Saturday, June 6, 2026
Homeಕರಾವಳಿಬೈಕ್ ನಲ್ಲಿ ತೆರಳುತ್ತಿದ್ದ ಯುವಕರಿಗೆ ಢಿಕ್ಕಿ ಹೊಡೆದ ಅಪರಿಚಿತ-ಚೂರಿಯಲ್ಲಿ ಚುಚ್ಚಿ ಕೊಲೆಯತ್ನ!..

ಬೈಕ್ ನಲ್ಲಿ ತೆರಳುತ್ತಿದ್ದ ಯುವಕರಿಗೆ ಢಿಕ್ಕಿ ಹೊಡೆದ ಅಪರಿಚಿತ-ಚೂರಿಯಲ್ಲಿ ಚುಚ್ಚಿ ಕೊಲೆಯತ್ನ!..

- Advertisement -
- Advertisement -

ಉಳ್ಳಾಲ:ಇಲ್ಲಿನ ಕುತ್ತಾರು ಕೃಷ್ಣಕೋಡಿಯಲ್ಲಿ ತಡರಾತ್ರಿ ಬೈಕ್ ನಲ್ಲಿ ತೆರಳುತ್ತಿದ್ದ ಇಬ್ಬರು ಯುವಕರಿಗೆ ಹಿಂಬದಿಯಿಂದ ಢಿಕ್ಕಿ ಹೊಡೆದ ಅಪರಿಚಿತ ತಂಡವೊಂದು, ಚೂರಿಯಲ್ಲಿ ಚುಚ್ಚಿ ಕೊಲೆಯತ್ನ ನಡೆಸಿದ ಘಟನೆ ವರದಿಯಾಗಿದೆ.

ಸೇವಂತಿಗುಡ್ಡೆ ನಿವಾಸಿ ಆದಿತ್ಯ (23) ಮತ್ತು ಪಂಡಿತ್ ಹೌಸ್ ನಿವಾಸಿ ಪವನ್ (27) ಮೇಲೆ ಕೊಲೆಯತ್ನ ನೆಡೆದಿದ್ದು ಗಾಯಗೊಂಡಿದ್ದಾರೆ ಚರ್ಚೊಂದರಲ್ಲಿ ಕ್ಯಾಟರಿಂಗ್ ನಲ್ಲಿ ಕೆಲಸಕ್ಕಿದ್ದ ಸಹೋದರನನ್ನು ಕರೆ ತರಲು ತೆರಳುವಾಗ ಘಟನೆ ನಡೆದಿದೆ. ಯುವಕರಿಗೆ ಹಿಂಬದಿಯಿಂದ ಢಿಕ್ಕಿ ಹೊಡೆದಾಗ ಅವರು ರಸ್ತೆಗೆಸೆಯಲ್ಪಟ್ಟಿದ್ದಾರೆ. ಆ ಬಳಿಕ ಇಬ್ಬರಿಗೂ ಚೂರಿಯಿಂದ ಇರಿದ ಆಗಂತುಕರು ಸ್ಥಳದಿಂದ ಪರಾರಿಯಾಗಿದ್ದಾರೆ. ಈ ಹಿಂದೆ ಆರ್ ಎಸ ಎಸ್ ಮುಖಂಡನ ಹತ್ಯೆ ಯತ್ನ ಜಾಗದಲ್ಲಿ ನಡೆದಿದ್ದು ಕಳವಳ ಮೂಡಿಸಿದೆ.

- Advertisement -

Latest News

error: Content is protected !!