- Advertisement -
- Advertisement -
ಮೈಸೂರು : ಕರ್ನಾಟಕ ಹಾಲು ಮಹಾಮಂಡಳಿಯು ನಂದಿನಿ ತುಪ್ಪದ ಬ್ರ್ಯಾಂಡ್ ರಕ್ಷಣೆಗೆ ಕ್ಯೂ ಆರ್ ಕೋಡ್ ಇರುವ ನಂದಿನಿ ತುಪ್ಪ ಪ್ಯಾಕೆಟ್‌ನ್ನು ಪರಿಚಯಿಸಿದೆ.
ಕರ್ನಾಟಕ ಹಾಲು ಮಹಾಮಂಡಳದ ವ್ಯವಸ್ಥಾಪಕ ನಿರ್ದೇಶಕ ಬಿ.ಶಿವಸ್ವಾಮಿನಂದಿನಿ ಅವರು ಗುರುವಾರದಂದು ಬ್ರಾಂಡ್‌ನ ನೂತನ ವಿನ್ಯಾಸದ 500 ಎಂಎಲ್ ಹಾಗೂ 1ಲೀ ತುಪ್ಪದ ಪ್ಯಾಕೆಟ್‌ನ್ನು ಬಿಡುಗಡೆ ಮಾಡಿದರು.
ನಂತರದಲ್ಲಿ ಮಾತನಾಡಿದ ಅವರು, ʻನಂದಿನಿ ತುಪ್ಪಕ್ಕೆ ಬಹಳ ಬೇಡಿಕೆಯಿದ್ದು, ಹೀಗಾಗಿ ನಕಲು ಆಗುವ ಸಾಧ್ಯತೆ ಕೂಡ ಇದೆ. ಆದ್ದರಿಂದ ನೂತನ ನಂದಿನಿ ತುಪ್ಪದ ಪ್ಯಾಕೆಟ್‌ನ ಮೇಲೆ ಹಾಲೋಗ್ರಾಮ್ ಮುದ್ರಿಸಲಾಗಿದ್ದು ಮಾರುಕಟ್ಟೆಗೆ ಪರಿಚಯಿಸಲಾಗಿದೆ,ʼ ಎಂದರು.
- Advertisement -