Saturday, May 4, 2024
Homeತಾಜಾ ಸುದ್ದಿರವಿ ಡಿ ಚನ್ನಣ್ಣನವರ್ ಸೇರಿ 12 ಐಪಿಎಸ್ ಅಧಿಕಾರಿಗಳ ವರ್ಗಾವಣೆ

ರವಿ ಡಿ ಚನ್ನಣ್ಣನವರ್ ಸೇರಿ 12 ಐಪಿಎಸ್ ಅಧಿಕಾರಿಗಳ ವರ್ಗಾವಣೆ

spot_img
- Advertisement -
- Advertisement -

ಬೆಂಗಳೂರು: ಕೋವಿಡ್​ ನಿಯಂತ್ರಣದ ನಡುವೆಯೇ ರಾಜ್ಯ ಸರ್ಕಾರ ಪೊಲೀಸ್​ ಇಲಾಖೆಗೆ ಮೇಜರ್​ ಸರ್ಜರಿ ನಡೆಸಿದೆ. ರಾಜ್ಯದ 12 ಐಪಿಎಸ್​ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಇಂದು ಆದೇಶ ನೀಡಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲಾ ಎಸ್​ಪಿ ರವಿ ಚೆನ್ನಣ್ಣನವರ್​ ಸೇರಿದಂತೆ ಅನೇಕ ಜಿಲ್ಲಾ ಎಸ್ಪಿಗಳ ವರ್ಗಾವಣೆ ಮಾಡಿ ಆದೇಶ ನೀಡಿದೆ. ಇದೇ ವೇಳೆ ಮೈಸೂರು ಜಿಲ್ಲಾ ನೂತನ ಎಸ್​ಪಿಯಾಗಿ ಆರ್​ ಚೇತನ್​ ಅವರನ್ನು ವರ್ಗಾಯಿಸಲಾಗಿದೆ.

ವರ್ಗಾವಣೆಗೊಂಡಿರುವ 12 ಅಧಿಕಾರಿಗಳ ವಿವರ ಇಲ್ಲಿದೆ…

  • ಬೆಂಗಳೂರು ಗ್ರಾಮಾಂತರ ಎಸ್‌ಪಿಯಾಗಿದ್ದ ರವಿ ಡಿ ಚನ್ನಣ್ಣನವರ್ ಅವರನ್ನು ಸಿಐಡಿ ಎಸ್‌ಪಿ, ಬೆಂಗಳೂರಿಗೆ ವರ್ಗಾವಣೆ
  • ಕರಾವಳಿ ಭದ್ರತಾ ಪಡೆ ಎಸ್‌ಪಿ ಆರ್ ಚೇತನ್ ಅವರನ್ನು ಮೈಸೂರು ಎಸ್‌ಪಿ ಆಗಿ ವರ್ಗಾವಣೆ
  • ಕೋಲಾರ ಜಿಲ್ಲೆಯ ಎಸ್‌ಪಿ ಕಾರ್ತಿಕ್ ರೆಡ್ಡಿ ಅವರನ್ನು ಬೆಂಗಳೂರು ಎಸ್‌ಪಿಯಾಗಿ (ವೈರ್‌ಲೆಸ್) ವರ್ಗಾವಣೆ.
  • ಬೆಂಗಳೂರಿನ ಅಪರಾಧ ತನಿಖಾ ಇಲಾಖೆಯ ರಾಹುಲ್ ಕುಮಾರ್ ಶಹಾಪೂರ್ವದ್ ಅವರನ್ನು ತುಮಕೂರು ಎಸ್‌ಪಿಯಾಗಿ
  • ದಾವಣಗೆರೆ ಜಿಲ್ಲೆಯ ಎಸ್‌ಪಿ ಹನುಮಂತರಾಯ ಅವರನ್ನು ಹಾವೇರಿ ಜಿಲ್ಲೆಗೆ ವರ್ಗಾವಣೆ.
  • ಮೈಸೂರಿನ ಕಾನೂನು ಸುವ್ಯವಸ್ಥೆ ವಿಭಾಗದ ಡಿಸಿಪಿ ಡಾ. ಎ.ಎನ್. ಪ್ರಕಾಶ್ ಗೌಡ ಅವರನ್ನು ಬೆಂಗಳೂರು ಆಂತರಿಕ ಭದ್ರತಾ ವಿಭಾಗಕ್ಕೆ.
  • ಹಾವೇರಿ ಜಿಲ್ಲೆಯ ಎಸ್‌ಪಿ ಕೆ.ಜಿ. ದೇವರಾಜು ಅವರನ್ನು ಬೆಂಗಳೂರಿನ ಸಿಐಡಿ ಎಸ್‌ಪಿಯಾಗಿ.
  • ಮೈಸೂರಿನ ಎಸ್‌ಪಿ ಸಿ.ಬಿ. ರಿಷ್ಯಂತ್ ಅವರನ್ನು ದಾವಣಗೆರೆ ಜಿಲ್ಲೆಗೆ ವರ್ಗಾವಣೆ ಮಾಡಲಾಗಿದೆ.
  • ಕಲಬುರಗಿ ಜಿಲ್ಲೆಯ ಡಿಸಿಪಿ ಡೆಕ್ಕ ಕಿಶೋರ್ ಬಾಬು ಅವರನ್ನು ಕೋಲಾರ ಜಿಲ್ಲೆಯ ಎಸ್‌ಪಿಯಾಗಿ ವರ್ಗಾವಣೆ.
  • ತುಮಕೂರಿನ ಎಸ್‌ಪಿ ಡಾ. ಕೋನಾ ವಂಶಿ ಕೃಷ್ಣ ಅವರನ್ನು ಬೆಂಗಳೂರು ಗ್ರಾಮಾಂತರ ಎಸ್‌ಪಿಯಾಗಿ ವರ್ಗಾವಣೆ
  • ಬೆಂಗಳೂರಿನ ಆಂತರಿಕ ಭದ್ರತಾ ಇಲಾಖೆಯ ಎಸ್ಪಿ ಪ್ರದೀಪ್ ಗುಂಟಿ ಅವರನ್ನು ಮೈಸೂರು ನಗರದ ಕಾನೂನು ಸುವ್ಯವಸ್ಥೆ ವಿಭಾಗದ ಡಿಸಿಪಿಯಾಗಿ ವರ್ಗಾವಣೆ.
  • ಬೆಂಗಳೂರಿನ (ವೈರ್‌ಲೆಸ್‌) ಎಸ್‌ಪಿ ಅಡ್ಡೂರು ಶ್ರೀನಿವಾಸುಲು ಅವರನ್ನು ಕಲಬುರಗಿ ಜಿಲ್ಲೆಯ ಕಾನೂನು ಸುವ್ಯವಸ್ಥೆ ವಿಭಾಗದ ಡಿಸಿಪಿಯಾಗಿ ವರ್ಗಾವಣೆ.

- Advertisement -
spot_img

Latest News

error: Content is protected !!