Friday, June 27, 2025
Homeತಾಜಾ ಸುದ್ದಿಮಗುವಿನ ಮುಖದಲ್ಲಿ ಕಳೆದು ಹೋಗಿದ್ದ ನಗು ಮತ್ತೆ ಮೂಡಿಸಿದ 16 ಕೋಟಿಯ ಔಷಧಿ

ಮಗುವಿನ ಮುಖದಲ್ಲಿ ಕಳೆದು ಹೋಗಿದ್ದ ನಗು ಮತ್ತೆ ಮೂಡಿಸಿದ 16 ಕೋಟಿಯ ಔಷಧಿ

spot_img
- Advertisement -
- Advertisement -

ಹೈದರಾಬಾದ್‌ :  ಮಗುವಿನ ಬಗ್ಗೆ ಆಸೆಯನ್ನೇ ಬಿಟ್ಟಿದ್ದ ಹೈದರಾಬಾದ್ ದಂಪತಿಯ ಮುಖದಲ್ಲಿ ಇದೀಗ ಹೊಸ ಭರವಸೆ ಮೂಡಿದೆ. 16 ಕೋಟಿಯ ಔಷಧಿ ಅವರಿಗೆ ಮತ್ತೆ ಹೊಸ ಬದುಕು ನೀಡಿದೆ.

ಹೌದು.. ಹೈದರಾಬಾದ್‌ನ  ರೂಪಲ್ ಹಾಗೂ ಯೋಗೇಶ್ ಪುತ್ರ ಅಯಾಂಶ್ ಗೆ  2018ರ ಜೂನ್ 4ರಂದು, ಅತ್ಯಪರೂಪದ ವಂಶವಾಹಿ ಸಮಸ್ಯೆಯಾದ ಸ್ಪೈನಲ್ ಮಸ್ಕುಲರ್‌ ಅಟ್ರೋಫಿ (ಎಸ್‌ಎಂಎ) ಸಮಸ್ಯೆ ಇರೋದು ಗೊತ್ತಾಗಿತ್ತು.  ಅದು ಆತನ ಜೀವಕ್ಕೇ ಕುತ್ತು ತರುವ ಮಟ್ಟದಲ್ಲಿತ್ತು. ಈ ಸಮಸ್ಯೆಗೆ ದೇಶದಲ್ಲಿ ಎಲ್ಲೂ ಸಹ ಚಿಕಿತ್ಸೆ ಲಭ್ಯವಿರಲಿಲ್ಲ. ಅದೂ ಅಲ್ಲದೇ ಈ ಸಮಸ್ಯೆಗೆ ಬೇಕಾದ ಮದ್ದನ್ನು ಆಮದು ಮಾಡಿಕೊಳ್ಳಲು ಜಿಎಸ್‌ಟಿ ಹೊರತಾಗಿಯೇ 16 ಕೋಟಿ ರೂ.ಗಳು ಬೇಕಾಗಿತ್ತು.

ಈ ಸಂದರ್ಭದಲ್ಲಿ, ಫೆಬ್ರವರಿ 5, 2021ರಿಂದ ಸಾಮೂಹಿಕವಾಗಿ ದೇಣಿಗೆ ಸಂಗ್ರಹ ಅಭಿಯಾನಕ್ಕೆ ಮುಂದಾದ ಅಯಾಂಶ್‌ ತಂದೆ – ತಾಯಂದಿರ ನೆರವಿಗೆ ನಿಂತ 65,000 ದಷ್ಟು ದೇಣಿಗೆದಾರರು, ಅವರಿಗೆ ಅಮೆರಿಕದಿಂದ ಈ ದುಬಾರಿ ಮದ್ದನ್ನು ತರಿಸಿಕೊಡಲು ನೆರವಾಗಿದ್ದಾರೆ. ನಿಧಿ ಸಂಗ್ರಹಣೆ ಆರಂಭಿಸಿದ ಮೂರೂವರೆ ತಿಂಗಳಲ್ಲೇ ಮದ್ದಿಗೆ ಬೇಕಾದಷ್ಟು ಹಣವನ್ನು ಸಂಗ್ರಹಿಸುತ್ತೇವೆಂದು ಕನಸಿನಲ್ಲೂ ಊಹಿಸಿರಲಿಲ್ಲ ಎಂದು ಯೋಗೇಶ್ ತಿಳಿಸಿದ್ದಾರೆ.

ಗೋಫಂಡ್‌ಮೀ ಮುಖಾಂತರ ಛತ್ತೀಸ್‌ಘಡದಲ್ಲಿರುವ ತಮ್ಮ ಸಂಬಂಧಿಕರು, ಸ್ನೇಹಿತರು, ಕಾಲೇಜಿನ ಸಹಪಾಠಿಗಳು, ಸೆಲೆಬ್ರಿಟಿಗಳು, ದೇಣಿಗೆದಾರರ ಸಹಸ್ರಾರರು ಮಂದಿಯ ಬಳಗವೇ ಈ ನಿಧಿ ಸಂಗ್ರಹಣೆಗೆ ನೆರವಾಗಿದ್ದಾರೆ.

ಜಗತ್ತಿನ ಅತ್ಯಂತ ದುಬಾರಿ ಮೆಡಿಕಲ್ ಡ್ರಗ್‌ ಎಂದು ಪರಿಗಣಿತವಾದ ಜ಼ಾಲ್ಗೆನ್‌ಸ್ಮಾದ ಸಿಂಗಲ್-ಡೋಸ್ ಪಡೆಯುತ್ತಲೇ, ತಾನು ನಡೆದುಕೊಂಡು ಮನೆಗೆ ಬರಲು ಇಚ್ಛಿಸುವುದಾಗಿ ಮೂರು ವರ್ಷದ ಬಾಲಕ ಅಯಾಂಶ್ ತನ್ನ ಹೆತ್ತವರಿಗೆ ತಿಳಿಸಿದ್ದಾನೆ. ಗುಪ್ತಾಗೆ ಆ ದಿನ ತಮ್ಮ ಜೀವಮಾನದಲ್ಲೇ ಮರೆಯಲಾಗದ ಸ್ಮರಣೀಯ ದಿನವಾಗಿತ್ತು.

“ಪ್ರತಿ ತಾಯಿಗೆ ತನ್ನ ಮಗು ನಡೆಯುವುದನ್ನು ಹಾಗೂ ಓಡುವುದನ್ನು ನೋಡಲು ಇಷ್ಟವಾಗುತ್ತದೆ. ನಾನು ಅದನ್ನು ನೋಡಲು ಆಗಿರಲಿಲ್ಲ” ಎಂದು ಜೂನ್ 9ರ ಆ ಸುದಿನವನ್ನು ನೆನೆದು ಬಾಲಕನ ತಾಯಿ, 34-ವರ್ಷದ ರೂಪಲ್ ಹೇಳಿದ್ದಾರೆ.

- Advertisement -
spot_img

Latest News

error: Content is protected !!