Saturday, May 18, 2024
Homeಕರಾವಳಿಮಂಗಳೂರು: ರಸ್ತೆ ಬದಿ ಕಸ ಹಾಕಿದ ಫಾಸ್ಟ್ ಪುಡ್ ಅಂಗಡಿ ನೌಕರ : ತ್ಯಾಜ್ಯ ಸುರಿದವನಿಗೆ...

ಮಂಗಳೂರು: ರಸ್ತೆ ಬದಿ ಕಸ ಹಾಕಿದ ಫಾಸ್ಟ್ ಪುಡ್ ಅಂಗಡಿ ನೌಕರ : ತ್ಯಾಜ್ಯ ಸುರಿದವನಿಗೆ ಬಿತ್ತು ಬರೋಬ್ಬರಿ 20 ರೂ. ಸಾವಿರ ಫೈನ್

spot_img
- Advertisement -
- Advertisement -

ಮಂಗಳೂರು: ಕಂಕನಾಡಿ ಮಾರುಕಟ್ಟೆ ರಸ್ತೆ ಬದಿಗೆ ಕಸ ಎಸೆಯುತ್ತಿದ್ದ ಫಾಸ್ಟ್ ಫುಡ್ ಅಂಗಡಿಯೊಂದರ ನೌಕರನಿಗೆ ಮಂಗಳೂರು ಮಹಾನಗರ ಪಾಲಿಕೆ ಚೆನ್ನಾಗಿಯೇ ಶಾಕ್ ಕೊಟ್ಟಿದೆ. ನೌಕರನಿಗೆ ಬರೋಬ್ಬರಿ 20 ಸಾವಿರ ರೂ. ದಂಡ ವಿಧಿಸಿದೆ.

ಈ ರಸ್ತೆಯಲ್ಲಿ ಕಸ ಎಸೆಯುತ್ತಿದ್ದ ಕಾರಣ ಬ್ಲ್ಯಾಕ್ ಸ್ಪಾಟ್ ಎಂದು ಬಿಂಬಿತವಾಗಿತ್ತು.ಇತ್ತೀಚೆಗೆ ಈ ಸ್ಥಳವನ್ನು ನಗರ ಪಾಲಿಕೆ ಸ್ವಚ್ಛಗೊಳಿಸಿತ್ತು. ಅದಾದ ಬಳಿಕ ಕಸ ಎಸೆಯುವುದು ನಿಯಂತ್ರಣಕ್ಕೆ ಬಂದಿತ್ತು. ಆದರೆ ಕಳೆದ ಕೆಲವು ದಿನಗಳಿಂದ ಮತ್ತೆ ಕಸ ಎಸೆಯುತ್ತಿದ್ದರು.

ನಿನ್ನೆ ಫಾಸ್ಟ್ ಫುಡ್ ಅಂಗಡಿಯ ನೌಕರನೊಬ್ಬ ಕಸ ಎಸೆಯುತ್ತಿದ್ದ ಬಗ್ಗೆ ಮಾಹಿತಿ ಪಡೆದ ಮನಪಾ ಅಧಿಕಾರಿಗಳು ದಿಢೀರ್ ದಾಳಿ ನಡೆಸಿ ಕಸ ಎಸೆಯುತ್ತಿದ್ದ ವ್ಯಕ್ತಿಗೆ 20 ಸಾವಿರ ರೂ. ದಂಡ ವಿಧಿಸಿದ್ದಾರೆ.ʼಬ್ಯೂಟಿಫುಲ್ ಸ್ಪಾಟ್ʼ ಮಾಡಿದ ಜಾಗದಲ್ಲಿ ತ್ಯಾಜ್ಯ ಹಾಕಿ ಮತ್ತೆ ಬ್ಲ್ಯಾಕ್ ಸ್ಪಾಟ್ ಮಾಡಿದ ಕಾರಣವನ್ನೂ ದಂಡದ ರಶೀದಿಯಲ್ಲಿ ನಮೂದಿಸಿದ್ದಾರೆ.

ಕಾರ್ಯಾಚರಣೆಯಲ್ಲಿ ಪಾಲಿಕೆಯ ಆರೋಗ್ಯ ನಿರೀಕ್ಷಕರಾದ ಶಿವಲಿಂಗ, ರಕ್ಷಿತಾ, ಮಲೇರಿಯಾ ಮೇಲ್ವಿಚಾರಕ ಚಂದ್ರಹಾಸ್ ಪಾಲ್ಗೊಂಡಿದ್ದರು.

- Advertisement -
spot_img

Latest News

error: Content is protected !!