Friday, May 17, 2024
Homeಚಿಕ್ಕಮಗಳೂರುಭದ್ರಾ ಹುಲಿ ಮೀಸಲು ಅಭಯಾರಣ್ಯದಲ್ಲಿ ಯುವಕರ ಮೋಜು ಮಸ್ತಿ: ಸಾಕಷ್ಟು ಚರ್ಚೆಗೆ ಕಾರಣವಾದ ವೈರಲ್‌ ವೀಡಿಯೋ

ಭದ್ರಾ ಹುಲಿ ಮೀಸಲು ಅಭಯಾರಣ್ಯದಲ್ಲಿ ಯುವಕರ ಮೋಜು ಮಸ್ತಿ: ಸಾಕಷ್ಟು ಚರ್ಚೆಗೆ ಕಾರಣವಾದ ವೈರಲ್‌ ವೀಡಿಯೋ

spot_img
- Advertisement -
- Advertisement -

ಚಿಕ್ಕಮಗಳೂರು: ಭದ್ರಾ ಹುಲಿ ಸಂರಕ್ಷಿತ ಪ್ರದೇಶ ಪ್ರಾಣಿಗಳ ಆವಾಸ ಸ್ಥಾನ, ಅತ್ಯಮೂಲ್ಯವಾದಂತಹ ಸಸ್ಯಸಂಪತ್ತು, ಪ್ರಾಣಿಸಂಕುಲವನ್ನು ಹೊಂದಿರುವಂತಹ ಅಭಯಾರಣ್ಯ. ಅರಣ್ಯ ಪ್ರದೇಶದಲ್ಲಿ ಅರಣ್ಯೇತರ ಚಟುವಟಿಕೆ ನಿಷೇಧ .ಅನುಮತಿ ಪಡೆಯದೇ ಪ್ರವೇಶವೂ ಕೂಡ ಅಭಯಾರಣ್ಯದಲ್ಲಿ ನಿರ್ಬಂಧ. ಆದರೆ ಇತ್ತೀಚೆಗೆ ಭದ್ರಾ ಅಭಯಾರಣ್ಯದಲ್ಲಿ ಅರಣ್ಯೇತರ ಚಟುವಟಿಕೆಗಳು  ಎಗ್ಗಿಲ್ಲದೆ ಸಾಗುತ್ತಿದೆ. ಜೆಸಿಬಿ ಮೂಲಕ ಕಾಡಾನೆಗೆ ಕಿರುಕುಳ ಕೊಟ್ಟ ಪ್ರಕರಣ ಮಾಸುವ ಮುನ್ನವೇ ಅಭಯಾರಣ್ಯದಲ್ಲಿ ಯುವಕರು ಮೋಜು ಮಸ್ತಿ ಮಾಡುವ ವಿಡಿಯೋ ಇದೀಗ  ವೈರಲ್ ಆಗಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ…

ಭದ್ರಾ ಹುಲಿ ಸಂರಕ್ಷಿತ ವ್ಯಾಪ್ತಿಯ ಹೆಬ್ಬೆ, ಮುತ್ತೋಡಿ ವಲಯದಲ್ಲಿ ಕೆಲ ಯುವಕರು  ತಮ್ಮ ಖಾಸಗಿ ಜೀಪಿಗಳಲ್ಲಿ ಕಾಡಿನ ಮದ್ಯೆ ಕೋರ್ ಝೋನ್ ಪ್ರದೇಶದಲ್ಲಿ   ಬೇಕಾಬಿಟ್ಟಿ ವಾಹನದಲ್ಲಿ ಓಡಾಟ ನಡೆಸಿ ಪ್ರಾಣಿಗಳಿಗೆ ತೊಂದರೆ ಕೊಟ್ಟಿದ್ದಾರೆ. ತಡಬೇ ಹಳ್ಳದಲ್ಲಿ ನೀರಿನ ಮಧ್ಯೆ ಜೀಪ್ ರಾಲಿ ಮಾಡಿರುವ ವಿಡಿಯೋ ವೈರಲ್ ಆಗಿದೆ.  ಹುಲಿ ಸಂರಕ್ಷಿತ ಪ್ರದೇಶಕ್ಕೆ ಜನರಿಗೆ ನಿರ್ಬಂಧ ಇದ್ದರೂ ಈ ಯುವಕರು ಹೇಗೆ ಪ್ರವೇಶ ಮಾಡಿದ್ದಾರೆ ಎನ್ನುವ ಪ್ರಶ್ನೆ ಇದೀಗ ಉದ್ಭವವಾಗಿದೆ. ಅಭಯಾರಣ್ಯ ವ್ಯಾಪ್ತಿಯ ಬಫರ್ ಝೋನ್ ಪ್ರದೇಶದಲ್ಲಿ ಯುವಕರು  ಕೂಗಾಟ ಕಿರುಚಾಟ ನಡೆಸಿ ವಾಹನಗಳನ್ನು  ಬೇಕಾಬಿಟ್ಟಿಯಾಗಿ ಓಡಿಸಿರುವುದು  ಚರ್ಚೆಗೆ  ಕಾರಣವಾಗಿದೆ

