Thursday, May 9, 2024
Homeಕರಾವಳಿಉಡುಪಿಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ 17 ಮತ್ತು ಉಡುಪಿ ಜಿಲ್ಲೆಯ...

ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ 17 ಮತ್ತು ಉಡುಪಿ ಜಿಲ್ಲೆಯ 5 ವಿದ್ಯಾರ್ಥಿಗಳಿಗೆ 625 ಅಂಕ

spot_img
- Advertisement -
- Advertisement -

ಬೆಂಗಳೂರು: ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ 17 ವಿದ್ಯಾರ್ಥಿಗಳು ಮತ್ತು ಉಡುಪಿ ಜಿಲ್ಲೆಯ 5 ವಿದ್ಯಾರ್ಥಿಗಳು 625 ಅಂಕಗಳಿಗೆ 625 ಅಂಕಗಳನ್ನು ಪಡೆದಿದ್ದಾರೆ. ‌

ಉಡುಪಿ ಜಿಲ್ಲೆಯಲ್ಲಿ ಉಡುಪಿ ತಾಲೂಕಿನ ಬಾಲಕಿಯರ ಸರ್ಕಾರಿ ಜೂನಿಯರ್ ಕಾಲೇಜಿನ ಗಾಯತ್ರಿ, ಕುಂದಾಪುರ ತಾಲೂಕಿನ ಕಾಳಾವರ ಸರ್ಕಾರಿ ಹೈಸ್ಕೂಲ್ ನ ನಿಶಾ, ಉಡುಪಿ ತಾಲೂಕಿನ ಮಲ್ಪೆ ಸರ್ಕಾರಿ‌ ಜೂನಿಯರ್ ಕಾಲೇಜಿನ ಪುನೀತ್ ನಾಯ್ಕ, ಕುಂದಾಪುರ ತಾಲೂಕಿನ ಸಿದ್ದಾಪುರ ಸರ್ಕಾರಿ ಹೈ ಸ್ಕೂಲ್ ನ ವೈಷ್ಣವಿ ಶೆಟ್ಟಿ, ಬೈಂದೂರು ತಾಲೂಕಿನ ಸಾಂದೀಪನ ಇಂಗ್ಲಿಷ್ ಮೀಡಿಯಂ ಸ್ಕೂಲ್ ನ ಅಕ್ಷತಾ 625 ಅಂಕಗಳನ್ನು ಪಡೆದಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬೆಳ್ತಂಗಡಿ ತಾಲೂಕಿನ ಮಚ್ಚಿನ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ರೋಷನ್, ಸುಳ್ಯ ತಾಲೂಕಿನ ಬೆಳ್ಳಾರೆಯ ಕರ್ನಾಟಕ ಪಬ್ಲಿಕ್ ಸ್ಕೂಲ್ ನ ಸಾತ್ವಿಕ್ ಹೆಚ್.ಎಸ್., ಬಂಟ್ವಾಳ ತಾಲೂಕಿನ ಸತ್ಯಸಾಯಿ ಲೋಕಸೇವಾ ಹೈಸ್ಕೂಲ್ ನ ಸುಜಯ್ ಬಿ., ಮೂಡಬಿದಿರೆ ತಾಲೂಕಿನ ಆಳ್ವಾಸ್ ಕನ್ನಡ ಮಾಧ್ಯಮ ಹೈಸ್ಕೂಲ್ ನ ಇಂದಿರಾ ಅರುಣ್ ನ್ಯಾಮಗೌಡರ್, ಈರಯ್ಯ ಶ್ರೀಶೈಲ್ ಶೇಗುಣಸಿಮಠ್, ಕಲ್ಮೇಶ್ವರ್ ಪುಂಡಲೀಕ ನಾಯ್ಕ್, ಶ್ರೇಯಾ ಶೆಟ್ಟಿ, ಸುದೇಶ್ ದತ್ತಾತ್ರೇಯ ಕಿಲ್ಲೇದಾರ್, ಪುತ್ತೂರು ತಾಲೂಕಿನ ವಿವೇಕಾನಂದ ಇಂಗ್ಲಿಷ್ ಮೀಡಿಯಂ ಹೈಸ್ಕೂಲ್ ನ ಅಭಯ್ ಶರ್ಮಾ, ಅಭಿಜ್ಞಾ ಆರ್., ಅತ್ಮೀಯ ಕಶ್ಯಪ್, ಬಂಟ್ವಾಳ ತಾಲೂಕಿನ ವಿಟ್ಲ ಜೇಸೀಸ್ ಇಂಗ್ಲಿಷ್ ಮೀಡಿಯಂ ಹೈಸ್ಕೂಲ್ ನ ಧನ್ಯಶ್ರೀ, ಬೆಳ್ತಂಗಡಿ ತಾಲೂಕಿನ ಸೇಂಟ್ ಮೇರೀಸ್ ಹೈಸ್ಕೂಲ್ ನ ಮಧುಶ್ರೀ, ಮೂಡಬಿದಿರೆ ತಾಲೂಕಿನ ರೋಟರಿ ಹೈಸ್ಕೂಲ್ ನ ಶ್ರೀಜಾ ಹೆಬ್ಬಾರ್, ಸ್ವಸ್ಥಿ, ಮಂಗಳೂರು ತಾಲೂಕಿನ ಮೂಲ್ಕಿ ವ್ಯಾಸ ಮಹರ್ಷಿ ವಿದ್ಯಾಪೀಠದ ಅಕ್ಷತಾ ಕಾಮತ್, ವೀಕ್ಷಾ ಶೆಟ್ಟಿ 625 ಅಂಕಗಳನ್ನು ಪಡೆದಿದ್ದಾರೆ.

ರಾಜ್ಯದಲ್ಲಿ ಒಟ್ಟು 145 ವಿದ್ಯಾರ್ಥಿಗಳು 625 ಅಂಕಗಳನ್ನು ಪಡೆದಿರುವ ಸಾಧನೆ ಮಾಡಿದ್ದಾರೆ.

- Advertisement -
spot_img

Latest News

error: Content is protected !!