Saturday, August 29, 2026
Homeಕರಾವಳಿಮಂಗಳೂರುಹಾಸನಾಂಬಾ ದೇವಸ್ಥಾನದಲ್ಲಿ ಈ ಬಾರಿ ದಾಖಲೆಯ 25 ಕೋಟಿ 59 ಲಕ್ಷಕ್ಕೂ ಹೆಚ್ಚು ಆದಾಯ ಸಂಗ್ರಹ

ಹಾಸನಾಂಬಾ ದೇವಸ್ಥಾನದಲ್ಲಿ ಈ ಬಾರಿ ದಾಖಲೆಯ 25 ಕೋಟಿ 59 ಲಕ್ಷಕ್ಕೂ ಹೆಚ್ಚು ಆದಾಯ ಸಂಗ್ರಹ

- Advertisement -
- Advertisement -

ಹಾಸನ: ಹಾಸನಾಂಬಾ ಜಾತ್ರಾ ಮಹೋತ್ಸವ ಮುಕ್ತಾಯದ ಬಳಿಕ ದೇವಸ್ಥಾನದ ಹುಂಡಿ ಎಣಿಕೆ ಕಾರ್ಯ ನಡೆಸಲಾಗಿದ್ದು, ಈ ಬಾರಿ ಅತಿ ಹೆಚ್ಚು ಆದಾಯ ಸಂಗ್ರಹವಾಗಿದೆ.

ವಿಶೇಷ ದರ್ಶನದ ಸಾವಿರ ರೂಪಾಯಿ, ಮುನ್ನೂರು ರೂಪಾಯಿ ಟಿಕೆಟ್‌ ಮತ್ತು ಲಾಡು ಮಾರಾಟದಿಂದ 21 ಕೋಟಿ 91 ಲಕ್ಷದ 75 ಸಾವಿರದ 52 ರೂಪಾಯಿ ಮತ್ತು ದೇವಸ್ಥಾನದ ಹುಂಡಿಯಲ್ಲಿ 3 ಕೋಟಿ 68 ಲಕ್ಷದ 12 ಸಾವಿರದ 275 ರೂಪಾಯಿ ಸೇರಿ ಒಟ್ಟು 25 ಕೋಟಿ 59 ಲಕ್ಷದ 87 ಸಾವಿರದ 327 ರೂಪಾಯಿ ಹಣ ಸಂಗ್ರಹವಾಗಿದೆ.

ಅಲ್ಲದೇ ಕಾಣಿಕೆ ರೂಪದಲ್ಲಿ 75 ಗ್ರಾಂ 300 ಮಿಲಿ ಚಿನ್ನ, ಬೆಳ್ಳಿ 1 ಕೆಜಿ 58 ಗ್ರಾಂ 400 ಮಿಲಿ ಬೆಳ್ಳಿ ವಸ್ತುಗಳನ್ನು ಭಕ್ತರು ಹುಂಡಿಗೆ ‌ಸಮರ್ಪಿಸಿದ್ದಾರೆ.

ಇದೇ ವೇಳೆ 7,653 ರೂಪಾಯಿ ಮೊತ್ತದ ವಿದೇಶಿ ಕರೆನ್ಸಿ ಹುಂಡಿಗೆ ಹಾಕಲ್ಪಟ್ಟಿದ್ದು, 42,530 ರೂಪಾಯಿ ಹಳೆಯ ನೋಟುಗಳನ್ನೂ ಭಕ್ತರು ಹುಂಡಿಗೆ ಹಾಕಿದ್ದಾರೆ.

ಇದೇ ವೇಳೆ, ಸಿದ್ದೇಶ್ವರ ಸ್ವಾಮಿ ದೇವಾಲಯದಲ್ಲಿ ಈ ಬಾರಿ 15,17,785 ರೂಪಾಯಿ ಕಾಣಿಕೆಯನ್ನು ಭಕ್ತರು ಹಾಕಿದ್ದಾರೆ.

- Advertisement -

Latest News

error: Content is protected !!