Tuesday, July 1, 2025
Homeಕರಾವಳಿಉಡುಪಿಉಡುಪಿಯಲ್ಲಿ ಕೊರೊನಾ ರುದ್ರ ನರ್ತನ , ಇವತ್ತು 40 ಜನರಿಗೆ ಕೊರೊನಾ ಸೋಂಕು

ಉಡುಪಿಯಲ್ಲಿ ಕೊರೊನಾ ರುದ್ರ ನರ್ತನ , ಇವತ್ತು 40 ಜನರಿಗೆ ಕೊರೊನಾ ಸೋಂಕು

spot_img
- Advertisement -
- Advertisement -

ಉಡುಪಿ : ಉಡುಪಿಯಲ್ಲಿ ಕೋವಿಡ್ -19 ಹಾವಲಿ ಮಿತಿ ಮೀರುತ್ತಿದೆ. ಇವತ್ತು ಒಂದೇ ದಿನ ಮತ್ತೆ 40 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಇದರಿಂದ ಜಿಲ್ಲೆಯ ಸೋಂಕಿತರ ಸಂಖ್ಯೆ 1362ಕ್ಕೆ ಏರಿಕೆಯಾಗಿದೆ.

ಒಟ್ಟು 18542 ಜನರ ಗಂಟಲು ದ್ರವ ಸಂಗ್ರಹಿಸಿದ್ದು, ಅದರಲ್ಲಿ 15540 ವರದಿಗಳು ನೆಗೆಟಿವ್ ಬಂದಿದೆ. 1362 ವರದಿಗಳು ಪಾಸಿಟಿವ್ ಬಂದಿದ್ದು, ಇನ್ನೂ 1640 ವರದಿಗಳು ಇನ್ನು ಬರಬೇಕಿದೆ. ಕೊಲ್ಲೂರು ಸಮೀಪದ ಜಡ್ಕಲ್ ಗ್ರಾಮದ ಕಾನ್ಕಿ ಎಂಬಲ್ಲಿನ ಮೂರು ಮನೆಗಳ ಒಟ್ಟು ನಾಲ್ಕು ಮಂದಿಗೆ ಕೋವಿಡ್-19 ಪಾಸಿಟಿವ್ ಕಂಡು ಬಂದಿದೆ. ಅವರು ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದು, ಕೋವಿಡ್-19 ಹಿನ್ನಲೆಯಲ್ಲಿ ನಾಲ್ಕು ದಿನದ ಹಿಂದೆ ಊರಿಗೆ ಬಂದಿದ್ದರು. ಅವರ ಗಂಟಲ ದ್ರವ ಪರೀಕ್ಷೆಗೆ ಒಳ ಪಡಿಸಿದಾಗ ರೋಗ ಲಕ್ಷಣ ಕಂಡು ಬಂದಿದೆ. ಇಂದು ಮನೆ ಸೀಲ್ ಡೌನ್ ಮಾಡಲಾಗಿದೆ.

ಕುಂದಾಪುರದಲ್ಲಿ ಅನ್ಯ ಜಿಲ್ಲೆಗಳಿಗೆ ಪ್ರಯಾಣ ಬೆಳೆಸುವ ಮೂವರು ಬಸ್ ಚಾಲಕರಿಗೆ ಕೋವಿಡ್-19 ಸೋಂಕು ದೃಢವಾಗಿದೆ. ಈ ಹಿಂದೆ ಕುಂದಾಪುರ- ಬೆಂಗಳೂರು ಬಸ್ ನ ಇಬ್ಬರು ಡ್ರೈವರ್ ಗಳಲ್ಲಿ ಸೋಂಕು ಪತ್ತೆಯಾಗಿದೆ. ಜಿಲ್ಲೆಯಲ್ಲಿ ಇದುವರೆಗೆ 1154 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಮೂವರು ಸೋಂಕಿನಿಂದ ಸಾವನ್ನಪ್ಪಿದ್ದಾರೆ. ಇನ್ನೂ 205 ಜನರಿ ಸಕ್ರಿಯ ಪ್ರಕರಣಗಳಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

- Advertisement -
spot_img

Latest News

error: Content is protected !!