Friday, May 17, 2024
Homeತಾಜಾ ಸುದ್ದಿನಕಲಿ ವಿಜ್ಞಾನಿ 'ಡ್ರೋನ್ ಪ್ರತಾಪ್' ವಿರುದ್ಧ ಮತ್ತೊಂದು ಎಫ್​ಐಆರ್ ದಾಖಲು

ನಕಲಿ ವಿಜ್ಞಾನಿ ‘ಡ್ರೋನ್ ಪ್ರತಾಪ್’ ವಿರುದ್ಧ ಮತ್ತೊಂದು ಎಫ್​ಐಆರ್ ದಾಖಲು

spot_img
- Advertisement -
- Advertisement -

ಬೆಂಗಳೂರು : ಸಾಂಸ್ಥಿಕ ಕ್ವಾರಂಟೈನ್ ನಿಯಮ ಉಲ್ಲಂಘನೆ ಮಾಡಿದ ಕಾರಣಕ್ಕೆ ಡ್ರೋನ್ ಪ್ರತಾಪ್ ವಿರುದ್ಧ 2ನೇ ಎಫ್‌ಐಆರ್ ದಾಖಲಾಗಿದೆ. ಹೋಂ ಕ್ವಾರಂಟೈನ್ ನಿಯಮ ಉಲ್ಲಂಘಿಸಿದ ಕಾರಣಕ್ಕೆ ಮೊದಲ ಎಫ್‌ಐಆರ್ ದಾಖಲಾಗಿತ್ತು.

ಏನಿದು ಎರಡನೇ ಪ್ರಕರಣ ?
ಜೂ.20ರಂದು ರಿಚ್‍ಮಂಡ್ ವೃತ್ತದ ಬಳಿಯಿರೋ ಸ್ಟಾರ್ ಹೋಟೆಲ್​ನಲ್ಲಿ ಪ್ರತಾಪ್‍ನನ್ನು ಕ್ವಾರಂಟೀನ್​ಗೆ ಒಳಪಡಿಸಲಾಗಿತ್ತು. ಸೋಮವಾರದ ವೇಳೆಗೆ ಕ್ವಾರಂಟೀನ್​ ಅವಧಿ ಮುಗಿಯುತ್ತಿತ್ತು. ಅದಕ್ಕೂ ಮುನ್ನ ತನ್ನೊಟ್ಟಿಗೆ ಚರ್ಚಿಸಲು ತಮ್ಮ ವಕೀಲರನ್ನು ಹೋಟೆಲ್‍ಗೆ ಕರೆಸುವ ಮೂಲಕ ಪ್ರತಾಪ್​ ಕ್ವಾರಂಟೀನ್​ ನಿಯಮ ಉಲ್ಲಂಘನೆ ಮಾಡಿದ್ದಾರೆ.

ಸಾಂಸ್ಥಿಕ ಕ್ವಾರಂಟೈನ್‌ನಲ್ಲಿರುವವರು ಯಾರನ್ನೂ ಭೇಟಿ ಮಾಡುವಂತಿಲ್ಲ. ಹೋಟೆಲ್‌ ರೂಂಗೆ ಯಾರನ್ನೂ ಕರೆಸಿಕೊಳ್ಳುವಂತಿಲ್ಲ. ವಕೀಲರನ್ನು ಕರೆಸಿಕೊಂಡು 1 ತಾಸಿಗೂ ಅಧಿಕ ಕಾಲ ಚರ್ಚೆ ಮಾಡಿರುವುದು ಸಿಸಿಟಿವಿ ದೃಶ್ಯಾವಳಿಯಲ್ಲಿ ಸೆರೆಯಾಗಿದೆ.

ಆದ್ದರಿಂದ, ಬೆಂಗಳೂರು ಪೊಲೀಸರು ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾಯ್ದೆ ಸೆಕ್ಷನ್ 51ಬಿ ಅಡಿಯಲ್ಲಿ ಐಪಿಸಿ ಸೆಕ್ಷನ್ 188, 269, 270 ಹಾಗೂ 271 ಅಡಿ ಡ್ರೋನ್ ಪ್ರತಾಪ್ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ. ಈ ಹಿಂದೆ ತಲಘಟ್ಟಪುರ ಪೊಲೀಸ್ ಠಾಣೆಯಲ್ಲಿ ಪ್ರತಾಪ್ ವಿರುದ್ಧ ಎಫ್‌ಐಆರ್ ದಾಖಲಾಗಿತ್ತು.

- Advertisement -
spot_img

Latest News

error: Content is protected !!