Wednesday, May 15, 2024
Homeತಾಜಾ ಸುದ್ದಿಫೇಸ್‌ಬುಕ್‌ ಗೆಳತಿ ತೋಡಿದ ಖೆಡ್ಡಾಗೆ ಬಿದ್ದ ವ್ಯಕ್ತಿ: ಸಿಬಿಐ ಹೆಸರು ಹೇಳಿ 5 ಲಕ್ಷ ರೂ....

ಫೇಸ್‌ಬುಕ್‌ ಗೆಳತಿ ತೋಡಿದ ಖೆಡ್ಡಾಗೆ ಬಿದ್ದ ವ್ಯಕ್ತಿ: ಸಿಬಿಐ ಹೆಸರು ಹೇಳಿ 5 ಲಕ್ಷ ರೂ. ವಂಚನೆ

spot_img
- Advertisement -
- Advertisement -

ಬೆಂಗಳೂರು ಮೂಲದ ನಿವಾಸಿಗೆ ಫೇಸ್ ಬುಕ್ ಮೂಲಕ ಪರಿಚಯಗೊಂಡ ಯುವತಿಯೊಬ್ಬಳು ಆಕೆಯ ಸಹಚರರೊಂದಿಗೆ ಸಿಬಿಐ ಹೆಸರು ಹೇಳಿಕೊಂಡು ಐದು ಲಕ್ಷ ರೂಪಾಯಿ ವಸೂಲಿ ಮಾಡಿ, ವಂಚನೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ.

ಹಣ ಕಳೆದುಕೊಂಡಿರುವ ವ್ಯಕ್ತಿ, ಬೆಂಗಳೂರು ಆಗ್ನೇಯ ವಿಭಾಗದ ಸೈಬರ್ ಕ್ರೈಂ ಠಾಣೆಗೆ ದೂರು ನೀಡಿದ್ದು, ಪೋಲಿಸರು ಯುವತಿ ಹಾಗೂ ಸಹಚರರ ವಿರುದ್ಧ ಎಫ್‌ಐಆರ್‌ ದಾಖಲಿಸಿಕೊಂಡು ಮಾಹಿತಿ ಕಲೆಹಾಕುತ್ತಿದ್ದಾರೆ.

“ವಂಚನೆಗೊಳಗಾದ ವ್ಯಕ್ತಿಗೆ ಫೇಸ್‌ಬುಕ್‌ನಲ್ಲಿ ಯುವತಿಯ ಪರಿಚಯವಾಗಿತ್ತು. ಮೆಸೆಂಜರ್‌ನಲ್ಲಿ ಚಾಟಿಂಗ್ ಮಾಡುತ್ತಿದ್ದ ಇಬ್ಬರೂ ಮೊಬೈಲ್ ನಂಬರ್ ಬದಲಾಯಿಸಿಕೊಂಡಿದ್ದರು. ನಂತರ, ವಾಟ್ಸಪ್‌ನಲ್ಲಿ ಮಾತುಕತೆ ಮುಂದುವರಿಸಿದ್ದರು” ಎಂದು ಪೊಲೀಸ್ ಮೂಲಗಳು ಹೇಳಿವೆ.

ಯುವತಿಯು ರಾತ್ರಿಯಿಡೀ ವಿಡಿಯೋ ಕರೆ ಮಾಡುತ್ತಿದ್ದು, ದೂರುದಾರರನ್ನು ಲೈಂಗಿಕವಾಗಿ ಪ್ರಚೋದಿಸಿ ನಗ್ನವಾಗುವಂತೆ ಮಾಡುತ್ತಿದ್ದಳು. ಅದೇ ವಿಡಿಯೋವನ್ನು ಚಿತ್ರೀಕರಿಸಿಕೊಳ್ಳುತ್ತಿದ್ದಳು. ಕೆಲ ದಿನ ಬಿಟ್ಟು ವಿಡಿಯೋ ಕಳುಹಿಸಿದ್ದ ಯುವತಿ, ಹಣಕ್ಕೆ ಬೇಡಿಕೆ ಇಟ್ಟಿದ್ದಳು ಎನ್ನಲಾಗಿದೆ.

ಆದರೆ ದೂರುದಾರ ಹಣ ನೀಡಿರಲಿಲ್ಲ. ಕೆಲ ದಿನ ಬಿಟ್ಟು ದೂರುದಾರರಿಗೆ ಕರೆ ಮಾಡಿದ್ದ ಅಪರಿಚಿತರು, ಸಿಬಿಐ ಅಧಿಕಾರಿ ಎಂದು ಹೇಳಿಕೊಂಡಿದ್ದರು. ನಿಮ್ಮ ಹೆಸರು ಬರೆದಿಟ್ಟು ಯುವತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರ ಮೊಬೈಲ್‌ನಲ್ಲಿ ನಿಮ್ಮ ನಗ್ನ ವಿಡಿಯೋ ಸಿಕ್ಕಿದೆ. ನಿಮ್ಮ ವಿರುದ್ಧ ಎಫ್‌ಐಆರ್ ದಾಖಲಾಗಿದ್ದು, ಸದ್ಯದಲ್ಲೇ ಮನೆ ಮೇಲೆ ದಾಳಿ ಮಾಡಲಿದ್ದೇವೆ. 5 ಲಕ್ಷ ರೂ. ನೀಡಿದರೆ ನಿಮ್ಮನ್ನು ಪ್ರಕರಣದಿಂದ ಖುಲಾಸೆ ಮಾಡುತ್ತೇವೆ” ಎಂದಿದ್ದರು. ಹೆದರಿದ ದೂರುದಾರ, 5 ಲಕ್ಷ ರೂ. ನೀಡಿದ್ದರು. ಅದಾದ ನಂತರವೂ ಆರೋಪಿಗಳು ಹಣ ಕೇಳಿದ್ದರಿಂದ ದೂರುದಾರ ಠಾಣೆಗೆ ಬಂದು ದೂರು ನೀಡಿದ್ದಾರೆ.

- Advertisement -
spot_img

Latest News

error: Content is protected !!