ನವದೆಹಲಿ: ಲಾಕ್ ಡೌನ್ ಜಾರಿಯಾಗಿದ್ದರಿಂದ ತೈಲ ಬೇಡಿಕೆ ಕುಸಿದಿದೆ. ಸಾಮಾನ್ಯ ಪೆಟ್ರೋಲ್ ಲೀಟರ್ ಗೆ 73 ರೂಪಾಯಿ ಇದ್ದರೆ, ವೈಮಾನಿಕ ಇಂಧನ ದರ ಲೀಟರ್ ಗೆ 23 ರೂಪಾಯಿ ಇದೆ.
ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಯಲ್ಲಿ ಭಾರಿ ಇಳಿಕೆ ಕಂಡ ಪರಿಣಾಮ ಭಾರತದಲ್ಲಿ ವೈಮಾನಿಕ ಇಂಧನ ದರವನ್ನು ಶೇಕಡ 23.2 ರಷ್ಟು ಇಳಿಕೆ ಮಾಡಲಾಗಿದೆ. ಪ್ರತಿ 1000 ಲೀಟರ್ ಗೆ 29,536 ರೂಪಾಯಿ ಇದ್ದ ದರವನ್ನು 6812 ರೂ.ನಷ್ಟು ಕಡಿಮೆ ಮಾಡಿದ್ದು ಪ್ರತಿ ಲೀಟರ್ ವೈಮಾನಿಕ ಇಂಧನದ ಬೆಲೆ ಕೇವಲ 22.54 ರೂಪಾಯಿ ಆಗಿದೆ.
ಬೈಕ್, ಕಾರ್ ಗಳಿಗೆ ಬಳಸುವ ಪೆಟ್ರೋಲ್ ಗಿಂತ ಶೇಕಡ 70 ರಷ್ಟು ವಿಮಾನ ಇಂಧನ ಕಡಿಮೆಯಾಗಿದೆ. ಕಚ್ಚಾತೈಲದ ಬೆಲೆಯಲ್ಲಿ ಭಾರಿ ಇಳಿಕೆ ಮಾಡಲಾಗಿದ್ದರೂ ಕೇಂದ್ರ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಹೆಚ್ಚಳ ಮಾಡುವ ಮೂಲಕ ಬೆಲೆ ಇಳಿಕೆಯ ಲಾಭ ಗ್ರಾಹಕರಿಗೆ ವರ್ಗಾವಣೆಯಾಗದಂತೆ ತಡೆದಿದೆ. ಇದರಿಂದಾಗಿ ಕಚ್ಚಾತೈಲದ ಬೆಲೆ ಇಳಿಕೆಯಾಗಿದ್ದರೂ ದೇಶಿಯ ಮಾರುಕಟ್ಟೆಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರ ಯಥಾಸ್ಥಿತಿಯಲ್ಲಿ ಮುಂದುವರೆದಿದೆ.