Thursday, June 25, 2026
Homeತಾಜಾ ಸುದ್ದಿಒಂದೇ ಬಾವಿಯಲ್ಲಿ ಮೂವರು ಸಹೋದರಿಯರು ಹಾಗೂ ಇಬ್ಬರು ಮಕ್ಕಳ ಶವ ಪತ್ತೆ

ಒಂದೇ ಬಾವಿಯಲ್ಲಿ ಮೂವರು ಸಹೋದರಿಯರು ಹಾಗೂ ಇಬ್ಬರು ಮಕ್ಕಳ ಶವ ಪತ್ತೆ

- Advertisement -
- Advertisement -

ರಾಜಸ್ಥಾನ: ಇಲ್ಲಿನ ಜೈಪುರ ಜಿಲ್ಲೆಯ ದುದು ಎಂಬ ಪ್ರದೇಶದ ಸಮೀಪದಲ್ಲಿ ಒಂದೇ ಬಾವಿಯಲ್ಲಿ ಮೂವರು ಸಹೋದರಿಯರು ಹಾಗೂ ಇಬ್ಬರು ಮಕ್ಕಳ ಶವ ಸೇರಿ ಒಟ್ಟು ಐದು ಮೃತದೇಹಗಳು ಪತ್ತೆಯಾಗಿವೆ.


ಈ ಮೂವರೂ ಮೂರು ದಿನಗಳ ಹಿಂದೆ ಕಾಣೆಯಾಗಿದ್ದರು. ಇದೀಗ ಪ್ರಕರಣ ಕುತೂಹಲ ಕೆರಳಿಸಿದ್ದು, ತನಿಖೆ ಪ್ರಗತಿಯಲ್ಲಿದೆ. ಕಲು ಮೀನ (25),ಮಮತಾ ಮೀನ (23), ಕಮ್ಮೇಶ್ ಮೀನ (20) ಶವವಾಗಿ ಪತ್ತೆಯಾಗಿರುವ ಸಹೋದರಿಯರು.ಇನ್ನು ಶವವಾಗಿ ಪತ್ತೆಯಾಗಿರುವ ಮಕ್ಕಳ ಪೈಕಿ ಒಬ್ಬಮಗುವಿಗೆ ನಾಲ್ಕು ವರ್ಷ ಹಾಗೂ ಇನ್ನೊಂದು ಮಗು ಒಂದು ತಿಂಗಳ ಒಳಗಿನದ್ದು ಎಂದು ಅಂದಾಜಿಸಲಾಗಿದೆ.


ಈ ಮೂವರೂ ಒಂದೇ ಕುಟುಂಬದ ಸಹೋದರರನ್ನು ಮದುವೆಯಾಗಿದ್ದರು. ಮತ್ತೊಂದು ದುಃಖದಾಯಕ ಸಂಗತಿ ಎಂದರೆ ಸಾವಿಗೀಡಾದ ಮೂವರು ಸಹೋದರಿಯರ ಪೈಕಿ ಇಬ್ಬರು ಗರ್ಭಿಣಿಯರಾಗಿದ್ದರು. ಕಲು ಮೀನಗೆ ಇಬ್ಬರು ಮಕ್ಕಳಿದ್ದರೆ, ಮಮತಾ ಮತ್ತು ಕಮೇಶ್ ಗರ್ಭಿಣಿಯರಾಗಿದ್ದರು.


ಈ ಸಂಬಂಧ ಸಾವಿಗೀಡಾದ ಸಹೋದರಿಯರ ತಂದೆ ಪೊಲೀಸರಿಗೆ ದೂರು ನೀಡಿದ್ದು, ಎಲ್ಲ ಸಹೋದರಿಯರ ಗಂಡಂದಿರು ಮತ್ತು ಅತ್ತೆ-ಮಾವಂದಿರ ವಿರುದ್ಧ ಕೌಟುಂಬಿಕ ದೌರ್ಜನ್ಯ ಮತ್ತು ವರದಕ್ಷಿಣೆ ಕಿರುಕುಳ ದೂರು ದಾಖಲಾಗಿದೆ.

- Advertisement -

Latest News

error: Content is protected !!