Thursday, July 16, 2026
Homeತಾಜಾ ಸುದ್ದಿರಾಕಿ ಭಾಯ್‌ ಪಾತ್ರದಿಂದ ಪ್ರಭಾವಿತನಾದ ಬಾಲಕ :ಫುಲ್‌ ಪ್ಯಾಕ್‌ ಸಿಗರೇಟ್‌ ಸೇದಿ ಅಸ್ವಸ್ಥ

ರಾಕಿ ಭಾಯ್‌ ಪಾತ್ರದಿಂದ ಪ್ರಭಾವಿತನಾದ ಬಾಲಕ :ಫುಲ್‌ ಪ್ಯಾಕ್‌ ಸಿಗರೇಟ್‌ ಸೇದಿ ಅಸ್ವಸ್ಥ

- Advertisement -
- Advertisement -

ಹೈದರಾಬಾದ್:‌ ಕೆಜಿಎಫ್ ಚಾಪ್ಟರ್ 2 ಸಿನಿಮಾವನ್ನು  ಎರಡು ದಿನಗಳಲ್ಲಿ ಮೂರು ಬಾರಿ ವೀಕ್ಷಿಸಿದ ಬಾಲಕನೋರ್ವ ರಾಕಿ ಭಾಯ್ ಪಾತ್ರದಿಂದ ಸ್ಪೂರ್ತಿ ಪಡೆದು ಅನಾಹುತವನ್ನೇ ಸೃಷ್ಟಿಸಿದ ವಿಚಿತ್ರ ಘಟನೆ ನಡೆದಿದೆ.

ರಾಕಿ ಭಾಯ್ ಪಾತ್ರದಿಂದ ತೀವ್ರವಾಗಿ ಪ್ರಭಾವಿತನಾದ ಹೈದರಾಬಾದ್​ನ 15 ವರ್ಷದ ಹುಡುಗನೊಬ್ಬ ಒಂದು ಫುಲ್ ಪ್ಯಾಕ್ ಸಿಗರೇಟ್ ಸೇದಿ ಅಪಾಯಕ್ಕೆ ಸಿಲುಕಿದ್ದ.. ಬಾಲಕನಿಗೆ ತೀವ್ರ ಗಂಟಲು ನೋವು ಹಾಗೂ ಕೆಮ್ಮು ಕಾಣಿಸಿಕೊಂಡು ತೀವ್ರ ಅಸ್ವಸ್ಥಗೊಂಡ ಕಾರಣ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಇಂದು, ಹೈದರಾಬಾದ್‌ನ ಸೆಂಚುರಿ ಆಸ್ಪತ್ರೆಯ ವೈದ್ಯರು ಹದಿಹರೆಯದವ ಹುಡುಗನಿಗೆ ಕೌನ್ಸೆಲಿಂಗ್ ಮಾಡುವುದರ ಜೊತೆಗೆ ಯಶಸ್ವಿಯಾಗಿ ಚಿಕಿತ್ಸೆ ನೀಡಿದ್ದಾರೆ. ಸದ್ಯ ಬಾಲಕ ಚೇತರಿಸಿಕೊಳ್ಳುತ್ತಿದ್ದಾನೆಂದು ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ.

- Advertisement -

Latest News

error: Content is protected !!