Wednesday, June 26, 2024
Homeಕರಾವಳಿಕುಡ್ಲದ ಕುವರಿಗೆ ಎನ್ ಎಸ್ ಎಸ್ ರಾಷ್ಟ್ರ ಪ್ರಶಸ್ತಿ: ಯುವ ಸಬಲೀಕರಣ ಸಚಿವ ನಾರಾಯಣಗೌಡ ಅಭಿನಂದನೆ

ಕುಡ್ಲದ ಕುವರಿಗೆ ಎನ್ ಎಸ್ ಎಸ್ ರಾಷ್ಟ್ರ ಪ್ರಶಸ್ತಿ: ಯುವ ಸಬಲೀಕರಣ ಸಚಿವ ನಾರಾಯಣಗೌಡ ಅಭಿನಂದನೆ

spot_img
- Advertisement -
- Advertisement -

ಬೆಂಗಳೂರು: ಎನ್‌ಎಸ್ಎಸ್ ರಾಷ್ಟ್ರ ಪ್ರಶಸ್ತಿಗೆ ಆಯ್ಕೆಯಾಗಿರುವ ಮಂಗಳೂರಿನ ರಶ್ಮಿಯವರಿಗೆ ರೇಷ್ಮೆ, ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಡಾ.ನಾರಾಯಣಗೌಡ ಅವರು ಅಭಿನಂದನೆ ತಿಳಿಸಿದ್ದಾರೆ.

ಕೇಂದ್ರ ಸರ್ಕಾರ ನೀಡುವ ರಾಷ್ಟ್ರೀಯ ಸೇವಾ ಯೋಜನೆಯ ಅತ್ಯುತ್ತಮ ಸ್ವಯಂಸೇವಕಿ ರಾಷ್ಟ್ರ ಪ್ರಶಸ್ತಿಗೆ ಸುರತ್ಕಲ್‌ನಾ ಗೋವಿಂದದಾಸ ಕಾಲೇಜಿನ ವಿದ್ಯಾರ್ಥಿನಿ ಕು.ರಶ್ಮಿ ಆಯ್ಕೆಯಾಗಿದ್ದಾರೆ. ಸೆಪ್ಟೆಂಬರ್ 24 ರಂದು ರಾಷ್ಟ್ರಪತಿ ಭವನದಲ್ಲಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ.

ಎನ್‌ಎಸ್‌ಎಸ್ ಅತ್ಯುತ್ತಮ ಸ್ವಯಂ ಸೇವಕಿ ಪ್ರಶಸ್ತಿಗೆ ನಮ್ಮ ಕನ್ನಡದ ವಿದ್ಯಾರ್ಥಿನಿ ಆಯ್ಕೆಯಾಗಿರುವುದು ಸಂತಸ ತಂದಿದೆ. ರಾಜ್ಯದಲ್ಲಿರುವ ಎನ್‌ಎಸ್‌ಎಸ್ ಉತ್ತಮ ರೀತಿಯಲ್ಲಿ ಸೇವೆ ಸಲ್ಲಿಸುತ್ತಿದೆ. ಇವರಿಗೆ ಸಂದಿರುವ ರಾಷ್ಟ್ರ ಪ್ರಶಸ್ತಿ ಎನ್‌ಎಸ್‌ಎಸ್ ಕೋಶದ ಎಲ್ಲಾ ಸೇವಕ/ಸೇವಕಿಯರಿಗೆ ಪ್ರೇರಣೆಯಾಗಲಿ. ಮುಂದಿನ ದಿನಗಳಲ್ಲಿ ಇನ್ನಷ್ಟು ಹೆಚ್ಚಿನ ಪ್ರಶಸ್ತಿ ಕರ್ನಾಟಕಕ್ಕೆ ದೊರೆಯುವಂತಾಗಲಿ ಎಂದು ಸಚಿವ ಡಾ.ನಾರಾಯಣಗೌಡ ಅವರು ಹಾರೈಸಿದ್ದಾರೆ.

- Advertisement -
spot_img

Latest News

error: Content is protected !!