Thursday, May 16, 2024
Homeಕರಾವಳಿಕಲ್ಲಡ್ಕದಲ್ಲಿ ಕೈ ಕೊಟ್ಟ ಲಿಫ್ಟ್: ಎರಡು ಗಂಟೆ ಲಿಫ್ಟ್ ನೊಳಗೆ ಬಾಕಿಯಾದ ಬಾಲಕಿಯರು

ಕಲ್ಲಡ್ಕದಲ್ಲಿ ಕೈ ಕೊಟ್ಟ ಲಿಫ್ಟ್: ಎರಡು ಗಂಟೆ ಲಿಫ್ಟ್ ನೊಳಗೆ ಬಾಕಿಯಾದ ಬಾಲಕಿಯರು

spot_img
- Advertisement -
- Advertisement -

ಕಲ್ಲಡ್ಕ ಶಾಪಿಂಗ್ ಕಾಂಪ್ಲೆಕ್ಸ್ ಗೆ ಖರೀದಿಗಾಗಿ ಬಂದಿದ್ದ  ನಾಲ್ಕು ಜನ ಬಾಲಕಿಯರು ಲಿಫ್ಟ್ ಮೂಲಕ ಕೆಳಗೆ ಇಳಿಯುತ್ತಿದ್ದ ವೇಳೆ ತಾಂತ್ರಿಕ ದೋಷದಿಂದ 2 ಗಂಟೆ ಲಿಫ್ಟ್ ನಲ್ಲೇ ಬಾಕಿಯಾದ ಘಟನೆ ಕಲ್ಲಡ್ಕದಲ್ಲಿ ನಿನ್ನೆ ನಡೆದಿದೆ.

ಕಲ್ಲಡ್ಕದ ಗಂಗಾಧರ ವಸತಿ ಸಂಕೀರ್ಣದಲ್ಲಿ ಈ ಘಟನೆ ನಡೆದಿದೆ. ಈ ವಸತಿ ಸಂಕೀರ್ಣದಲ್ಲಿ ಲತೀಫ್ ಅವರು ವಾಸವಿದ್ದು ಲತೀಫ್ ಅವರ ಪುತ್ರಿ ಹಾಗೂ ಅವರ ಮನೆಗೆ ಬಂದ ಸಂಬಂಧಿಕರ ಮೂವರು ಬಾಲಕಿಯರು ಅಂಗಡಿಗೆಂದು ಲಿಫ್ಟ್ ಮೂಲಕ ತೆರಳಿದ್ದ ವೇಳೆ ತಾಂತ್ರಿಕ ದೋಷದಿಂದ ಲಿಫ್ಟ್ ಅರ್ಧದಲ್ಲಿ ಕೆಟ್ಟು ನಿಂತಿದೆ.

ವಿಷಯ ತಿಳಿಯುತ್ತಿದ್ದಂತೆ ವಸತಿ ಸಂಕೀರ್ಣದ ಮತ್ತು ಸ್ಥಳೀಯರು ಅಗಮಿಸಿ ಕೆಲವು ಹೊತ್ತಿನ ಪ್ರಯತ್ನದ ಬಳಿಕ ಲಿಫ್ಟ್ ನ ಬಾಗಿಲನ್ನು ಕಬ್ಬಿಣದ ಸಲಕರಣೆಗಳ ಸಹಾಯದಿಂದ ಸ್ವಲ್ಪ ತೆರೆದು ಟೇಬಲ್ ಫ್ಯಾನ್ ಒಂದನ್ನು ಇಡುವ ಮೂಲಕ ಒಳಗೆ ಗಾಳಿ ಹೋಗುವಂತೆ ಮಾಡಿದ್ದಾರೆ. ಬಳಿಕ ಸ್ಥಳೀಯರ ಮಾಹಿತಿಯಂತೆ ಬಂಟ್ವಾಳ ನಗರ ಠಾಣೆಯ ಎಸ್ಸೈ ಅವಿನಾಶ್ ಮತ್ತು ಪೊಲೀಸರು, ಅಗ್ನಿ ಶಾಮಕ ದಳದವರು ಸ್ಥಳಕ್ಕೆ ಆಗಮಿಸಿದರು. ಇದರ ಜೊತೆಗೆ ಸಂಕೀರ್ಣದ ನಿವಾಸಿಗಳು ಲಿಫ್ಟ್ ನಿರ್ಮಾಣ ಕಂಪೆನಿಯ ತಾಂತ್ರಿಕ ಸಿಬ್ಬಂದಿಗೂ ಮಾಹಿತಿ ನೀಡಿದ್ದಾರೆ.

ಕೊನೆಗೆ ಸ್ಥಳೀಯ ಜನರು ಕಬ್ಬಿಣದ ಸಲಕರಣೆಗಳನ್ನು ಉಪಯೋಗಿಸಿ ಲಿಫ್ಟ್ ನ ಬಾಗಿಲನ್ನು ಒಡೆದಿದ್ದು ಸಂಜೆ 5 ಗಂಟೆಯ ಸುಮಾರಿಗೆ ಲಿಫ್ಟ್ ನಲ್ಲಿ ಬಾಕಿಯಾದ ನಾಲ್ವರು ಬಾಲಕಿಯರನ್ನೂ 7:30ರ ವೇಳೆಗೆ ಹೊರ ತೆಗೆಯಲಾಯಿತು. ಸುಮಾರು ಎರಡೂವರೆ ಗಂಟೆಗಳ ಕಾಲ ಬಾಲಕಿಯರು ಲಿಫ್ಟ್ ನಲ್ಲಿ ಬಾಕಿಯಾದರು.

ಬಾಲಕಿಯರು ಲಿಫ್ಟ್ ನಲ್ಲಿ ಬಾಕಿಯಾದ ವಿಷಯ ತಿಳಿದು ಕಲ್ಲಡ್ಕ ಪರಿಸರದಲ್ಲಿ ಕೆಲವು ಹೊತ್ತು ಆತಂಕದ ವಾತಾವರಣ ನಿರ್ಮಾಣವಾಯಿತು. ಅಲ್ಲದೆ ವಿಷಯ ತಿಳಿಯುತ್ತಿದ್ದಂತೆ ವಸತಿ ಸಂಕೀರ್ಣಕ್ಕೆ ಸ್ಥಳೀಯ ಜನರು ದೌಡಾಯಿಸಿದ್ದು ಸುರಕ್ಷಿತವಾಗಿ ಬಾಲಕಿಯರು ಹೊರಬರುತ್ತಿದ್ದಂತೆ ಸೇರಿದ ಜನರು ನಿಟ್ಟುಸಿರು ಬಿಟ್ಟರು.

- Advertisement -
spot_img

Latest News

error: Content is protected !!