Saturday, May 4, 2024
Homeಕರಾವಳಿಉಡುಪಿಉಡುಪಿ: ಕಾಲ್ನಡಿಗೆಯಲ್ಲೇ ಬ್ರಹ್ಮಾವರ ದಿಂದ ಜಮ್ಮು ತಲುಪಿದ ಯುವಕ; 55 ದಿನಗಳ ಕನಸಿನ ಪಯಣ

ಉಡುಪಿ: ಕಾಲ್ನಡಿಗೆಯಲ್ಲೇ ಬ್ರಹ್ಮಾವರ ದಿಂದ ಜಮ್ಮು ತಲುಪಿದ ಯುವಕ; 55 ದಿನಗಳ ಕನಸಿನ ಪಯಣ

spot_img
- Advertisement -
- Advertisement -

ಉಡುಪಿ: ಬ್ರಹ್ಮಾವರ ತಾಲೂಕು ಪೇತ್ರಿ ಸಮೀಪದ ಮುಂಡ್ಕಿನಜಡ್ಡು ನಿವಾಸಿ 22ರ ಹರೆಯದ ಹರ್ಷೇಂದ್ರ ಅವರು ಕೇವಲ ಕಾಲ್ನಡಿಗೆ ಮೂಲಕ ಬ್ರಹ್ಮಾವರ ದಿಂದ ಜಮ್ಮು ಕಾಶ್ಮೀರಕ್ಕೆ ಏಕಾಂಗಿಯಾಗಿ ಪಯಣಿಸಿ, 55 ದಿನಗಳಲ್ಲಿ ಜಮ್ಮು ತಲುಪಿದ್ದಾರೆ ಮತ್ತು ಅಲ್ಲಿನ ಜನರಿಗೆ ತುಳುನಾಡಿನ ಹೆಮ್ಮೆಯ ಜಾನಪದ ಕಲೆಯನ್ನು ಪ್ರದರ್ಶಿಸಿದ್ದಾರೆ.


ಇವರು ಸೆ. 19ರಂದು ಬ್ರಹ್ಮಾವರದಿಂದ ಹೊರಟು ಗೋವಾ, ಮಹಾರಾಷ್ಟ್ರ, ಗುಜರಾತ್, ರಾಜಸ್ಥಾನ, ಹರಿಯಾಣ, ಪಂಜಾಬ್ ಮೂಲಕ 1,800 ಕಿ.ಮೀ ದೂರದ ಜಮ್ಮು-ಕಾಶ್ಮೀರದ ಪಠಾಣ್ ಕೋಟ್ ತಲುಪಿದ್ದಾರೆ. ಮಳೆ ಬಿಸಿಲಿನ ನಡುವೆ ಪ್ರತಿದಿನ ಗಂಟೆಗೆ ಐದಾರು ಕಿಲೋಮೀಟರ್ ನಂತೆ ಐವತ್ತು ಕಿ.ಮೀ ಶ್ರಮಿಸುತ್ತಿದೆ ಎಂದು ಹೇಳುತ್ತಾರೆ.


ಕಡಿಮೆ ಖರ್ಚಿನಲ್ಲಿ ತನ್ನ ಕನಸಿನ ಪಯಣವನ್ನು ನನಸಾಗಿಸಿದ ಹರ್ಷೇಂದ್ರ ಯಾವುದೇ ಲಾಡ್ಜ್ ನಲ್ಲಿ ತಂಗಿಲ್ಲ. ರಾತ್ರಿ ವೇಳೆ ಪೆಟ್ರೋಲ್ ಬಂಕ್, ಡಾಬ, ಪೊಲೀಸ್ ಠಾಣೆ, ರೈಲ್ವೆ ಸ್ಟೇಷನ್, ದೇವಸ್ಥಾನ, ಮಠಗಳಲ್ಲಿ ಉಳಿದುಕೊಂಡಿದ್ದಾರೆ. ಮಹಾರಾಷ್ಟ್ರ, ಪಂಜಾಬ್ ಗಳಲ್ಲಿ ಕೆಲವು ಮನೆಯವರು ಅತಿಥಿ ಸತ್ಕಾರ ನೀಡಿದ್ದಾರೆ. ಹೋಟೆಲ್ಗಳಲ್ಲಿ ಲಘು ಊಟ ಉಪಹಾರ ಸೇವಿಸಿದ್ದಾರೆ. ದಿನಕ್ಕೆ 5 ಲೀಟರ್ ನೀರು ಸೇವಿಸಿ 12 ಗಂಟೆ ನಡಿಗೆ ಎಂಟು ಗಂಟೆ ನಿದ್ರೆ ಮಾಡುತ್ತಿದ್ದೆ, ಹೆಚ್ಚು ಭಾರದ ಲಗೇಜ್ ಇಲ್ಲದೇ ಕೆಲವೇ ಬಟ್ಟೆಗಳು ಮ್ಯಾಟ್ ಬೆಡ್‌ಶೀಟ್ ಮತ್ತು ನೀರಿನ ಬಾಟಲ್ ಮತ್ತು ಪ್ರಾರ್ಥಮಿಕ ಚಿಕಿತ್ಸೆಗಳನ್ನು ಹೊಂದಿರುತ್ತಾರೆ ಹರ್ಷೇಂದ್ರ.

- Advertisement -
spot_img

Latest News

error: Content is protected !!