Saturday, May 4, 2024
Homeತಾಜಾ ಸುದ್ದಿಜಮ್ಮುಕಾಶ್ಮೀರದಲ್ಲಿ ಸೇನಾ ಕಾರ್ಯಾಚರಣೆ : ಮೂವರು ಉಗ್ರರು ಫಿನಿಶ್

ಜಮ್ಮುಕಾಶ್ಮೀರದಲ್ಲಿ ಸೇನಾ ಕಾರ್ಯಾಚರಣೆ : ಮೂವರು ಉಗ್ರರು ಫಿನಿಶ್

spot_img
- Advertisement -
- Advertisement -

ಶ್ರೀನಗರ ಜೂ.16: ಜಮ್ಮು ಕಾಶ್ಮೀರದಲ್ಲಿ ಇಂದು ಮುಂಜಾನೆ ನಡೆದ ಕಾರ್ಯಾಚರಣೆಯಲ್ಲಿ ಮೂವರು ಉಗ್ರರನ್ನು ಹತ್ಯೆ ಮಾಡಲಾಗಿದೆ. ಈ ಮೂಲಕ ಕೇವಲ ಎರಡು ವಾರಗಳಲ್ಲಿ 14 ಭಯೋತ್ಪಾದಕರನ್ನು ಸೇನೆ ಹತ್ಯೆ ಮಾಡಿದಂತಾಗಿದೆ.
ಶ್ರೀನಗರದ ಶೋಫಿಯಾನ್ ಜಿಲ್ಲೆಯ ತುರ್ಕಾವಾಂಗಂ ಭಾಗದಲ್ಲಿ ರಾಷ್ಟ್ರೀಯ ರೈಫಲ್ಸ್ ಹಾಗೂ ಭಯೋತ್ಪಾದಕರ ನಡುವೆ ಬೆಳಗ್ಗೆ 5 ಗಂಟೆ ಸುಮಾರಿಗೆ ಗುಂಡಿನ ಚಕಮಕಿ ನಡೆದಿದೆ. ಬಳಿಕ ವಿಶೇಷ ಕಾರ್ಯಾಚರಣೆ ತಂಡ, ಕೇಂದ್ರ ಮೀಸಲು ಪಡೆ ಕಾರ್ಯಚರಣೆಯಲ್ಲಿ ಭಾಗಿಯಾಗಿದ್ದವು.ಮುಂಜಾನೆ 6:30ರ ಸುಮಾರಿಗೆ ಕಾರ್ಯಾಚರಣೆ ಪೂರ್ಣಗೊಂಡಿದೆ.
ಈ ಬಗ್ಗೆ ಕಾಶ್ಮೀರ ಪೊಲೀಸರು ಟ್ವೀಟ್​ ಮಾಡಿ ಮಾಹಿತಿ ನೀಡಿದ್ದು, ಮೂವರು ಉಗ್ರರನ್ನು ಹತ್ಯೆ ಮಾಡಲಾಗಿದೆ ಎಂದಿದ್ದಾರೆ. ಈ ಮೂಲಕ ಕಣಿವೆ ರಾಜ್ಯವನ್ನು ಉಗ್ರ ಮುಕ್ತವನ್ನಾಗಿ ಮಾಡುವ ಕಾರ್ಯಾಚರಣೆ ಮುಂದುವರಿದಿದೆ

- Advertisement -
spot_img

Latest News

error: Content is protected !!