Saturday, May 18, 2024
Homeಕರಾವಳಿಬೆಳ್ತಂಗಡಿ : ವೃದ್ಧೆಯನ್ನು ಕೊಲೆ ಮಾಡಿ ದರೋಡೆ ಮಾಡಿದ ಪ್ರಕರಣ; ಆರೋಪಿ ಅಶೋಕ್ ಗೆ ನ್ಯಾಯಾಂಗ...

ಬೆಳ್ತಂಗಡಿ : ವೃದ್ಧೆಯನ್ನು ಕೊಲೆ ಮಾಡಿ ದರೋಡೆ ಮಾಡಿದ ಪ್ರಕರಣ; ಆರೋಪಿ ಅಶೋಕ್ ಗೆ ನ್ಯಾಯಾಂಗ ಬಂಧನ

spot_img
- Advertisement -
- Advertisement -

ಬೆಳ್ತಂಗಡಿ : ಮನೆಯಲ್ಲಿ ಒಬ್ಬಂಟಿಯಾಗಿದ್ದ ಅಜ್ಜಿಯನ್ನು ಕಟ್ಟಿಗೆಯಿಂದ ಹೊಡೆದು ಕೊಲೆ‌ ಮಾಡಿ ಚಿನ್ನಾಭರಣ ಹಾಗೂ ಹಣ ದರೋಡೆ ಮಾಡಿರುವ ಘಟನೆ ಬೆಳ್ತಂಗಡಿ ತಾಲೂಕಿನ ಬೆಳಾಲು ಗ್ರಾಮದ ಕೆರೆಕೋಡಿ ಮನೆಯಲ್ಲಿ ಶನಿವಾರ ಮಧ್ಯಾಹ್ನ ನಡೆದಿತ್ತು.

ಬೆಳ್ತಂಗಡಿ ತಾಲೂಕಿನ ಬೆಳಾಲು ಗ್ರಾಮದ ಕೆರೆಕೋಡಿ ಮನೆಯ ಅಕ್ಕು(85) ಎಂಬವರು ಮನೆಯಲ್ಲಿ ಒಬ್ಬರೇ ಇದ್ದಾಗ ವೇಳೆ ಸಂಬಂಧಿ ಅಶೋಕ್ ಎಂಬಾತ ಮನೆಗೆ ಬಂದು ಮನೆಯ  ಹಿಂಭಾಗದಲ್ಲಿದ್ದ ಅಜ್ಜಿಯ ತಲೆಗೆ  ಕಟ್ಟಿಗೆಯಿಂದ ಹೊಡೆದು ನಂತರ ಅಕ್ಕು ಅವರ ಎರಡು ಕಿವಿಯಲ್ಲಿದ್ದ ಚಿನ್ನವನ್ನು ಎಳೆದಿದ್ದಾನೆ. ನಂತರ ಮನೆಯೊಳಗೆ ಹೋಗಿ ಚೀಲದಲ್ಲಿ ಇದ್ದ ಸುಮಾರು 20,000 ಹಣವನ್ನು ದರೋಡೆ ಮಾಡಿ ಹೋಗಿದ್ದ ನಂತರ ಶಾಲೆಯಿಂದ ಸುಮಾರು 2 ಗಂಟೆಗೆ ಮನೆಗೆ ಮೊಮ್ಮಗಳಾದ ಮೌರ್ಯ ಬಂದಾಗ ಸುಮಾರು ಅಜ್ಜಿ ಕಾಣದಿದ್ದಾಗ ಸುತ್ತಮುತ್ತ ಹುಡುಕಾಟ ನಡೆಸಿದ್ದಾಳೆ . ಈ ವೇಳೆ ಮನೆಯ ಹಿಂಭಾಗದಲ್ಲಿ ತಲೆಗೆ ಗಾಯಗೊಂಡು ಬೊಬ್ಬೆ ಹಾಕುವುದನ್ನು ಕಂಡಿದ್ದಾಳೆ. ತಕ್ಷಣ ಪಕ್ಕದ ಮನೆಯ ಸಂಬಂಧಿ ಮಾಧವ ಎಂಬವರ ಮನೆಗೆ ಓಡಿ ವಿಷಯ ತಿಳಿಸಿದ್ದಾಳೆ ಈ ವೇಳೆ ಮನೆಗೆ ಓಡಿಬಂದು ಅಕ್ಕು ಅವರನ್ನು ಆಸ್ಪತ್ರೆಗೆ ಸಾಗಿಸಲು ವಾಹನಕ್ಕೆ ಕರೆ ಮಾಡಿ ಕಾಯುತ್ತಿದ್ದಾಗ ಅಕ್ಕು ಅಸ್ವಸ್ಥತೆಯಿಂದ ರಕ್ತಸಾವ್ರವಾಗಿ ಮನೆಯ ಮುಂಭಾಗದಲ್ಲಿ 2:15 ರ ವೇಳೆಗೆ ಸಾವನ್ನಪ್ಪಿದ್ದಾರೆ. ಮನೆಯವರಿಗೆ ಅಕ್ಕು ಅವರ  ಕಿವಿ ಹರಿದಿದ್ದು ಗೊತ್ತಾಗಿದೆ.

