ನವದೆಹಲಿ: ಕೋವಿಡ್ 19 ಮಹಾಮಾರಿಯಿಂದ ದೇಶದ ಜನಜೀವನ ತತ್ತರಿಸಿರುವ ಈ ಸಂಧರ್ಭದಲ್ಲಿ ಜನ್ ಧನ್ ಖಾತೆ ಹೊಂದಿದ ಮಹಿಳೆಯರಿಗೆ ಇಂದಿನಿಂದ ಎರಡನೇ ಕಂತಿನ ಹಣ ಪಾವತಿಸಲಾಗುವುದು.
ದೇಶಾದ್ಯಂತ ಜನ್ ಧನ್ ಖಾತೆ ಹೊಂದಿದ ಮಹಿಳೆಯರ ಪ್ರತಿ ಖಾತೆಗೆ 500 ರೂಪಾಯಿಯನ್ನು ಜಮೆ ಮಾಡಲಾಗುವುದು. ಕೊರೋನಾ ಸೋಂಕು ತಡೆಯಲು ಲಾಕ್ಡೌನ್ ಜಾರಿ ಮಾಡಿರುವುದರಿಂದ ಸಂಕಷ್ಟದಲ್ಲಿರುವ ಮಹಿಳೆಯರಿಗೆ ನೆರವಾಗಲು ಸರ್ಕಾರ ಕ್ರಮಕೈಗೊಂಡಿದೆ.
ಮೇ 4 ರಿಂದ 500 ರೂಪಾಯಿ 2ನೇ ಕಂತಿನ ಹಣವನ್ನು ಜನ್ ಧನ್ ಖಾತೆ ಹೊಂದಿದ ಮಹಿಳೆಯರ ಖಾತೆಗೆ ಜಮಾ ಮಾಡಲಾಗುವುದು. ಮೇ 4ರಂದು ಖಾತೆಯಲ್ಲಿ ಕೊನೆಯ ಸಂಖ್ಯೆ 0 ಅಥವಾ 1 ಇದ್ದವರಿಗೆ, ಮೇ 5 ರಂದು ಖಾತೆಯ ಕೊನೆಯ ಸಂಖ್ಯೆ 2 ಅಥವಾ 3 ಇದ್ದವರ ಖಾತೆಗೆ ಹಣ ಜಮಾ ಆಗಲಿದೆ.
ಮೇ 6 ರಂದು ಖಾತೆಯ ಕೊನೆಯ ಸಂಖ್ಯೆ 4 ಅಥವಾ 5 ಇದ್ದವರಿಗೆ, ಮೇ 8 ರಂದು ಖಾತೆಯ ಕೊನೆಯ ಸಂಖ್ಯೆ 6 ಅಥವಾ 7 ಇದ್ದವರಿಗೆ, ಮೇ 11 ರಂದು ಖಾತೆಯ ಕೊನೆಯ ಸಂಖ್ಯೆ 8 ಅಥವಾ 9 ಇದ್ದವರಿಗೆ ಹಣ ಜಮಾ ಮಾಡಲಾಗುವುದು ಎಂದು ಹೇಳಲಾಗಿದೆ.
ಖಾತೆಗೆ ಪಾವತಿಯಾದ ಹಣ ವಾಪಸ್ ಹೋಗಲ್ಲ, ಯಾವಾಗ ಬೇಕಾದರೂ ಪಡೆಯಬಹುದಾಗಿದೆ. ಇದರಿಂದ ಹಣ ಪಡೆಯಲು ಬ್ಯಾಂಕ್ ಗಳಲ್ಲಿ ನೂಕುನುಗ್ಗಲು ಉಂಟಾಗುವುದನ್ನು ತಪ್ಪಿಸಬಹುದಾಗಿದೆ ಎನ್ನಲಾಗಿದೆ.