Thursday, June 4, 2026
Homeಕರಾವಳಿಮಂಗಳೂರುಕಡಬ; ಆಟೋ ಚಾಲಕ ದಿಢೀರ್ ಬ್ರೇಕ್ ಹಾಕಿದ ಪರಿಣಾಮ ರಸ್ತೆಗೆ ಬಿದ್ದ ನಾಲ್ಕು ವರ್ಷದ ಮಗು;ಗಂಭೀರ...

ಕಡಬ; ಆಟೋ ಚಾಲಕ ದಿಢೀರ್ ಬ್ರೇಕ್ ಹಾಕಿದ ಪರಿಣಾಮ ರಸ್ತೆಗೆ ಬಿದ್ದ ನಾಲ್ಕು ವರ್ಷದ ಮಗು;ಗಂಭೀರ ಗಾಯಗೊಂಡ ಮಗು ಆಸ್ಪತ್ರೆಗೆ ದಾಖಲು

- Advertisement -
- Advertisement -

ಕಡಬ; ಆಟೋ ಚಾಲಕ ದಿಢೀರ್ ಬ್ರೇಕ್ ಹಾಕಿದ ಪರಿಣಾಮ ನಾಲ್ಕು ವರ್ಷದ ಮಗು ರಸ್ತೆಗೆ ಬಿದ್ದು ಗಂಭೀರ ಗಾಯಗೊಂಡ ಘಟನೆ ಕಡಬ ಠಾಣಾ ವ್ಯಾಪ್ತಿಯ ರಾಮಕುಂಜದಲ್ಲಿ ನಡೆದಿದೆ.

ಸಾತ್ವಿಕ್(4) ಗಾಯಗೊಂಡ ಮಗು. ಹಳೇನೇರಂಕಿ-ರಾಮಕುಂಜ ಡಾಮಾರು ರಸ್ತೆಯಲ್ಲಿ ಆತೂರು ಕಡೆಗೆ ಆಟೋರಿಕ್ಷಾ ಚಾಲಕ ತೀರಾ ಅಜಾಗರೂಕತೆ ಮತ್ತು ನಿರ್ಲಕ್ಷ್ಯತನದಿಂದ ವೇಗವಾಗಿ ಚಲಾಯಿಸಿಕೊಂಡು ಇಳಿಜಾರು ರಸ್ತೆಯಲ್ಲಿ ಬ್ರೇಕ್‌ ಹಾಕಿದಾಗ ಆಟೋರಿಕ್ಷಾದಲ್ಲಿದ್ದ ಮಗು ಡಾಂಬರು ರಸ್ತೆಗೆ ಬಿದ್ದು ಗಾಯಗೊಂಡಿದೆ ಎನ್ನಲಾಗಿದೆ.

ಮಗುವನ್ನು ಪುತ್ತೂರು ಆಸ್ಪತ್ರೆಗೆ ಕರೆದೊಯ್ದು ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಒಳರೋಗಿಯಾಗಿ ದಾಖಲಿಸಿರುವುದಾಗಿ ತಿಳಿದು ಬಂದಿದೆ.

- Advertisement -

Latest News

error: Content is protected !!