ನಂತರ ಮನೆಯನ್ನು ಪರಿಶೀಲನೆ ನಡೆಸಿದಾಗ ಚೀಲದಲ್ಲಿ ಇಟ್ಟಿದ್ದ ಹಣ ನಾಪತ್ತೆಯಾಗಿದ್ದು ಗೊತ್ತಾಗಿದೆ. ಇದರಿಂದ ಯಾರೋ ದರೋಡೆ ಮಾಡಲು ಬಂದವರು ಅಕ್ಕು ಅವರ ಮೇಲೆ ಹಲ್ಲೆ ಮಾಡಿ ಹೋಗಿರುವುದು ಅನುಮಾನ ಬರುತ್ತದೆ. ನಂತರ ಈ ಮಾಹಿತಿಯನ್ನು ಧರ್ಮಸ್ಥಳ ಪೊಲೀಸರಿಗೆ ತಿಳಿಸಿದ್ದಾರೆ. ಕೂಡಲೇ ಧರ್ಮಸ್ಥಳ ಠಾಣೆಯ ಪಿಎಸ್ಐ ಕೃಷ್ಣಕಾಂತ್ ಪಾಟೀಲ್ ಮತ್ತು ತಂಡ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದರು. ಕೊಲೆ ನಡೆದ ಕೆಲವೇ ಗಂಟೆಗಳಲ್ಲಿ ಧರ್ಮಸ್ಥಳ ಪಿಎಸ್ಐ ಕೃಷ್ಣಕಾಂತ್ ಪಾಟೀಲ್ ಮತ್ತು ತಂಡ ಸೋಮಂದಡ್ಕದ ನವೋದಯ ಬಳಿ ಅಕ್ಕು ಅವರ  ಸೊಸೆಯ ಅಕ್ಕನ ಮಗ ಕುಮೇರು ನಿವಾಸಿ ಅಶೋಕ್ ಗೌಡ(32) ವಶಕ್ಕೆ ಪಡೆದು ವಿಚಾರಣೆ ನಡೆಸಿ ದರೋಡೆ ಮಾಡಿದ್ದ ವಸ್ತುಗಳನ್ನು ವಶಪಡಿಸಿಕೊಂಡು ಭಾನುವಾರ ಮಧ್ಯಾಹ್ನ ಬಂಧಿಸಿದ್ದರು.

