Thursday, May 2, 2024
Homeಕರಾವಳಿಜೀ ವಾಹಿನಿಯ ಪಾಲಾಯ್ತು ಕೆಜಿಎಫ್-2 ಸ್ಯಾಟಲೈಟ್ ಹಕ್ಕು!

ಜೀ ವಾಹಿನಿಯ ಪಾಲಾಯ್ತು ಕೆಜಿಎಫ್-2 ಸ್ಯಾಟಲೈಟ್ ಹಕ್ಕು!

spot_img
- Advertisement -
- Advertisement -

ಬೆಂಗಳೂರು: ಬಹುನಿರೀಕ್ಷಿತ ಕೆಜಿಎಫ್ 2 ಸಿನಿಮಾದ ಸ್ಯಾಟ್ ಲೈಟ್ ಹಕ್ಕು ಕಿರುತೆರೆಯ ನಂ.1 ವಾಹಿನಿ ಜೀ ಕನ್ನಡ ಪಾಲಾಗಿದೆ.

ಮೊನ್ನೆಯಷ್ಟೇ ಒಟಿಟಿ ಪ್ಲಾಟ್‌ಫಾರ್ಮ್‌ ಸಂಸ್ಥೆಯೊಂದು ಕೆಜಿಎಫ್-2 ಚಿತ್ರ ನೇರವಾಗಿ ಒಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ಬಿಡುಗಡೆ ಮಾಡಲು ಚಿತ್ರತಂಡಕ್ಕೆ ಬರೋಬರಿ 255 ಕೋಟಿ ರೂಪಾಯಿಗಳ ಬಿಗ್ ಆಫರ್ ನೀಡಿತ್ತು. ಅದ್ರೆ ಕೆಜಿಎಫ್​ ಚಿತ್ರತಂಡ ಮಾತ್ರ ಇದರ ಬಗ್ಗೆ ಇನ್ನು ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎನ್ನಲಾಗಿದೆ.

ವರಮಹಾಲಕ್ಷ್ಮಿ ಹಬ್ಬದ ದಿನದಂದು ಶುಭ ಸುದ್ದಿ ನೀಡಿರುವ ಕೆಜಿಎಫ್ 2 ನಿರ್ಮಾಣ ಸಂಸ್ಥೆ ‘ಹೊಂಬಾಳೆ ಫಿಲ್ಮ್ಸ್’ ಚಿತ್ರದ ಸ್ಯಾಟಲೈಟ್ ಪ್ರಸಾರದ ಜೊತೆಗಾರರನ್ನು ಘೋಷಿಸಿದೆ. ದಕ್ಷಿಣ ಭಾರತದ ನಾಲ್ಕು ಭಾಷೆಗಳಲ್ಲಿ ಕೆಜಿಎಫ್ 2 ಬಿಡುಗಡೆಯಾಗಲಿದ್ದು, ಅವುಗಳ ಸ್ಯಾಟಲೈಟ್ ಪ್ರಸಾರದ ಹಕ್ಕನ್ನು ‘ಜೀ’ ಪಡೆದುಕೊಂಡಿದೆ.

ಮೊನ್ನೆಯಷ್ಟೇ ಒಟಿಟಿ ಪ್ಲಾಟ್‌ಫಾರ್ಮ್‌ ಸಂಸ್ಥೆಯೊಂದು ಕೆಜಿಎಫ್-2 ಚಿತ್ರ ನೇರವಾಗಿ ಒಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ಬಿಡುಗಡೆ ಮಾಡಲು ಚಿತ್ರತಂಡಕ್ಕೆ ಬರೋಬರಿ 255 ಕೋಟಿ ರೂಪಾಯಿಗಳ ಬಿಗ್ ಆಫರ್ ನೀಡಿತ್ತು ಎಂದು ಹೇಳಲಾಗಿದ್ದು, ಕೆಜಿಎಫ್​ ಚಿತ್ರತಂಡ ಮಾತ್ರ ಇದರ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಸದ್ಯ ನಿರ್ಮಾಪಕ ವಿಜಯ್ ಕಿರಗಂದೂರ್ ಒಪ್ಪಂದ ಪತ್ರವನ್ನು ಜೀ ಕನ್ನಡ ವಾಹಿನಿ ಬ್ಯುಸಿನೆಸ್ ಹೆಡ್ ರಾಘವೇಂದ್ರ ಹುಣಸೂರ್ ಅವರಿಗೆ ಹಸ್ತಾಂತರಿಸಿದ್ದಾರೆ. ಕನ್ನಡ, ತಮಿಳು, ತೆಲುಗು ಹಾಗೂ ಮಲಯಾಳಂ ಭಾಷೆಗಳಲ್ಲಿ ಕೆಜಿಎಫ್ 2 ಬಿಡುಗಡೆಯಾಗಲಿದ್ದು, ಇವುಗಳಿಗೆ ಆಯಾ ಭಾಷೆಯ ಜೀ ಚಾನಲ್​ಗಳು ಪ್ರಸಾರದ ಹಕ್ಕನ್ನು ಪಡೆದುಕೊಂಡಿವೆ. ಈ ಕುರಿತು ಹೊಂಬಾಳೆ ಫಿಲ್ಮ್ಸ್ ಟ್ವೀಟ್ ಮಾಡಿ ಮಾಹಿತಿಯನ್ನು ನೀಡಿದೆ.

- Advertisement -
spot_img

Latest News

error: Content is protected !!