Thursday, June 4, 2026
Homeಕರಾವಳಿಉಡುಪಿಉಡುಪಿಯಲ್ಲಿ ಹೆಚ್ಚಾಗ್ತಿದೆ ಮಹಾಮಾರಿ ಆರ್ಭಟ: ಮಣಿಪಾಲದ ಎಂಐಟಿಯಲ್ಲಿ 145 ಮಂದಿಗೆ ಕೊರೊನಾ ಪಾಸಿಟಿವ್

ಉಡುಪಿಯಲ್ಲಿ ಹೆಚ್ಚಾಗ್ತಿದೆ ಮಹಾಮಾರಿ ಆರ್ಭಟ: ಮಣಿಪಾಲದ ಎಂಐಟಿಯಲ್ಲಿ 145 ಮಂದಿಗೆ ಕೊರೊನಾ ಪಾಸಿಟಿವ್

- Advertisement -
- Advertisement -

ಉಡುಪಿ: ಕೃಷ್ಣನಗರಿಯಲ್ಲಿ ಕೋವಿಡ್ ಆರ್ಭಟ ಜೋರಾಗಿದ್ದು ಜನರಲ್ಲಿ  ಆತಂಕ ಹೆಚ್ಚಿಸಿದೆ. ಕಳೆದೊಂದು ವಾರದಿಂದ ಉಡುಪಿ ಜಿಲ್ಲೆಯಲ್ಲಿ ಕೋವಿಡ್‌ ಸೋಂಕಿನ ಸಂಖ್ಯೆ ಏರುಗತಿಯಲ್ಲಿದೆ. ನಿನ್ನೆ ಜಿಲ್ಲೆಯಲ್ಲಿ 145 ಮಂದಿಗೆ ಕೊರೊನಾ ದೃಢಪಟ್ಟಿದೆ.

 ಇವರಲ್ಲಿ 111 ಮಂದಿ ಮಣಿಪಾಲ ಎಂಐಟಿ ಕ್ಯಾಂಪಸ್‌ನಲ್ಲಿರುವ ವಿದ್ಯಾರ್ಥಿಗಳೇ ಆಗಿದ್ದಾರೆ. ಈ ಮೂಲಕ ಎಂಐಟಿಯಲ್ಲಿ ಕೋವಿಡ್ ಸೋಂಕಿಗೆ ಪಾಸಿಟಿವ್ ಬಂದವರ ಸಂಖ್ಯೆ 586ಕ್ಕೆ ನೆಗೆದಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸುಧೀರ್ ‌ಚಂದ್ರ ಸೂಡ ತಿಳಿಸಿದ್ದಾರೆ.

ಕಳೆದ ಮಾ.15ರಿಂದ ಇಂದಿನವರೆಗೆ ಜಿಲ್ಲೆಯ ಒಟ್ಟು 21,502 ಮಂದಿಯನ್ನು ಕೋವಿಡ್ ಸೋಂಕಿಗಾಗಿ ಆರ್‌ಟಿಪಿಸಿಆರ್ ಪರೀಕ್ಷೆಗೊಳಪಡಿಸಲಾಗಿದೆ. ಇವರಲ್ಲಿ 3669 ಮಂದಿ ಎಂಐಟಿ ಕ್ಯಾಂಪಸ್‌ನವರೇ ಇದ್ದಾರೆ. ಇವರಲ್ಲಿ 586 ಮಂದಿ ಪಾಸಿಟಿವ್ ಬರುವ ಮೂಲಕ ಎಂಐಟಿಯಲ್ಲಿ ಪಾಸಿಟಿವ್ ಬರುವವರ ಪ್ರಮಾಣ 4.88ರಷ್ಟಿದೆ ಎಂದವರು ಕಳವಳ ವ್ಯಕ್ತಪಡಿಸಿದರು. ಉಳಿದಂತೆ ಬೈಂದೂರಿನಲ್ಲಿ ಇಂದು ಆರು ಮಂದಿ ಪಾಸಿಟಿವ್ ಬಂದಿರುವುದು ಸಹ ಗಂಭೀರ ವಿಷಯವಾಗಿದೆ ಎಂದು ಡಾ.ಸೂಡ ತಿಳಿಸಿದ್ದಾರೆ.

- Advertisement -

Latest News

error: Content is protected !!