Friday, April 26, 2024
Homeಇತರಮಸೀದಿಯಲ್ಲಿ ಅಡಗಿಕೊಂಡಿದ್ದ 30 ಮಂದಿ ತಬ್ಲಿಘಿಗಳ ಬಂಧನ: ಇವರಲ್ಲಿ 16 ವಿದೇಶಿಗರು

ಮಸೀದಿಯಲ್ಲಿ ಅಡಗಿಕೊಂಡಿದ್ದ 30 ಮಂದಿ ತಬ್ಲಿಘಿಗಳ ಬಂಧನ: ಇವರಲ್ಲಿ 16 ವಿದೇಶಿಗರು

spot_img
- Advertisement -
- Advertisement -

ಲಕ್ನೋ: ದೆಹಲಿಯಲ್ಲಿ ಮಾರ್ಚ್ ತಿಂಗಳಿನಲ್ಲಿ ನಡೆದ ತಬ್ಲಿಘಿ ಜಮಾತ್ ಕಾರ್ಯಕ್ರಮಕ್ಕೆ ಹೋಗಿ ಅರೋಗ್ಯ ತಪಾಸಣೆಗೆ ಸರಿಯಾಗಿ ಸಹಕರಿಸದೆ ಮಸೀದಿಯಲ್ಲಿ ಅಡಗಿ ಕೂತಿದ್ದ ಅಲಹಾಬಾದ್ ವಿಶ್ವವಿದ್ಯಾಲಯದ ಪ್ರೊಫೆಸರ್, 16 ವಿದೇಶಿಯರನ್ನು ಸೇರಿದಂತೆ ಒಟ್ಟು 30 ಮಂದಿಯನ್ನು ಉತ್ತರ ಪ್ರದೇಶದ ಪೊಲೀಸರು ಬಂಧಿಸಿದ್ದಾರೆ.

ತಬ್ಲಿಘಿ ಜಮಾತ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಪ್ರೊಫೆಸರ್ ಮೊಹಮ್ಮದ್ ಶಾಹಿದ್, ಲಾಕ್‍ಡೌನ್ ಘೋಷಿಸಿದ ನಂತರವೂ ಪ್ರಯಾಗರಾಜ್‍ನ ಮಸೀದಿಯಲ್ಲಿ ತಮ್ಮ `ಅಕ್ರಮ’ ವಾಸ್ತವ್ಯವನ್ನು ಏರ್ಪಡಿಸಿದ್ದರು. ಈ ಮೂಲಕ ವಿದೇಶಿಗರಿಗೆ ಉದ್ದೇಶಪೂರ್ವಕವಾಗಿ ಸಹಾಯ ಮಾಡಿದ್ದರು. ಹೀಗಾಗಿ ಅವರನ್ನು ಪ್ರಯಾಗರಾಜ್ ಪೊಲೀಸರು ಬಂಧಿಸಿ ಜೈಲಿಗೆ ಅಟ್ಟಿದ್ದಾರೆ.
ಬಂಧಿತ 16 ವಿದೇಶಿ ಪ್ರಜೆಗಳಲ್ಲಿ ಒಂಬತ್ತು ಮಂದಿ ಥೈಲ್ಯಾಂಡ್ ಮೂಲದವರು ಮತ್ತು ಆರು ಜನರು ಇಂಡೋನೇಷ್ಯಾದವರು. ಅಷ್ಟೇ ಅಲ್ಲದೆ ಬಂಧಿತ ಆರೋಪಿಗಳಲ್ಲಿ ಕೇರಳ ಮತ್ತು ಪಶ್ಚಿಮ ಬಂಗಾಳದ ತಲಾ ಒಬ್ಬರಿದ್ದಾರೆ.

ಪೊಲೀಸ್ ಮೂಲಗಳ ಪ್ರಕಾರ, ಎಲ್ಲಾ ಜಮಾತಿಗಳು ಶಹಗಂಜ್‍ನ ಅಬ್ದುಲ್ಲಾ ಮಸೀದಿ ಮತ್ತು ಪ್ರಯಾಗರಾಜ್‍ನ ಕರೇಲಿ ಪ್ರದೇಶದ ಹೇರಾ ಮಸೀದಿಯೊಳಗೆ ಅಡಗಿಕೊಂಡಿದ್ದರು. ಹೆಚ್ಚಿನ ತನಿಖೆಯಲ್ಲಿ ಎಲ್ಲಾ ವಿದೇಶಿಯರು, ವಿಶೇಷವಾಗಿ ಇಂಡೋನೇಷಿಯನ್ನರು ಪ್ರವಾಸಿ ವೀಸಾ ಪಡೆದು ಭಾರತಕ್ಕೆ ಭೇಟಿ ನೀಡಿದ್ದರೂ ಧಾರ್ಮಿಕ ಉಪದೇಶದಲ್ಲಿ ತೊಡಗಿದ್ದಾರೆ ಎಂದು ತಿಳಿದುಬಂದಿದೆ.

- Advertisement -
spot_img

Latest News

error: Content is protected !!