅಪಘಾತ ; ಐವರು ಎಂಬಿಬಿಎಸ್...

ಕೇರಳ: ವೈದ್ಯಕೀಯ ವಿದ್ಯಾರ್ಥಿಗಳಿದ್ದ ಕಾರು ಹಾಗೂ ಸರ್ಕಾರಿ ಬಸ್‌ ಮಧ್ಯೆ ಅಪಘಾತ ; ಐವರು ಎಂಬಿಬಿಎಸ್ ವಿದ್ಯಾರ್ಥಿಗಳು ಸಾವು

- Advertisement -
- Advertisement -

ಕೇರಳ: ವೈದ್ಯಕೀಯ ವಿದ್ಯಾರ್ಥಿಗಳಿದ್ದ ಕಾರು ಹಾಗೂ ಸರ್ಕಾರಿ ಬಸ್‌ ಮಧ್ಯೆ ಅಪಘಾತ ಸಂಭವಿಸಿ ಐವರು ಎಂಬಿಬಿಎಸ್ ವಿದ್ಯಾರ್ಥಿಗಳು ಸಾವನ್ನಪ್ಪಿರುವ ಘಟನೆ ಕೇರಳದ ಆಲಪ್ಪು ಸಮೀಪ ನಡೆದಿದೆ. ಮಹಮ್ಮದ್, ಮುಹಾಸಿನ್, ಇಬ್ರಾಹಿಂ, ದೇವಾನಂದ್ ಮತ್ತು ಶ್ರೀದೀಪ್ ಮೃತ ವಿದ್ಯಾರ್ಥಿಗಳು. ಇಬ್ಬರು ಗಂಭೀರ ಗಾಯಗೊಂಡಿದ್ದಾರೆ.

ಸೋಮವಾರ ರಾತ್ರಿ ಅಲಪ್ಪು ಜಿಲ್ಲೆಯಲ್ಲಿ ಕೇರಳ ರಸ್ತೆ ಸಾರಿಗೆಯ ಬಸ್ ಗೆ ರಾತ್ರಿ 9 ಗಂಟೆ ಏಳು ಮಂದಿ ಎಂಬಿಬಿಎಸ್ ವಿದ್ಯಾರ್ಥಿಗಳ ತಂಡವೊಂದು ಸಾಗುತ್ತಿದ್ದ ಕಾರು ಡಿಕ್ಕಿಯಾಗಿದೆ. ಅಪಘಾತದ ಭೀಕರತೆ ಎಷ್ಟಿತ್ತೆಂದರೆ ಕಾರು ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ. ಈ ಘಟನೆ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

- Advertisement -

Latest News

error: Content is protected !!