- Advertisement -
- Advertisement -
ಮಹಾರಾಷ್ಟ್ರ: ಮಗಳ ಶಾಲಾ ಶುಲ್ಕ ಕಟ್ಟಲು 47 ವರ್ಷದ ತಾಯಿಯೊಬ್ಬರು ಸೀರೆ ಉಟ್ಟು, ಬರಿಗಾಲಿನಲ್ಲಿ ಮ್ಯಾರಥಾನ್ ಓಡಿ ಪ್ರಥಮ ಬಹುಮಾನ ಪಡೆದ ಭಾವುಕ ಹಾಗೂ ಸಾಹಸದ ಘಟನೆ ಬೀಡ್ ಜಿಲ್ಲೆಯಲ್ಲಿ ನಡೆದಿದೆ.
ಇಲ್ಲಿನ ರಮಾಬಾಯಿ ರಣವೀರ್ ಎಂಬುವರೇ ಈ ಸಾಹಸ ಮೆರೆದ ತಾಯಿ. ಭಾರತೀಯ ಶಿಕ್ಷಣ ಪ್ರಸಾರಕ್ ಸಂಸ್ಥೆಯ ಖೋಲೇಶ್ವರ ಶೈಕ್ಷಣಿಕ ಸಂಕೀರ್ಣದ ‘ಅಮೃತ್ ದೌಡ್’ ಮ್ಯಾರಥಾನ್ನಲ್ಲಿ ರಮಾಬಾಯಿ ಸರಳ ಸೀರೆ ಮತ್ತು ಚಪ್ಪಲಿ ಧರಿಸಿ ಭಾಗವಹಿಸಿದ್ದರು.
ಓಡುವಾಗ ಚಪ್ಪಲಿ ಜಾರ ತೊಡಗಿದಾಗ, ಓಟ ನಿಲ್ಲಿಸದೆ ಚಪ್ಪಲಿಗಳನ್ನು ಕೈಯಲ್ಲೇ ಹಿಡಿದು ಬರಿಗಾಲಿನಲ್ಲಿ ಧಾವಿಸಿದರು. ಟ್ರ್ಯಾಕ್ ಸೂಟ್ ಹಾಗೂ ಸ್ಪೋರ್ಟ್ಸ್ ಶೂ ಧರಿಸಿದ್ದ ಯುವ ಸ್ಪರ್ಧಿಗಳನ್ನೆಲ್ಲಾ ಹಿಂದಿಕ್ಕಿದ ಇವರು ಪ್ರಥಮ ಸ್ಥಾನ ಪಡೆದು ಅಂತಿಮ ಗೆರೆ ತಲುಪಿದರು. ಮ್ಯಾರಥಾನ್ ಗೆದ್ದು ಪಡೆದ ₹3,000 ನಗದು ಬಹುಮಾನವನ್ನು ತಮ್ಮ ಮಗಳ ಶಿಕ್ಷಣಕ್ಕಾಗಿ ಬಳಸುವುದಾಗಿ ರಮಾಬಾಯಿ ತಿಳಿಸಿದ್ದಾರೆ.
- Advertisement -


