Thursday, June 4, 2026
Homeಕರಾವಳಿಮತ್ತೆ ಕೊರೋನಾ 'ಹಾಟ್ ಸ್ಪಾಟ್' ಆಗುತ್ತಿರುವ ಬಂಟ್ವಾಳ: ಪುದು ಗ್ರಾಮದಲ್ಲಿ ಒಂದೇ ದಿನ 16 ಕೋವಿಡ್...

ಮತ್ತೆ ಕೊರೋನಾ ‘ಹಾಟ್ ಸ್ಪಾಟ್’ ಆಗುತ್ತಿರುವ ಬಂಟ್ವಾಳ: ಪುದು ಗ್ರಾಮದಲ್ಲಿ ಒಂದೇ ದಿನ 16 ಕೋವಿಡ್ ಸೋಂಕು ಪ್ರಕರಣ

- Advertisement -
- Advertisement -

ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. 2-3 ದಿನಗಳಿಂದ ಬರುತ್ತಿರುವ ಸೋಂಕಿತರ ಪಟ್ಟಿಯನ್ನು ಗಮನಿಸಿದಾಗ ಸದ್ಯ ಮಂಗಳೂರು ಎಲ್ಲಿ ಕೊರೋನಾ ಹಾವಳಿಯಲ್ಲಿ ‘ಮಿನಿ ಬೆಂಗಳೂರು’ ಆಗಿ ಬಿಡುತ್ತದೆಯೋ ಎಂದು ಜನರಲ್ಲಿ ಭಯ ಮೂಡಿದೆ.

ಇದಕ್ಕೆ ಕಾರಣವೂ ಇದೆ. ಬಂಟ್ವಾಳ ತಾಲೂಕಿನ ಪುದು ಗ್ರಾಮಗರವೊಂದರಲ್ಲಿ ಇಂದು ಒಂದೇ ದಿನ 16 ಜನರಿಗೆ ಕೋವಿಡ್-19 ಸೋಂಕು ದೃಢವಾಗಿದೆ.

ಗ್ರಾಮದ ಒಂದು ಮನೆಯ 12 ಜನರಿಗೆ ಹಾಗೂ ಇನ್ನೊಂದು ಮನೆಯ ನಾಲ್ಕು ಮಂದಿಗೆ ಸೋಂಕು ದೃಢಪಟ್ಟಿದೆ. ಕಳೆದ ಕೆಲವು ದಿನಗಳ ಹಿಂದೆ ಈ ಎರಡೂ ಮನೆಗಳ ಸದಸ್ಯರಿಗೆ ಸೋಂಕು ದೃಢಪಟ್ಟಿತ್ತು. ಇವರ ಸಂಪರ್ಕದ ಕಾರಣದಿಂದ ಸೋಂಕು ದೃಢವಾಗಿದೆ ಎನ್ನಲಾಗಿದೆ.

ಬಂಟ್ವಾಳದಲ್ಲಿ ಜುಲೈ 8ರಂದು 12, 9ರಂದು(ನಿನ್ನೆ) 26 ಪ್ರಕರಣಗಳು ವರದಿಯಾಗಿದ್ದವು. ತಾಲೂಕಿನಲ್ಲಿ ಇಂದು ಒಟ್ಟು ಸೋಂಕಿತರ ಸಂಖ್ಯೆ ಇನ್ನಷ್ಟೇ ಘೋಷಣೆ ಮಾಡಬೇಕಷ್ಟೆ.

- Advertisement -

Latest News

error: Content is protected !!