ಅಕ್ರಮವಾಗಿ ಸಾರ್ವಜನಿಕರು ಇಲ್ಲಿ ಪ್ರವೇಶಿಸಿದರೆ ಕೇಸ್ ದಾಖಲಿಸುವ ಅಧಿಕಾರಿಗಳು ಇವರನ್ನು  ಹೇಗೆ ಒಳಗೆ ಬಿಟ್ಟಿದ್ದಾರೆ  ಎಂದು ಪರಿಸರವಾದಿ ವೀರೇಶ್ ಪ್ರಶ್ನೆ ಮಾಡಿದ್ದಾರೆ.ಯುವಕರು ಅಕ್ರಮವಾಗಿ ಅರಣ್ಯದ ಒಳಗೆ ಪ್ರವೇಶ ಮಾಡಿರುವ ಬಗ್ಗೆ  ಅರಣ್ಯ ಇಲಾಖೆ ಸಿಬ್ಬಂದಿಗಳು ಮೇಲೆ‌ ಅನುಮಾನ ಬರುವಂತೆ ಮಾಡಿದೆ. ಇತ್ತೀಚೆಗೆ ಜೆಸಿಬಿ ವಾಹನದಲ್ಲಿ ಆನೆ ಮತ್ತು ಮರಿಗಳನ್ನು ಬೆದರಿಸಿದ ವಿಡಿಯೋ ವೈರಲ್ ಆಗಿತ್ತು,ಮತ್ತೆ ಈಗ ಯುವಕರು ಖಾಸಗಿ  ವಾಹನದಲ್ಲಿ ಮೋಜು ಮಸ್ತಿ ಮಾಡುವ ವಿಡಿಯೋ ವೈರಲ್ ಆಗಿದ್ದರೂ  ಯುವಕರ ಮೇಲೆ ಅಧಿಕಾರಿಗಳು ಈವರೆಗೂ ಕೇಸು  ದಾಖಲು ಮಾಡಿಲ್ಲ.ಅಲ್ಲದೆ  ಜೀಪ್ ಮೇಲೆ ಕೂತು ಯುವಕರು ಧೂಮಪಾನ ಮದ್ಯಪಾನ ಮಾಡಿ , ತಡಬೇ ಹಳ್ಳದಲ್ಲಿ ಜೀಪ್ ರ್ಯಾಲಿ, ಮಾಡಿದ್ದಾರೆ.

ಹಳ್ಳದಲ್ಲಿ ವಾಹನ ಚಲಿಸಿ , ಹಿಪ್ಪಲ, ಮಾಡ್ಲ ಭಾಗದ ಕೋರ್ ಝೋನ್ ಪ್ರದೇಶದಲ್ಲಿ  ಸುತ್ತಾಟ ನಡೆಸಿದ್ದಾರೆ. ಈ ಸಂಬಂಧ ನಿರ್ಲಕ್ಷ ವಹಿಸಿದ ಸಿಬ್ಬಂದಿಗಳ ಮೇಲೆ ಕ್ರಮ ಕೈಗೊಳ್ಳಬೇಕೆಂದು ಪರಿಸರ ಪ್ರೇಮಿಗಳು ಒತ್ತಾಯಿಸಿದ್ದಾರೆ.ಆ ಯುವಕರು ಯಾರು ಎನ್ನುವುದುವರೆಗೂ ಪತ್ತೆಯಾಗಿಲ್ಲ, ಬೆಂಗಳೂರು ಮೂಲದ ರಾಜಕಾರಣಿ ಮಕ್ಕಳು ಎನ್ನುವುದು ವದಂತಿ ಹಬ್ಬಿದೆ. ಈ ಬಗ್ಗೆ ಇಲಾಖೆ ಈವರೆಗೂ ಯಾವುದೇ ಸ್ಪಷ್ಟನೆ ನೀಡಿಲ್ಲ..ಒಟ್ಟಾರೆ ಹುಲಿ ಸಂರಕ್ಷಿತ ಪ್ರದೇಶದಲ್ಲಿ ನಡೆದಿರುವ ಅರಣ್ಯೇತರ ಚಟುವಟಿಕೆ ಬಗ್ಗೆ ಇಲಾಖೆ ತನಿಖೆ ನಡೆಸುವ ಅವಶ್ಯಕತೆ ಇದೆ

- Advertisement -
spot_img

Latest News

error: Content is protected !!