Saturday, June 6, 2026
Homeತಾಜಾ ಸುದ್ದಿ81ನೇ ವಯಸ್ಸಿನಲ್ಲಿ ಭರ್ಜರಿ ಪುಶ್ ಅಪ್ ಹೊಡೆಯುತ್ತಿರುವ ಅಜ್ಜಿ - ವೈರಲ್ ವಿಡಿಯೋ

81ನೇ ವಯಸ್ಸಿನಲ್ಲಿ ಭರ್ಜರಿ ಪುಶ್ ಅಪ್ ಹೊಡೆಯುತ್ತಿರುವ ಅಜ್ಜಿ – ವೈರಲ್ ವಿಡಿಯೋ

- Advertisement -
- Advertisement -

ನವದೆಹಲಿ: ಬಾಲಿವುಡ್ ನಟ, ಮಾಡೆಲ್ ಮಿಲಿಂದ್ ಸೋಮನ್ ಅವರ ತಾಯಿ ಉಷಾ ಸೋಮನ್ ಅವರು ಇತ್ತೀಚೆಗಷ್ಟೇ ತಮ್ಮ 81ನೇ ಹುಟ್ಟು ಹಬ್ಬವನ್ನು ಕುಟುಂಬದೊಂದಿಗೆ ಆಚರಿಸಿಕೊಂಡಿದ್ದು, ಇದೇ ವೇಳೆ 15 ಪುಶ್ ಅಪ್ ಮಾಡಿ ಅಚ್ಚರಿಗೊಳಿಸಿದ್ದಾರೆ. ಸದ್ಯ ಉಷಾ ಸೋಮನ್ ಅವರ ಪುಶ್ ಅಪ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

ಮಿಲಿಂದ್ ಸೋಮನ್ ಅವರು ತಮ್ಮ ಫಿಟ್ನೆಸ್ ಹಿಂದಿನ ಪ್ರೇರಣೆಯಾದ ವಿಡಿಯೋವನ್ನು ಇನ್‍ಸ್ಟಾದಲ್ಲಿ ಪೋಸ್ಟ್ ಮಾಡಿದ್ದಾರೆ. ಉಷಾ ಸೋಮನ್ ಅವರು ಸೀರೆ ಉಟ್ಟು ಪುಶ್ ಅಪ್ ಮಾಡುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ.

ಈ ಹಿಂದೆ ಏಪ್ರಿಲ್‍ನಲ್ಲಿ ಅಂಕಿತಾ ಕೊನ್ವಾರ್ ಅವರು ಇನ್‍ಸ್ಟಾದಲ್ಲಿ ಉಷಾ ಸೋಮನ್ ಅವರೊಂದಿಗೆ ಇರುವ ವಿಡಿಯೋವನ್ನು ಹಂಚಿಕೊಂಡಿದ್ದರು. ವಿಡಿಯೋದಲ್ಲಿ ಅಂಕಿತಾ ಮತ್ತು ಉಷಾ ಅವರು ಒಂದು ಕಾಲಿನ ಓಟ (ಕುಂಟಾನಿಲ್ಲೆ ಆಟ)ದಲ್ಲಿ ಭಾಗಿಯಾಗಿದ್ದರು.

- Advertisement -

Latest News

error: Content is protected !!