ಆರೋಪಿಯನ್ನು ಸ್ಥಳ ಮಹಜರಿಗೆ ಕರೆತಂದ ಪೊಲೀಸರು:
ಕೊಲೆ ನಡೆದ ಸ್ಥಳ ಹಾಗೂ ಘಟನೆ ನಡೆದ ನಂತರ ಎಲ್ಲೆಲ್ಲಾ ಹೋಗಿದ್ದ ಎಂದು ತನಿಖೆ ವೇಳೆ ಆರೋಪಿ ಬಾಯಿಬಿಟ್ಟಿದ್ದ. ಅದರಂತೆ ಪೊಲೀಸರು ಉಜಿರೆ , ಸೋಮಂದಡ್ಕ ,ಕೊಲೆಯಾದ ಮನೆಗೆ ಕರೆತಂದು ಸ್ಥಳ ಮಹಜರು ನಡೆಸಿದರು. ನಂತರ ವೈದ್ಯಕೀಯ ಪರೀಕ್ಷೆ ನಡೆಸಿ ನ್ಯಾಯಾಧೀಶರ‌ ಮನೆಗೆ ಹಾಜರುಪಡಿಸಿದ್ದು ನ್ಯಾಯಾಧೀಶರು 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದ್ದಾರೆ. ಅದರಂತೆ ಮಂಗಳೂರು ಸಬ್ ಜೈಲಿಗೆ ಕಳುಹಿಸಿದ್ದಾರೆ.

ಕುಡಿತದ ಚಟದಿಂದ ದೇಹಸ್ಥಿತಿ ಬದಲಾವಣೆ: ಆರೋಪಿ ಅಶೋಕ್ ಒಂದು ಸಮಯದಲ್ಲಿ ತನ್ನ ದೇಹವನ್ನು ಸದೃಢವಾಗಿ ಇಟ್ಟಿದ್ದ ಕ್ರಮೇಣ ಕುಡಿತ ಹೆಚ್ಚಾಗಿ ತನ್ನ ದೇಹ ಸ್ಥಿತಿ ಕ್ಷೀಣಿಸಿ ಹೋಗಿದೆ‌.

ಪ್ರಕರಣ ಭೇದಿಸಲು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಖುಷಿಕೇಶ್ ಭಗವಾನ್ ಸೋನಾವಣೆ ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಕುಮಾರ್ ಚಂದ್ರ ರವರ ಮಾರ್ಗದರ್ಶನದಲ್ಲಿ ಬಂಟ್ವಾಳ ಪೊಲೀಸ್ ಉಪಾಧೀಕ್ಷಕರಾದ ಪ್ರತಾಪ್ ಸಿಂಗ್ ಥೋರಾಟ್ ರವರ ನಿರ್ದೇಶನದಂತೆ ಪ್ರಕರಣದ ತನಿಖಾಧಿಕಾರಿ ಬೆಳ್ತಂಗಡಿ ಪೊಲೀಸ್ ವೃತ್ತ ನಿರೀಕ್ಷಕ ಶಿವಕುಮಾರ್ ರವರ ನೇತೃತ್ವದಲ್ಲಿ ಧರ್ಮಸ್ಥಳ ಪೊಲೀಸ್ ಠಾಣಾ ಪಿಎಸ್ಐ ಕೃಷ್ಣಕಾಂತ್ ಪಾಟೀಲ್, ಪಿಎಸ್ಐ ಲೋಲಾಕ್ಷ , ಬೆಳ್ತಂಗಡಿ ಪಿಎಸ್ಐ ನಂದಕುಮಾರ್ ಒಳಗೊಂಡ ಧರ್ಮಸ್ಥಳ ಠಾಣೆಯ ಸಿಬ್ಬಂದಿ ಪ್ರಶಾಂತ್ ಅಳದಂಗಡಿ, ಆಸ್ಲಾಂ , ಪ್ರಮೋದಿನಿ, ಚಾಲಕ ಲೋಕೇಶ್ , ಜಗದೀಶ್ , ಬೆಳ್ತಂಗಡಿ ವೃತ್ತ ಕಚೇರಿಯ ವಿಜಯ ಕುಮಾರ್, ಸುನಿಲ್ ಅಪರಾದ ಪತ್ತೆ ತಂಡದ ಇಬ್ರಾಹಿಂ , ಚೌಡಪ್ಪ, ಚಾಲಕ ಆಸಿಫ್ ಕಾರ್ಯಾಚರಣೆಯಲ್ಲಿ ಪಾಲ್ಗೋಂಡಿದ್ದರು.

- Advertisement -
spot_img

Latest News

error: Content is protected !!