Saturday, May 18, 2024
Homeತಾಜಾ ಸುದ್ದಿಒಂದೇ ಬಾರಿ 10 ಮಕ್ಕಳಿಗೆ ಜನ್ಮ ನೀಡಿ ವಿಶ್ವ ದಾಖಲೆ ಬರೆದ ಗಟ್ಟಿಗಿತ್ತಿ ಮಹಿಳೆ

ಒಂದೇ ಬಾರಿ 10 ಮಕ್ಕಳಿಗೆ ಜನ್ಮ ನೀಡಿ ವಿಶ್ವ ದಾಖಲೆ ಬರೆದ ಗಟ್ಟಿಗಿತ್ತಿ ಮಹಿಳೆ

spot_img
- Advertisement -
- Advertisement -

ಮಹಿಳೆಗಿರುವ ಅದ್ಭುತ ಶಕ್ತಿಗಳಲ್ಲಿ ಒಂದು ತಾಯ್ತಾನ. ತಮ್ಮ ಮೂಲಕ ಮತ್ತೊಂದು ಮಗುವಿಗೆ ಜನ್ಮ ನೀಡುವ ಮಹಿಳೆ ಕೆಲವೊಮ್ಮೆ ಅಚ್ಚರಿಯನ್ನು ಮೂಡಿಸುವುದಿದೆ. ಇದೇ ರೀತಿ ದಕ್ಷಿಣ ಆಫ್ರಿಕಾದ ಮಹಿಳೆಯೊಬ್ಬಳು ಅಚ್ಚರಿ ಜೊತೆಯಲ್ಲಿ ದಾಖಲೆಯನ್ನು ನಿರ್ಮಿಸಿದ್ದಾಳೆ.

ಸಾಮಾನ್ಯವಾಗಿ ಅವಳಿ, ತ್ರಿವಳಿಗಳಿಗೆ ಮಹಿಳೆಯರು ಜನ್ಮ ನೀಡುವುದು ಕಂಡಿದ್ದೇವೆ. ಕೆಲವೊಂದು ಅಪರೂಪದ ಘಟನೆಗಳಲ್ಲಿ 5 ಮಕ್ಕಳಿಗೆ ಜನ್ಮ ನೀಡುವುದನ್ನು ಕಂಡಿದ್ದೇವೆ, ಆದರೆ, ಈ ಮಹಿಳೆ ಏಕಕಾಲಕ್ಕೆ ಹತ್ತು ಮಕ್ಕಳಿಗೆ ಜನ್ಮ ನೀಡುವ ಮೂಲಕ ವೈದ್ಯರನ್ನು ಮಾತ್ರವಲ್ಲ ಇಡೀ ಪ್ರಪಂಚದ ಮಂದಿಯನ್ನು ಬೆಸ್ತು ಬೀಳಿಸಿದ್ದಾಳೆ.

ಹೌದು! ದಕ್ಷಿಣ ಆಫ್ರಿಕಾದ ಗೋಸಿಯಮ್ ತಮಾರಾ ಸಿಥೋಲ್​(37) ಹೆಸರಿನ ಮಹಿಳೆ ಬರೋಬ್ಬರಿ 10 ಮಕ್ಕಳಿಗೆ ಜನ್ಮ ನೀಡಿದ್ದಾರೆ. ಆಕೆಯ ಗರ್ಭದಿಂದ ಏಳು ಗಂಡು ಮಕ್ಕಳು ಹಾಗೂ ಮೂರು ಹೆಣ್ಣು ಮಕ್ಕಳನ್ನು ಸಿಜರಿಯನ್ ಆಪರೇಷನ್ ಮಾಡಿ ತೆಗೆಯಲಾಗಿದೆ. ಮೊದಲೇ ಅವಳಿ ಮಕ್ಕಳನ್ನು ಹೊಂದಿದ್ದ ಮಹಿಳೆ ಇದೀಗ 12 ಮಕ್ಕಳ ತಾಯಿಯಾಗಿದ್ದಾಳೆ.

ಈ ಹಿಂದೆ ಮೊರೊಕ್ಕೊದ ಆಸ್ಪತ್ರೆಯೊಂದರಲ್ಲಿ ಹಲೀಮಾ ಸಿಸ್ಸೆ ಹೆಸರಿನ ಮಹಿಳೆ ಒಂಬತ್ತು ಮಕ್ಕಳಿಗೆ ಜನ್ಮ ನೀಡಿದ್ದಳು. ಇದುವರೆಗೆ ಅತಿ ಹೆಚ್ಚು ಮಕ್ಕಳಿಗೆ ಏಕಕಾಲದಲ್ಲಿ ಜನ್ಮ ನೀಡಿದ ಮಹಿಳೆಯರ ಪಟ್ಟಿಯಲ್ಲಿ ಆಕೆ ಅಗ್ರಸ್ಥಾನದಲ್ಲಿದ್ದಳು. ಇದೀಗ ಗೋಸಿಯಮ್ ತಮಾರಾ ಸಿಥೋಲ್ ಆ ದಾಖಲೆಯನ್ನು ಮುರಿದಿದ್ದಾಳೆ.

- Advertisement -
spot_img

Latest News

error: Content is protected !!